Winter Skin care: ಚಳಿಗಾಲದಲ್ಲಿ ಚರ್ಮವನ್ನು ಹೀಗೆ ಆರೈಕೆ ಮಾಡಿ- ಸದಾ ಫಳ ಫಳ ಹೊಳೆಯುವಂತೆ ಕಾಪಾಡಿ !!

Winter Skin care Take care of your skin in winter

Winter Skin care: ಚರ್ಮದ ಆರೈಕೆಯು ಎಲ್ಲಾ ಕಾಲದಲ್ಲಿಯೂ ಮುಖ್ಯ, ಅದರಲ್ಲೂ ಚಳಿಗಾಲದಲ್ಲಿ (Winter Skin care) ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ. ಚಳಿಗಾಲದಲ್ಲಿ ಮುಖ, ತುಟಿ ಒಡೆಯುವುದು, ಚರ್ಮವು ಕಾಂತಿ ಕಳೆದುಕೊಳ್ಳುತ್ತದೆ. ಚರ್ಮದಲ್ಲಿ ಸುಕ್ಕು ಕಾಣಿಸಿಕೊಳ್ಳುತ್ತದೆ, ಶುಷ್ಕತೆಯನ್ನು ಸಹ ಉಂಟು ಮಾಡುತ್ತದೆ. ಆದ್ದರಿಂದ ಚರ್ಮಕ್ಕೆ ಸರಿಯಾದ ಪೋಷಣೆ ಮುಖ್ಯವಾಗುತ್ತದೆ. ಚಳಿಗಾಲದಲ್ಲಿ ಚರ್ಮವನ್ನು ಹೀಗೆ ಆರೈಕೆ ಮಾಡಿ, ಸದಾ ಫಳ ಫಳ ಹೊಳೆಯುವಂತೆ ಕಾಪಾಡಿ !!

ಹೈಡ್ರೇಟಿಂಗ್ ಮಾಸ್ಕ್‌ಗಳನ್ನು ಹಾಕಿ: ಹೈಡ್ರೇಟಿಂಗ್ ಮಾಸ್ಕ್‌ಗಳು ತ್ವಚೆಯ ಆರೈಕೆಗೆ ಪ್ರಮುಖ ಆಯ್ಕೆಯಾಗಿವೆ. ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆಗಳು ಸಾಮಾನ್ಯವಾಗಿದೆ. ಅದಕ್ಕೆ ಹೈಡ್ರೇಟಿಂಗ್ ಮಾಸ್ಕ್​ಗಳು ಸಹಾಯ ಮಾಡುತ್ತದೆ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ನಿಮ್ಮ ಚರ್ಮವನ್ನು ಪರಿಣಾಮಕಾರಿಯಾಗಿ ತೇವಗೊಳಿಸಬಹುದು.

ಸನ್‌ಸ್ಕ್ರೀನ್‌: ಚಳಿಗಾಲದಲ್ಲಿ ಪ್ರತಿ ಬಾರಿ ನೀವು ಮನೆಯಿಂದ ಹೊರ ಹೋಗುವ ಸಮಯದಲ್ಲಿ ಸನ್ ಸ್ಕ್ರೀನ್ ಉಪಯೋಗಿಸಿ. ಏಕೆಂದರೆ, ಮಂಜು ಮುಸುಕಿದ ವಾತಾವರಣದಲ್ಲೂ ಕೂಡ ನಿಮ್ಮ ಚರ್ಮಕ್ಕೆ ಸೂರ್ಯನ ವಿಕಿರಣಗಳಿಂದ ರಕ್ಷಣೆ ಅಗತ್ಯವಿರುತ್ತದೆ.ಇದು ನಿಮ್ಮ ಚರ್ಮವನ್ನು ಯುವಿ ಕಿರಣಗಳಿಂದ ರಕ್ಷಿಸುತ್ತದೆ. ಚಳಿಗಾಲದ ಸೂರ್ಯನ ಕಿರಣದಿಂದ ಕೂಡಾ ನಿಮ್ಮ ಚರ್ಮಕ್ಕೆ ಹಾನಿಯುಂಟಾಗಬಹುದು. ಆದ್ದರಿಂದ ತಪ್ಪದೆ ಹೊರಗೆ ಹೋಗುವಾಗ ಸನ್‌ಸ್ಕ್ರೀನ್‌ ಬಳಸಿ.

ಮಾಯಿಶ್ಚರೈಸರ್‌: ವರ್ಷದ ಎಲ್ಲಾ ಋತುವಿನಲ್ಲೂ ನಿಮ್ಮ ಚರ್ಮದ ಮಾಯಿಶ್ಚರೈಸರ್‌ ಬಹಳ ಅಗತ್ಯ. ಚರ್ಮವನ್ನು ಒಣಗಲು ಬಿಡದೆ ಯಾವಾಗಲೂ ತೇವಾಂಶ ಇರುವಂತೆ ನೋಡಿಕೊಳ್ಳಿ. ಮಾರುಕಟ್ಟೆಯಲ್ಲಿ ದೊರೆಯುವ ನಕಲಿ ಮಾಯಿಶ್ಚರೈಸರ್‌ಗಳನ್ನು ಬಿಟ್ಟು ಒಳ್ಳೆ ಗುಣಮಟ್ಟದ ಮಾಯಿಶ್ಚರೈಸರ್‌ ಕೊಂಡು ತಂದು ಬಳಸಿ.
ನಿಮ್ಮ ಚರ್ಮಕ್ಕೆ ಅನುಗುಣವಾಗಿ ವೈದ್ಯರಿಂದ ಕೇಳಿ ತಿಳಿದುಕೊಂಡು ಸರಿಯಾದ ವಿಂಟರ್ ಮಾಯಿಸ್ಚರೈಸರ್ ಅನ್ನೇ ಉಪಯೋಗಿಸಿ.
ಆದಷ್ಟು ನೀವು ಬಳಸುವ ಮೊಯಿಶ್ಚರೈಸರ್ ನಲ್ಲಿ ಹ್ಯುಮೆಕ್ಟೆಂಟ್ ಗಳಾದ ಸೆರಮೈಡ್ ಗಳು, ಗ್ಲಿಸರಿನ್, ಸೋರ್ಬಿಟೊಲ್ ಮತ್ತು ಹ್ಯಾಲುರೋನಿಕ್ ಆಮ್ಲ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಇವುಗಳು ಚರ್ಮದ ತೇವಾಂಶವನ್ನು ಬಹಳ ಚೆನ್ನಾಗಿ ಕಾಪಾಡುತ್ತವೆ.

ಲಿಪ್‌ ಬಾಮ್‌ : ಚಳಿಗಾಲದಲ್ಲಿ ತುಟಿ ಕೂಡಾ ಬೇಗ ಒಣಗುತ್ತದೆ. ಒಣಗುವುದಕ್ಕಿಂತಲೂ ತುಟಿ ಒಡೆಯುತ್ತದೆ ಅದಕ್ಕೆ ತುಟಿಗೆ ಪ್ರತಿ ರಾತ್ರಿ ಲಿಪ್‌ ಬಾಮ್‌ ಹಚ್ಚಿರಿ. ಲಿಪ್ ಬಾಮ್ ತುಟಿ ಒಣಗದಂತೆ ನೋಡಿಕೊಳ್ಳುತ್ತದೆ. ಆದರೆ, ಉತ್ತಮ ಪ್ರಾಡಕ್ಟ್ ಬಳಸಿ. ಜೊತೆಗೆ ನಿಮ್ಮ ಚರ್ಮ ಡ್ರೈ ಆಗುವುದನ್ನು ತಪ್ಪಿಸಲು ಮೃದುವಾದ , ಚರ್ಮಕ್ಕೆ ತೇವಾಂಶ ನೀಡುವ ಕ್ಲೆನ್ಸರ್‌ ಖರೀದಿಸಿ ತನ್ನಿ.

ಹೈಡ್ರೇಷನ್‌: ಚಳಿಗಾಲದಲ್ಲಿ ಕೂಡಾ ನೀವು ಹೆಚ್ಚು ನೀರು ಸೇವಿಸುವುದು ಬಹಳ ಮುಖ್ಯ. ಇದರಿಂದ ನಿಮ್ಮ ಚರ್ಮ ಹೊರಭಾಗದಿಂದ ಮಾತ್ರವಲ್ಲದೆ, ಒಳಭಾಗದಿಂದ ಕೂಡಾ ಸುಂದರವಾಗಿರುತ್ತದೆ. ದೇಹದ ಕಲ್ಮಷ, ಬೆವರು ಮೂತ್ರದ ಮೂಲಕ ಹೊರ ಬರುತ್ತದೆ.

 

ಇದನ್ನು ಓದಿ: Ration Card: ರೇಷನ್ ಕಾರ್ಡ್’ದಾರರಿಗೆ ರಾತ್ರೋ ರಾತ್ರಿ ಬಂತು ಸಖತ್ ಗುಡ್ ನ್ಯೂಸ್ !!

Leave A Reply

Your email address will not be published.