ECI: ಚುನಾವಣಾ ಆಯೋಗದಿಂದ ಲೋಕಸಮರಕ್ಕೆ ಸಿದ್ಧತೆ – ಲೋಕಸಭಾ ಚುನಾವಣೆಗೆ ದಿನಾಂಕ ಫಿಕ್ಸ್ ?!

ECI: ಭಾರತದ ಚುನಾವಣಾ ಆಯೋಗವು (ECI) ಇಂದು ಐದು ಚುನಾವಣೆಗೆ ಒಳಪಡುವ ರಾಜ್ಯಗಳನ್ನು ಹೊರತುಪಡಿಸಿ ದೇಶಾದ್ಯಂತ 2024 ರ ಜನವರಿ 1 (SSR2024) ಅನ್ನು ಉಲ್ಲೇಖಿಸಿ ಮತದಾರರ ಪಟ್ಟಿಗಳ ವಿಶೇಷ ಸಾರಾಂಶ ಪರಿಷ್ಕರಣೆಯನ್ನು ಪ್ರಾರಂಭಿಸಿದೆ. ಚುನಾವಣಾ ಆಯೋಗದಿಂದ ಲೋಕಸಮರಕ್ಕೆ ಸಿದ್ದತೆ ನಡೆದಿದೆ.

ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಮತದಾರರ ಪಟ್ಟಿ
ಪರಿಷ್ಕರಣೆ ಕಾರ್ಯವನ್ನು ಇಸಿಐ ಆರಂಭಿಸಿದೆ. 1 ಜನವರಿ 2024 ರೊಳಗೆ 18 ವರ್ಷಗಳನ್ನು ಪೂರ್ಣಗೊಳಿಸಿದ ಯುವಕರು ಮತದಾರರ ಪಟ್ಟಿಯಲ್ಲಿ ತಮ್ಮನ್ನು ನೋಂದಾಯಿಸಲು ಅರ್ಜಿ ಸಲ್ಲಿಸಬಹುದಾಗಿದೆ.

ಆಯೋಗವು ಡಿಸೆಂಬರ್ 26 ರೊಳಗೆ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಮಾಡಲಿದ್ದು, ಮುಂದಿನ ವರ್ಷದ ಜನವರಿ 5 ರಂದು ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ ನಡೆಯಲಿದೆ. ನಾಗಾಲ್ಯಾಂಡ್‌ನಲ್ಲಿ ಮತದಾರರ ಪಟ್ಟಿಗಳ ಪ್ರಕಟಣೆಯನ್ನು 10 ಜನವರಿ 2024 ರಂದು ಮಾಡಲಾಗುತ್ತದೆ. ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 9 ಕೊನೆಯ ದಿನಾಂಕವಾಗಿದೆ.

 

ಇದನ್ನು ಓದಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ತಲೆಮರೆಸಿಕೊಂಡಿರುವ ಮೂವರ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿದ ಎನ್.ಐ.ಎ.

Leave A Reply

Your email address will not be published.