Passport News: ಪಾಸ್ ಪೋರ್ಟ್ ಗೆ ಅಪ್ಲೈ ಮಾಡೋದು ಈಗ ಸುಲಭ, ಏನೆಲ್ಲ ಡಾಕ್ಯುಮೆಂಟ್ಸ್ ಬೇಕು ಅನ್ನೋ ಸಮಗ್ರ ಮಾಹಿತಿ !

Information about which documents are required to apply for a passport

Passport News: ನೀವು ವಿದೇಶ ಪ್ರಯಾಣದ ಹವಣಿಕೆಯಲ್ಲಿದ್ದೀರಾ ? ವಿದೇಶ ಪ್ರಯಾಣದ ಯೋಗ ಯಾರಿಗೆ ಯಾವಾಗ ಬರುತ್ತೆ ಅಂತ ಹೇಳಲು ಆಗುವುದಿಲ್ಲ. ಕೆಲವು ಸಲ ಅನಿರೀಕ್ಷಿತವಾಗಿ ನಮಗೆ ವಿದೇಶಿ ಪ್ರವಾಸದ ಭಾಗ್ಯ ಒದಗಿ ಬರುವುದುಂಟು. ಅಂತಹಾ ಸುಸಂದರ್ಭದಲ್ಲಿ ನಮಗೆ ಹೊರ ದೇಶಕ್ಕೆ ಹೋಗಲು ಅನುಮತಿ ನೀಡುವ ಪ್ರಮಾಣ ಪತ್ರವೇ ಪಾಸ್ ಪೋರ್ಟ್ !

ಪಾಸ್ ಪೋರ್ಟ್ (Passport News) ಅನ್ನು ಮಾಡಲು ಕೆಲವು ಅಗತ್ಯ ದಾಖಲಾತಿಗಳು ನಿಮ್ಮಲ್ಲಿ ಇರಬೇಕು. ಈ ಅಗತ್ಯ ಡಾಕ್ಯುಮೆಂಟ್ಗಳನ್ನು ರೆಡಿ ಮಾಡಿದ ಮೇಲೆ ಪಾಸ್ಪೋರ್ಟ್ ಸೇವಾ ಕೇಂದ್ರದಲ್ಲಿ ಅಥವಾ ಆನ್ಲೈನ್ ನಲ್ಲಿ ನೀವು ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಬಹುದು. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಪಾಸ್ಪೋರ್ಟ್ ಪಡೆಯಲು ಎರಡು ರೀತಿಯ ಅವಕಾಶಗಳಿವೆ. ಒಂದು, ಸಾಮಾನ್ಯ ಅರ್ಜಿ ಮತ್ತು ಇನ್ನೊಂದು ತ್ವರಿತಗತಿಯ ತತ್ಕಾಲ್ ಸೌಲಭ್ಯ. ತತ್ಕಾಲ್ ಅರ್ಜಿಗಳು ಅರ್ಜಿ ಸಲ್ಲಿಸಲು ಹೆಚ್ಚಿನ ಮೊತ್ತ ಭರಿಸಬೇಕಾಗುತ್ತದೆ. ನಿಮ್ಮ ದಾಖಲಾತಿಗಳ ಆಧಾರದಲ್ಲಿ ಅತ್ಯಂತ ಜಾಗರೂಕರಾಗಿ ಅರ್ಜಿ ಭರ್ತಿ ಮಾಡಬೇಕಿರುತ್ತದೆ. ಒಂದು ಸಣ್ಣ ಸ್ಪೆಲ್ಲಿಂಗ್ ಮಿಸ್ಟೇಕ್ ಆದರೂ ಪಾಸ್ಪೋರ್ಟ್ ಪಡೆಯಲು ನೀವು ಸಲ್ಲಿಸಿದ ಅರ್ಜಿ ರಿಜೆಕ್ಟ್ ಆಗಬಹುದು. ನೀವು ಅರ್ಜಿ ಸಲ್ಲಿಸಿ ಆನ್ಲೈನ್ ನಲ್ಲಿ ಫೀಸ್ ಪೇ ಮಾಡಿದ ಮೇಲೆ ನಿಮಗೆ ಪಾಸ್ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಲು ಒಂದು ದಿನಾಂಕವನ್ನು ನೀಡಲಾಗುತ್ತದೆ. ಆ ದಿನ ನೀವು ನಿಮ್ಮ ಅಗತ್ಯ ಒರಿಜಿನಲ್ ಡಾಕ್ಯುಮೆಂಟುಗಳು (ಕೆಳಗಿರುವ 2 ಪಟ್ಟಿಯಲ್ಲಿ ಯಾವುದೇ ಒಂದೊಂದು ಡಾಕ್ಯುಮೆಂಟ್ಸ್ , ಮತ್ತು ಆಧಾರ್ ಕಾರ್ಡ್) ಜೊತೆಗೆ ಕನಿಷ್ಠ ಎರಡು ಪಾಸ್ ಪೋರ್ಟ್ ಸೈಜ್ ನ ಫೋಟೋ ಒಯ್ಯಬೇಕು. ಜೊತೆಗೆ ನಿಮ್ಮ ಲಗತ್ತಿಸುವ ಡಾಕ್ಯುಮೆಂಟುಗಳ ಜೆರಾಕ್ಸ್ ಅನ್ನು ಕೂಡ ಒಯ್ಯಬೇಕಾಗುತ್ತದೆ. ತದನಂತರ, ಪಾಸ್ಪೋರ್ಟ್ ಆಫೀಸಿನಲ್ಲಿ ಅಗತ್ಯ ವೆರಿಫಿಕೇಷನ್ ನಡೆದು ಆನಂತರ ಎಲ್ಲವೂ ಸರಿ ಎನಿಸಿದ ಪಕ್ಷದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ವೆರಿಫಿಕೇಷನ್ ಗಾಗಿ ನಿಮ್ಮ ಅರ್ಜಿಯನ್ನು ಕಳಿಸಲಾಗುತ್ತದೆ. ಮುಂದಕ್ಕೆ ಪೊಲೀಸ್ ವೆರಿಫಿಕೇಶನ್ ಆಗಿ ಬಂದ ನಂತರ ಕೆಳಗಿರುವ ಬಳಿಕ ನಿಮಗೆ ಪಾಸ್ಪೋರ್ಟ್ ಅನ್ನು ನೀಡಲಾಗುತ್ತದೆ. ಈಗ ನಾವು ಪಾಸ್ಪೋರ್ಟ್ ಅನ್ನು ಪಡೆಯಲು ಯಾವ ಅಗತ್ಯ ದಾಖಲಾತಿಗಳ ಅಗತ್ಯ ಇದೆ ಎನ್ನುವುದನ್ನು ತಿಳಿಯೋಣ.

ಪಾಸ್ಪೋರ್ಟ್ ಮಾಡಲು ಯಾವ ಡಾಕ್ಯುಮೆಂಟ್ ಗಳು ಬೇಕು ?
1) ವಿಳಾಸದ ಪುರಾವೆ – ಅಡ್ರೆಸ್ ಪ್ರೂಫ್
2) ಹುಟ್ಟಿದ ದಿನಾಂಕದ ಬಗೆಗಿನ ಪ್ರೂಫ್

ವಿಳಾಸದ ಪುರಾವೆ:
ಅಡ್ರೆಸ್ ಪ್ರೂಫ್ ಗೆ ಸ್ವೀಕಾರಾರ್ಹ ದಾಖಲೆಗಳ ಪಟ್ಟಿ ಇಲ್ಲಿದೆ:
1.ನೀರಿನ ಬಿಲ್
2. ದೂರವಾಣಿ (ಲ್ಯಾಂಡ್‌ಲೈನ್ ಅಥವಾ ಪೋಸ್ಟ್ ಪೇಯ್ಡ್ ಮೊಬೈಲ್ ಬಿಲ್)
3. ವಿದ್ಯುತ್ ಬಿಲ್
4. ಆದಾಯ ತೆರಿಗೆ ಮೌಲ್ಯಮಾಪನ ಆದೇಶ
5. ಚುನಾವಣಾ ಆಯೋಗದ ಫೋಟೋ ಗುರುತಿನ ಚೀಟಿ
6. ಗ್ಯಾಸ್ ಸಂಪರ್ಕದ ಪುರಾವೆ
7. ಲೆಟರ್ ಹೆಡ್‌ನಲ್ಲಿ ಪ್ರತಿಷ್ಠಿತ ಕಂಪನಿಗಳ ಉದ್ಯೋಗದಾತರಿಂದ ಪ್ರಮಾಣಪತ್ರ
8. ಸಂಗಾತಿಯ ಪಾಸ್‌ಪೋರ್ಟ್ ಪ್ರತಿ (ಅರ್ಜಿದಾರರ ಹೆಸರನ್ನು ಪಾಸ್‌ಪೋರ್ಟ್ ಹೊಂದಿರುವವರ ಸಂಗಾತಿಯೆಂದು ನಮೂದಿಸುವ ಕುಟುಂಬದ ವಿವರಗಳನ್ನು ಒಳಗೊಂಡಂತೆ ಮೊದಲ ಮತ್ತು ಕೊನೆಯ ಪುಟ), (ಅರ್ಜಿದಾರರ ಪ್ರಸ್ತುತ ವಿಳಾಸವು ಸಂಗಾತಿಯ ಪಾಸ್‌ ಪೋರ್ಟ್‌ನಲ್ಲಿ ನಮೂದಿಸಲಾದ ವಿಳಾಸಕ್ಕೆ ಹೊಂದಿಕೆಯಾಗುತ್ತದೆ)
9. ಅಪ್ರಾಪ್ತರ ಸಂದರ್ಭದಲ್ಲಿ ಪೋಷಕರ ಪಾಸ್‌ಪೋರ್ಟ್ ಪ್ರತಿ (ಮೊದಲ ಮತ್ತು ಕೊನೆಯ ಪುಟ)
10. ಆಧಾರ್ ಕಾರ್ಡ್
11.ಬಾಡಿಗೆ ಒಪ್ಪಂದ
12. ಚಾಲನೆಯಲ್ಲಿರುವ ಬ್ಯಾಂಕ್ ಖಾತೆಯ ಫೋಟೋ ಪಾಸ್‌ ಬುಕ್ (ಪರಿಶಿಷ್ಟ ಸಾರ್ವಜನಿಕ ವಲಯದ ಬ್ಯಾಂಕ್‌ ಗಳು, ಪರಿಶಿಷ್ಟ ಖಾಸಗಿ ವಲಯದ ಭಾರತೀಯ ಬ್ಯಾಂಕ್‌ ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಗಳು ಮಾತ್ರ)

ಹುಟ್ಟಿದ ದಿನಾಂಕದ ಪುರಾವೆ:
ಸ್ವೀಕಾರಾರ್ಹ ದಾಖಲೆಗಳ ಪಟ್ಟಿ ಇಲ್ಲಿದೆ:
1. ಜನನ ಮತ್ತು ಮರಣಗಳ ರಿಜಿಸ್ಟ್ರಾರ್ ಅಥವಾ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಯಾವುದೇ ಇತರ ನಿಗದಿತ ಪ್ರಾಧಿಕಾರದಿಂದ ನೀಡಿದ ಜನನ ಪ್ರಮಾಣಪತ್ರ, ಭಾರತದಲ್ಲಿ ಜನಿಸಿದ ಮಗುವಿನ ಜನನವನ್ನು ನೋಂದಾಯಿಸಲು ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ, 1969 ರ ಅಡಿಯಲ್ಲಿ ಅಧಿಕಾರ ಪಡೆದವರು
2. ವರ್ಗಾವಣೆ/ಶಾಲಾ ಬಿಡುವಿಕೆ/ಮೆಟ್ರಿಕ್ಯುಲೇಷನ್ ಪ್ರಮಾಣಪತ್ರವನ್ನು ಶಾಲೆಯು ಕೊನೆಯ ಬಾರಿಗೆ ಹಾಜರಾದ/ಮನ್ನಣೆ ಪಡೆದ ಶೈಕ್ಷಣಿಕ ಮಂಡಳಿಯಿಂದ ನೀಡಲಾಗಿದೆ
3. ವಿಮಾ ಪಾಲಿಸಿಯನ್ನು ಹೊಂದಿರುವವರ DOB ಹೊಂದಿರುವ ಸಾರ್ವಜನಿಕ ಜೀವ ವಿಮಾ ನಿಗಮಗಳು/ಕಂಪನಿಗಳು ನೀಡಿದ ಪಾಲಿಸಿ ಬಾಂಡ್
4. ಅರ್ಜಿದಾರರ ಸೇವಾ ದಾಖಲೆಯ ಸಾರಾಂಶದ ಪ್ರತಿ (ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಮಾತ್ರ) ಅಥವಾ ವೇತನ ಪಿಂಚಣಿ ಆದೇಶ (ನಿವೃತ್ತ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ), ಆಡಳಿತದ ಅಧಿಕಾರಿ/ಪ್ರಭಾರ ಅಧಿಕಾರಿಯಿಂದ ಸರಿಯಾಗಿ ದೃಢೀಕರಿಸಲಾಗಿದೆ/ಪ್ರಮಾಣೀಕರಿಸಲಾಗಿದೆ. ಸಂಬಂಧಪಟ್ಟ ಸಚಿವಾಲಯ/ಅರ್ಜಿದಾರರ ಇಲಾಖೆ
5. ಆಧಾರ್ ಕಾರ್ಡ್/ ಇ-ಆಧಾರ್
6. ಭಾರತದ ಚುನಾವಣಾ ಆಯೋಗವು ನೀಡಿದ ಚುನಾವಣಾ ಫೋಟೋ ಗುರುತಿನ ಚೀಟಿ (EPIC).
7. ಆದಾಯ ತೆರಿಗೆ ಇಲಾಖೆ ನೀಡಿದ ಪ್ಯಾನ್ ಕಾರ್ಡ್
8. ಸಂಬಂಧಪಟ್ಟ ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯಿಂದ ನೀಡಲಾದ ಚಾಲನಾ ಪರವಾನಗಿ
9. ಅರ್ಜಿದಾರರ DOB ಅನ್ನು ದೃಢೀಕರಿಸುವ ಸಂಸ್ಥೆಯ ಅಧಿಕೃತ ಲೆಟರ್ ಹೆಡ್‌ನಲ್ಲಿ ಅನಾಥಾಶ್ರಮ/ಮಕ್ಕಳ ಆರೈಕೆ ಮನೆಯ ಮುಖ್ಯಸ್ಥರು ನೀಡಿದ ಘೋಷಣೆ

ಇವೆಲ್ಲಾ ಪಾಸ್ ಪೋರ್ಟ್ ಸೇವಾ ಕೇಂದ್ರ ನಿಗದಿಪಡಿಸಿದ ಅಡ್ರೆಸ್ ಪ್ರೂಫ್ ಮತ್ತು ಹುಟ್ಟಿದ ದಿನಾಂಕದ ಡಾಕ್ಯುಮೆಂಟಗಳು. ಎಲ್ಲವೂ ಸರಿಯಾದ ವೇಗದಲ್ಲಿ ನಡೆದರೆ ಒಂದು ತಿಂಗಳ ಒಳಗೆ ನಿಮಗೆ ಪಾಸ್ಪೋರ್ಟ್ ಲಭ್ಯವಾಗುತ್ತದೆ. ಕೆಲವು ಬಾರಿ ಪೊಲೀಸ್ ವೆರಿಫಿಕೇಶನ್‍ನ ಕಾರಣದಿಂದ ಡಿಲೆ ಆಗುವುದುಂಟು ಆ ಸಂದರ್ಭಗಳಲ್ಲಿ ನೀವು ಖುದ್ದಾಗಿ ಸ್ಟೇಷನ್ ಗೆ ಹೋಗಿ ಫಾಲೋ ಅಪ್ ಮಾಡಿದರೆ ಕೆಲಸ ಸಲೀಸು.

ಇದನ್ನು ಓದಿ: CM Siddaramaiah: ಸಿಎಂ ಸಿದ್ದರಾಮಯ್ಯನಿಗೆ ಖಡಕ್ ವಾರ್ನಿಂಗ್ ನೀಡಿದ ಕೇಂದ್ರ ಸಚಿವ ಶೇಖಾವತ್- ಯಾಕಾಗಿ ಗೊತ್ತೆ?!

Leave A Reply

Your email address will not be published.