Monthly pension: ಈ ಯೋಜನೆಯಡಿ ಪ್ರತೀ ತಿಂಗಳಿಗೆ 210ರೂ ಪಾವತಿಸಿ, ಕೊನೆಗೆ 5,000 ಪಿಂಚಣಿ ಪಡೆದು ಆನಂದಿಸಿ!!
Business news personal finance invest 210 rupees and get Monthly pensions of rupees 5000
Monthly Pension Scheme: ನಿಮಗೆ ಎಷ್ಟು ಪಿಂಚಣಿ ಬೇಕು ಅಥವಾ ಮಾಸಿಕ ಆದಾಯ ಎಷ್ಟು ಬೇಕು ಎಂದು ಗುರಿ ನಿಗದಿಪಡಿಸಿಕೊಂಡು ಅದಕ್ಕೆ ತಕ್ಕಂತೆ ಹಣಕಾಸು ಹೂಡಿಕೆ ಮಾಡಬೇಕು. ಈ ರೀತಿ ಹೂಡಿಕೆ ಆಯ್ಕೆಗಳು ಹಲವಿವೆ. ಕೇಂದ್ರ ಸರ್ಕಾರವು ಜನರಿಗೆ ಹಲವು ರೀತಿಯ ಅನುಕೂಲಕರ ಪಿಂಚಣಿ ಯೋಜನೆಗಳನ್ನು (monthly Pension Scheme) ಜಾರಿಗೊಳಿಸಿದೆ. ಸದ್ಯ ನೀವು 40 ವರ್ಷ ವಯಸ್ಸಿನವರಾಗಿದ್ದು, ತಿಂಗಳಿಗೆ 5000 ರೂಪಾಯಿ ಪಿಂಚಣಿ ಪಡೆಯಲು ಇಲ್ಲಿದೆ ಉತ್ತಮ ಯೋಜನೆ.
ನೀವು ಒಂದು ನಿಗದಿತ ಮೊತ್ತವನ್ನು ಹೂಡಿಕೆ ಮಾಡಿ, ಪ್ರತಿ ತಿಂಗಳು ಗ್ಯಾರಂಟಿ ಪಿಂಚಣಿಯನ್ನು ನಿರೀಕ್ಷೆ ಮಾಡುತ್ತಿದ್ದರೆ ಅಂಥವರಿಗೆ ಸೂಕ್ತವೆನಿಸುವ ಯೋಜನೆಯೇ ಅಟಲ್ ಪಿಂಚಣಿ ಯೋಜನೆ (ಎಪಿವೈ).
ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯನ್ನು 2015-16ರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು, ವೃದ್ಧಾಪ್ಯದಲ್ಲಿ ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುವರಿಗೆ ಆರ್ಥಿಕ ಬೆಂಬಲವನ್ನು ಒದಗಿಸುವ ಯೋಜನೆ ಇದಾಗಿದೆ. ಆ ಮೂಲಕ ಕೇಂದ್ರ ಸರ್ಕಾರವು ನಿವೃತ್ತಿ ಜೀವನಕ್ಕೆ ಬೇಕಾಗಿ ಹಣದ ಉಳಿತಾಯ ಮಾಡುವತ್ತ ಉದ್ಯೋಗಸ್ಥರಿಗೆ ಉತ್ತೇಜನವನ್ನು ನೀಡುತ್ತಿದೆ.
ಇನ್ನೊಂದೆಡೆ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರನ್ನು ಸ್ವಯಂ ಪ್ರೇರಿತರಾಗಿ ಉಳಿತಾಯ ಮಾಡುವ ಮೂಲಕ ತಮ್ಮ ನಿವೃತ್ತಿ ಬದುಕನ್ನು ನೆಮ್ಮದಿಯಿಂದ ಕಳೆಯುವುದಕ್ಕೆ ಈ ಯೋಜನೆ ಪ್ರೇರಣೆಯಾಗಿದೆ. ರಾಷ್ಟ್ರೀಯ ಪಿಂಚಣಿ ಸಿಸ್ಟಮ್(ಎನ್‌ಪಿಎಸ್)ನಡಿ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ(ಪಿಎಫ್‌ಆರ್‌ಡಿಎ)ವು ಈ ಯೋಜನೆಯನ್ನು ನಿರ್ವಹಿಸುತ್ತಿದೆ.
ನೀವು 5000 ರೂಪಾಯಿ ಪಿಂಚಣಿ ಪಡೆಯಲು, ಈ ಯೋಜನೆಯಡಿ ಆರಂಭದಲ್ಲಿ ಹೂಡಿಕೆ ಮಾಡುವಾಗ, ಮಾಸಿಕ ಕಡಿಮೆ ಮೊತ್ತದ ಹಣವನ್ನು ಪಾವತಿಸಬೇಕು. ಯಾರಾದರೂ 18 ವರ್ಷಕ್ಕೆ ಈ ಯೋಜನೆಗೆ ಸೇರುವುದಾದರೆ ಮಾಸಿಕವಾಗಿ 210 ರೂಪಾಯಿಯನ್ನು ಪಾವತಿಸಿ ಭವಿಷ್ಯದಲ್ಲಿ ತಿಂಗಳಿಗೆ 5000 ರೂಪಾಯಿ ಪಿಂಚಣಿ ಖಾತರಿಯನ್ನು ಪಡೆದುಕೊಳ್ಳಬಹುದು.
40 ವರ್ಷದಲ್ಲಿ ಈ ಯೋಜನೆಯಡಿ ಹೂಡಿಕೆ ಮಾಡುವವರು 60 ವರ್ಷದವರೆಗೆ ತಿಂಗಳಿಗೆ 1454 ರೂಪಾಯಿಯನ್ನು ಪಾವತಿಸುವುದರಿಂದ 5000 ರೂಪಾಯಿ ಪಿಂಚಣಿಯನ್ನು ಪಡೆಯಬಹುದು. ಇದು ಕೂಡ ನಿವೃತ್ತಿ ಬಳಿಕ ಮಾಸಿಕ 5000 ರೂಪಾಯಿ ಪಿಂಚಣಿಯನ್ನು ನೀಡುತ್ತದೆ. ಒಂದು ವೇಳೆ ತಿಂಗಳಿಗೆ 1454 ರೂಪಾಯಿ ಪಾವತಿಸಲು ಸಾಧ್ಯವಾಗದಿದ್ದರೆ ಅಂಥವರಿಗೂ ಈ ಯೋಜನೆಯಡಿ ಬೇರೆ ರೀತಿಯ ಆಯ್ಕೆಗೆ ಅವಕಾಶವಿದೆ.
ಅಂದರೆ 40 ವರ್ಷದವರು ತಿಂಗಳಿಗೆ 291 ರೂಪಾಯಿಯನ್ನು ಪಾವತಿಸಿ ಮಾಸಿಕ 1000 ರೂಪಾಯಿ ಪಿಂಚಣಿ ಪಡೆಯಬಹುದು. ಹಾಗೆಯೇ, 582 ರೂಪಾಯಿ ಪಾವತಿಸಿ ತಿಂಗಳಿಗೆ 2000 ರೂಪಾಯಿ ಪಿಂಚಣಿ ಪಡೆಯಬಹುದು. ಒಂದು ವೇಳೆ ತಿಂಗಳಿಗೆ 3000 ರೂಪಾಯಿ ಪಿಂಚಣಿ ಪಡೆಯಬೇಕಿದ್ದರೆ 60 ವರ್ಷದವರೆಗೆ 873 ರೂಪಾಯಿ ಪಾವತಿಸಬೇಕು. ಅದೇ ರೀತಿ ಮಾಸಿಕ 1164 ರೂಪಾಯಿ ಪಾವತಿಸಿದರೆ ತಿಂಗಳಿಗೆ 4000 ರೂಪಾಯಿ ಪಿಂಚಣಿ ಪಡೆಯಬಹುದು.
60 ವರ್ಷ ತಲುಪಿದ ಬಳಿಕ ಮೂಲಕ ಪಿಂಚಣಿ ಮೊತ್ತವು ಬರಲಾರಂಭಿಸುತ್ತದೆ. ಚಂದಾದಾರರು ಮೃತಪಟ್ಟರೆ ಅಂಥಹ ಸಂದರ್ಭದಲ್ಲಿ ಸಂಗಾತಿಯು ಹಾಗೂ ಇಬ್ಬರೂ ಮೃತಪಟ್ಟರೆ (ಚಂದಾದಾರರು ಮತ್ತು ಸಂಗಾತಿ), ಪಿಂಚಣಿ ನಿಧಿಯು ನಾಮಿನಿಗೆ ನೀಡಲಾಗುತ್ತದೆ.
ಆದರೆ ಈ ಯೋಜನೆಯಡಿ 60 ವರ್ಷಕಿಂತ ಮೊದಲೇ ಅದರಿಂದ ಹೊರಬರುವುದಕ್ಕೆ ಅಥವಾ ಯೋಜನೆಯನ್ನು ಕೊನೆಗೊಳಿಸುವುದಕ್ಕೆ ಅನುಮತಿಸುವುದಿಲ್ಲ. ಚಂದಾದಾರರು ಮೃತಪಟ್ಟರೆ, ಅನಾರೋಗ್ಯ ಸೇರಿದಂತೆ ಕೆಲವು ಸಂದರ್ಭದಲ್ಲಿ ಮಾತ್ರ ಯೋಜನೆಯನ್ನು ರದ್ದುಗೊಳಿಸಬಹುದು.
ಮುಖ್ಯವಾಗಿ ಯಾವುದೇ ಮಾನ್ಯತೆಯ ಸೊಷಿಯಲ್ ಸೆಕ್ಯುರಿಟಿ ಯೋಜನೆಗೆ ಒಳಪಡದವರು ಹಾಗೂ ತೆರಿಗೆ ಪಾವತಿಯನ್ನು ಮಾಡದ ಚಂದಾದಾರರಿಗೆ ಕೇಂದ್ರದ ಕೊಡುಗೆ ಕೂಡ ಲಭಿಸುತ್ತದೆ. ಅಟಲ್ ಪಿಂಚಣಿ ಯೋಜನೆಯು 18ರಿಂದ 40 ವರ್ಷದೊಳಗಿನ ಎಲ್ಲ ಭಾರತೀಯ ನಾಗರಿಕರಿಗೆ ಲಭ್ಯವಿರುತ್ತದೆ.
ಇದನ್ನೂ ಓದಿ: ಈ ದೇವಳದಲ್ಲಿ ಮಹಿಳೆಯರೇ ಅರ್ಚಕರು, ಅವರದ್ದೇ ಕಾರುಬಾರು – ಮುಟ್ಟಾದರೂ ನಿಲ್ಲಲ್ಲ ಇಲ್ಲಿ ಪೂಜೆ