LPG Gas Subsidy: ಆಧಾರ್ ಕಾರ್ಡ್ ಇದ್ದೂ ನೀವು ಈ ಕೆಲಸ ಮಾಡಿಲ್ಲ ಅಂದ್ರೆ ಗ್ಯಾಸ್ ಸಬ್ಸಿಡಿ ಹಣ ಬರುವುದಿಲ್ಲ !!

If you don't do this you won't get gas subsidy even if you have Aadhaar card

LPG Gas Subsidy: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ (Pradhan Mantri Ujjwala Yojana) ಬಡ ಕುಟುಂಬಗಳ ಮಹಿಳಾ ಸಬಲೀಕರಣಕ್ಕಾಗಿ ಉಚಿತ ಎಲ್.ಪಿ.ಜಿ LPG ವಿತರಣೆ ಮಾಡಲಾಗುತ್ತದೆ. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ ಸಿಲಿಂಡರ್ (LPG gas Subsidy) ನ ಬೆಲೆಯನ್ನು 200 ರೂಪಾಯಿಗಳಷ್ಟು ಸರ್ಕಾರ ಕಡಿತಗೊಳಿಸಿದೆ.
ಸದ್ಯ ಆಧಾರ್ ಕಾರ್ಡ್ ಇದ್ದೂ ನೀವು ಈ ಕೆಲಸ ಮಾಡಿಲ್ಲ ಅಂದ್ರೆ ಗ್ಯಾಸ್ ಸಬ್ಸಿಡಿ ಹಣ ಬರುವುದಿಲ್ಲ !!

ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi ji) ಅವರೊಳಗೊಂಡ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಗ್ಯಾಸ್ ಸಬ್ಸಿಡಿ ಪಡೆದುಕೊಳ್ಳುವವರು ಈ ನಿಯಮ ಪಾಲಿಸಲೇಬೇಕು. ಕೇಂದ್ರ ಮೋದಿಜಿ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇನ್ನೂರು ರೂಪಾಯಿಗಳ ಸಬ್ಸಿಡಿ ಅನ್ನು 300 ರೂಪಾಯಿಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಅಂದ್ರೆ 603 ರೂಪಾಯಿಗಳಿಗೆ ಉಜ್ವಲ ಯೋಜನೆಯ ಫಲಾನುಭವಿಗಳು ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಫಲಾನುಭವಿಗಳು ಸಬ್ಸಿಡಿ ಪಡೆದುಕೊಳ್ಳುತ್ತಾರೆ ಹಾಗೂ ಉಚಿತ ಗ್ಯಾಸ್ ಕನೆಕ್ಷನ್ ಕೂಡ ಸಿಗುತ್ತದೆ. ಆದರೆ, ಇನ್ನು ಸಬ್ಸಿಡಿ ಹಣ ಪಡೆದುಕೊಳ್ಳಬೇಕು ಅಂದ್ರೆ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ (bank account and Aadhar Card link) ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪ್ರಯೋಜನ ಸಿಗುವುದಿಲ್ಲ. ಫಲಾನುಭವಿಗಳು ಗ್ಯಾಸ್ ಸಬ್ಸಿಡಿ ಹಣ ಪಡೆದುಕೊಳ್ಳದೆ ವಂಚಿತರಾಗಬಹುದು.

 

ಇದನ್ನು ಓದಿ: Good News for Farmers: ರೈತರಿಗೆ ಖುಷಿಯ ವಿಚಾರ- ರಸಗೊಬ್ಬರ ಸಬ್ಸಿಡಿ ಕುರಿತು ಸರ್ಕಾರ ಕೊಡ್ತು ಬಿಗ್ ಅಪ್ಡೇಟ್ !

Leave A Reply

Your email address will not be published.