Satish jarakiholi: ಮೈಸೂರು ಹೊರಟಿದ್ದ ಕಾಂಗ್ರೆಸ್’ನ 20 ಶಾಸಕರು ದುಬೈ ಪ್ರವಾಸಕ್ಕೆ ರೆಡಿಮಾಡಿದ ಸತೀಶ್ ಜಾರಕಿಹೊಳಿ ?! ಛಿದ್ರ ಛಿದ್ರವಾಗುತ್ತಾ ಕರ್ನಾಟಕದ ‘ಹಸ್ತ’ ?!

Karnataka politics news Satish jarakiholi takes 20 MLA s to Dubai trip

Satish jarakiholi: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸಿ, ಬಹುಮತದಿಂದ ಅಧಿಕಾರಕ್ಕೆ ಬಂದು ರಾಜ್ಯ ಕಾಂಗ್ರೆಸ್ ನಲ್ಲಿ ಇದೀಗ ಯಾಕೋ ಬಿರುಕು ಮೂಡಿದಂತೆ ಕಾಣುತ್ತಿದೆ. ಇಡೀ ರಾಜ್ಯ ಹಾಗೂ ರಾಜ್ಯ ಸರ್ಕಾರ ದಸರಾ ಹಬ್ಬವನ್ನು ಸಂಭ್ರಮಿಸಿ ರೆಸ್ಟ್ ಮೂಡಲ್ಲಿರುವಾಗ ಕಾಂಗ್ರೆಸ್ಸಿನ ಪ್ರಬಲ ನಾಯಕನಾಗಿರುವ ಸತೀಶ್ ಜಾರಕಿಹೊಳಿ(Satish jarakiholi)ಯವರು ಸುಮಾರು 20 ಶಾಸಕರನ್ನು ಒಟ್ಟುಗೂಡಿಸಿ ದುಬೈ ತೆರಳೋ ಪ್ಲಾನ್ ಮಾಡುತ್ತಿದ್ದು, ಸಚಿವರ ಈ ನಡೆ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಹೌದು, ದಸರಾ ಹಬ್ಬದ ಆರಂಭದ ವೇಳೆ ಕೆಪಿಸಿಸಿ ಕಾರ್ಯಧ್ಯಕ್ಷ, ಸಚಿವ ಸತೀಶ್ ಜಾರಕಿಹೊಳಿ 20ಕ್ಕೂ ಹೆಚ್ಚು ಶಾಸಕರನ್ನು ಒಗ್ಗೂಡಿಸಿ ಪ್ರವಾಸಕ್ಕೆ ಪ್ಲ್ಯಾನ್ ಮಾಡಿದ್ದ ಸುದ್ದಿ ಕಾಂಗ್ರೆಸ್​ನಲ್ಲಿ ಕಂಪನ ಸೃಷ್ಟಿಸಿತ್ತು. ಇದು ಗಮನಕ್ಕೆ ಬರುತ್ತಿದ್ದಂತೆಯೇ ಹೈಕಮಾಂಡ್​ ಎಚ್ಚೆತ್ತುಕೊಂಡು ಜಾರಕಿಹೊಳಿ ಅವರಿಗೆ ಖಡಕ್ ಸೂಚನೆ ರವಾನಿಸಿ ಈ ಸಮಯದಲ್ಲಿ 20ಕ್ಕೂ ಹೆಚ್ಚು ಶಾಸಕರನ್ನು ಒಗ್ಗೂಡಿಸಿಕೊಂಡು ಹೋಗುವುದು ಬೇಡ, ಕೂಡಲೇ ಕ್ಯಾನ್ಸಲ್ ಮಾಡುವಂತೆ ಹೇಳಿ ತಡೆದಿತ್ತು. ಆದರೀಗ ಮತ್ತೆ ಅಲರ್ಟ್ ಆಗಿರುವ ಜಾರಕಿಹೊಳಿ ಅವರು ಮೈಸೂರು ಪ್ರವಾಸ ಕೊಕ್ಕೆ ಹಾಕಿದ ಡಿಕೆಶಿಗೆ(DK shivakumar) ತಿರುಗೇಟು ಕೊಡಲು ಸಾಹುಕಾರ್ ತಂಡ ಸಜ್ಜಾಗಿದೆ. ಮೈಸೂರು(Mysore) ಪ್ರವಾಸ ವಂಚಿತ ಶಾಸಕರನ್ನು ಸತೀಶ್‌ ಜಾರಕಿಹೊಳಿ ದುಬೈಗೆ ಕರೆದೊಯ್ಯುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ.

ಅಂದಹಾಗೆ ದುಬೈ ಪ್ರವಾಸದ(Dubai Trip) ಬಗ್ಗೆ ಸತೀಶ್ ಜಾರಕಿಹೊಳಿ ಆಪ್ತ ಶಾಸಕ ಆಸೀಫ್ ಸೇಠ್ ಸುಳಿವು ಕೊಟ್ಟಿದ್ದು ಅವರ ಹೇಳಿಕೆಯನ್ನು ಸತೀಶ್ ಜಾರಕಿಹೊಳಿ ಕೂಡ ಖಚಿತಪಡಿಸಿದ್ದಾರೆ. ಮಾಧ್ಯಮಗಳಲ್ಲಿ‌ ವಿವಾದ ಸೃಷ್ಟಿ ಆಗುತ್ತೆಂದು ತಕ್ಷಣವೇ ಸತೀಶ್ ಜಾರಕಿಹೊಳಿ ಅಲರ್ಟ್ ಆಗಿದ್ದು, ಮಾಜಿ ಶಾಸಕರನ್ನು ದುಬೈಗೆ ಕರೆದೊಯ್ಯುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಪಕ್ಷದೊಳಗೆ ಮೂರನೇ ಬಣ ಸೃಷ್ಟಿಗೆ ಹಾತೊರೆಯುತ್ತಿರುವ ಸತೀಶ್ ಜಾರಕಿಹೊಳಿ, ಸಮಾನ‌ ಮನಸ್ಕ ಶಾಸಕರನ್ನು ಒಳಗೊಂಡಂತೆ ಮೂರನೇ ಬಣ ಸೃಷ್ಟಿಗೆ ‌ಚಿಂತನೆ ನಡೆಸಿದಂತೆ ತೋರುತ್ತಿದೆ.

ಇನ್ನು ಈ ಹಿಂದೆ ಮೈಸೂರು ಪ್ರವಾಸದ ಕುರಿತು ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ, ನಾಡಹಬ್ಬ ದಸರಾ ಹಬ್ಬ ಹಿನ್ನೆಲೆ ಮೈಸೂರಿಗೆ ಕೆಲವರು ಹೋಗಬೇಕು ಅಂತ ಮಾತನಾಡಿದ್ದೆವು. ದಸರಾ ನೋಡೋಕೆ ಬನ್ನಿ ಅಂತ ಅಲ್ಲಿನ ಶಾಸಕರೂ ಹೇಳ್ತಿದ್ದರು. ಹೀಗಾಗಿ ಕೆಲವು ನಮ್ಮ ಲೈಕ್ ಮೈಂಡೆಡ್ ಶಾಸಕರು ಒಟ್ಟಿಗೆ ಸೇರಿ ಅಲ್ಲಿಗೆ ಹೋಗಬೇಕು ಅಂದುಕೊಂಡಿದ್ವಿ. ಅಲ್ಲದೆ ಕೆಲವು ಶಾಸಕರು ನಮ್ಮನ್ನು ಎಲ್ಲಾದ್ರೂ ಟ್ರಿಪ್ ಕರೆದುಕೊಂಡು ಹೋಗಿ ಅಂತಾ ಕೇಳಿದ್ರು. ಹಾಗೆ ಸಮಾನ ಮನಸ್ಕರರು ಸಹ ಎಲ್ಲಾದರೂ ಹೋಗಬೇಕು ಅಂತ ಹೇಳುತ್ತಿದ್ದರು. ಈಗ ದಸರಾ ಹಬ್ಬ ಬೇಡ ಎಂದು ಸುಮ್ಮನಾಗಿದ್ದೇವೆ. ಮುಂದೆ ಹೋಗಬೇಕು ಅಂತಾದ್ರೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಹೋಗುತ್ತೇವೆ. ಯಾವುದೇ ಬಣ ಗಿಣ ಅಂತೇನಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೀಗ ಯಾರ ಗಮನಕ್ಕೂ ಬಾರದೆ ಈ ಪ್ಲಾನ್ ಮಾಡಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: JDS: ದೇವೇಗೌಡರ ಜೆಡಿಎಸ್ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೇ ಬಂತು ಕುತ್ತು – ಧಳಪತಿಗಳಿಗೆ ಯಾರೂ ಊಹಿಸದಂತ ಶಾಕ್ ಕೊಟ್ಟ ಸಿಎಂ ಇಬ್ರಾಹಿಂ !!

Leave A Reply

Your email address will not be published.