Water Tank Cleaning: ಮನೆಯ ಸಿಂಟ್ಯಾಕ್ಸ್ ಕ್ಲೀನ್ ಮಾಡಲು ಹರಸಾಹಸ ಪಡ್ತೀರಾ ?! ಈ ಸಿಂಪಲ್ ಟ್ರಿಕ್ಸ್ ಬಳಸಿ ಸ್ವಚ್ಛ ಮಾಡಿದ್ರೆ ಸ್ವಲ್ಪನೂ ಕೊಳೆ ಉಳಿಯಲ್ಲ !

Water Tank Cleaning: ನೀವು ಮನೆಯ ಸಿಂಟ್ಯಾಕ್ಸ್ ಕ್ಲೀನ್ ಮಾಡಲು (Water Tank Cleaning) ಹರಸಾಹಸ ಪಡ್ತೀರಾ ?! ಈ ಸಿಂಪಲ್ ಟ್ರಿಕ್ಸ್ ಬಳಸಿ ಸ್ವಚ್ಛ ಮಾಡಿದ್ರೆ ಸ್ವಲ್ಪನೂ ಕೊಳೆ ಉಳಿಯಲ್ಲ ! ನೀವು ಟ್ಯಾಂಕ್ ಅನ್ನು ಸರಿಯಾಗಿ ಸ್ವಚ್ಛಗೊಳಿಸಿದರೆ ಮತ್ತು ಸೋಂಕುನಿವಾರಕವನ್ನು ಅಥವಾ ಬ್ಲೀಚಿಂಗ್ ಪೌಡರ್ ಅನ್ನು ವರ್ಷಕ್ಕೊಮ್ಮೆ ಹಾಕಿದ್ರೆ ನೀವು ವರ್ಷವಿಡೀ ಸುರಕ್ಷಿತವಾಗಿ ನೀರನ್ನು ಕುಡಿಯಬಹುದು. ನಿಯಮಿತವಾಗಿ ಬಳಸಬಹುದು. ಇಲ್ಲಿದೆ ವಾಟರ್ ಟ್ಯಾಂಕ್ ಕ್ಲೀನ್ ಮಾಡುವ ಸುಲಭ ವಿಧಾನ!!!.

ಮೊದಲು ಟ್ಯಾಂಕ್​ನಲ್ಲಿರುವ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ. ನಂತರ ಕೆಳಗೆ ಉಳಿದಿರುವ ನೀರನ್ನು ಮಗ್​ನಿಂದ ಕ್ಲೀನ್ ಖಾಲಿ ಮಾಡಲು ಪ್ರಯತ್ನಿಸಿ. ನೀರು ಖಾಲಿ ಮಾಡಿದ ನಂತರ ಟ್ಯಾಂಕ್​ನ ಒಳಭಾಗವನ್ನು ಒಣ ಬಟ್ಟೆಯಿಂದ ಸಂಪೂರ್ಣವಾಗಿ ಒರೆಸಿ. ಇನ್ನು ಟ್ಯಾಂಕ್​ನ ಗಾತ್ರ ಚಿಕ್ಕದಾಗಿದ್ದರೆ ಅದನ್ನು ತಲೆಕೆಳಗಾಗಿ ಹಾಕಿದರೆ ನೀರು ಸಂಪೂರ್ಣವಾಗಿ ಖಾಲಿಯಾಗುತ್ತದೆ. ಒಣಗಿದ ನಂತರ ಟ್ಯಾಂಕ್ ಒಣಗಲು ಸ್ವಲ್ಪ ಸಮಯದವರೆಗೆ ಮುಚ್ಚಳವನ್ನು ಬಿಡಿ.

ಟ್ಯಾಂಕ್​ನ ಗಾತ್ರಕ್ಕೆ ಅನುಗುಣವಾಗಿ ಬಿಸಿ ನೀರು ಅಥವಾ ಡಿಟರ್ಜೆಂಟ್ ಪುಡಿಯಿಂದ ಸ್ವಚ್ಛಗೊಳಿಸಬಹುದು. ಮೊದಲು ಲಿಕ್ವಿಡ್ ಡಿಟರ್ಜೆಂಟ್‌ನಲ್ಲಿ ನೈಲಾನ್ ಬ್ರಷ್ ಅಥವಾ ಸ್ಪಂಜಿನೊಂದಿಗೆ ಟ್ಯಾಂಕ್‌ನ ಒಳಭಾಗವನ್ನು ಚೆನ್ನಾಗಿ ಸ್ಕ್ರಬ್ ಮಾಡಿ. ಬ್ರಷ್‌ನಿಂದ ಅಡ್ಡಲಾಗಿ ಚೆನ್ನಾಗಿ ಉಜ್ಜಿ. ಶುಚಿಗೊಳಿಸಿದ ನಂತರ ಟ್ಯಾಂಕ್​ ಅನ್ನು ಕ್ರಿಮಿನಾಶಕಗೊಳಿಸಲು, ಮೊದಲು ಮುಕ್ಕಾಲು ಭಾಗದಷ್ಟು ಶುದ್ಧ ನೀರಿನಿಂದ ತುಂಬಿಸಿ. ನಂತರ ಅದಕ್ಕೆ ಸಾಕಷ್ಟು ಕ್ಲೋರಿನ್ ಬ್ಲೀಚ್ ಸೇರಿಸಿ. ಟ್ಯಾಂಕ್ ತೊಳೆದ ನಂತರ ಬಟ್ಟೆಯಿಂದ ಒರೆಸಿ. ಟ್ಯಾಂಕ್ ಅನ್ನು ಮತ್ತೆ ಒಣಗಿಸಿ.

ಇದನ್ನು ಓದಿ: Washing Machine : ಮಹಿಳೆಯರೇ, ಕೇವಲ 999ರೂ ಗೆ ಹೊಸ ವಾಷಿಂಗ್ ಮಷೀನ್- ಅಂಗಡಿ ಮುಂದೆ ಜನವೋ ಜನ !!

Leave A Reply

Your email address will not be published.