Shocking News: ಅಯ್ಯೋ, ಮಟ ಮಟ ಪ್ರತ್ಯಕ್ಷವಾದ ಪ್ರೇತ – ಪುತ್ತೂರಿನ ಜನ ಫುಲ್ ಕಂಗಾಲು ! ಏನಿದು ವಿಷಯ ?!

ದೆವ್ವ, ಭೂತ, ಪ್ರೇತಾತ್ಮ ಅಂದ್ರೆ ಒಂದು ಬಾರಿ ಎದೆ ಢಗ್ ಅನ್ನೋದು ಸಹಜವೇ ಅಲ್ವಾ? ಅದಕ್ಕೇ ರಾತ್ರಿಯ ಹೊತ್ತು ಜನರು ಓಡಾಡಲು ತುಂಬಾ ಭಯ ಪಡುತ್ತಾರೆ. ಅಂತದ್ರಲ್ಲಿ ಇಲ್ಲಿ ಒಂದು ಕಡೆ ಮಟ ಮಟ ಬಿಸಿಲಿನಲ್ಲಿ ಪ್ರೇತದ ಕಾಟ ಶುರುವಾಗಿದೆ. ನಿಜ, ನೀವು ನಂಬಲೇ ಬೇಕು. ಏನು? ಎಲ್ಲಿ? ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೆಳಗಿದೆ ಓದಿ.

ಹೌದು, ಪುತ್ತೂರಿನಲ್ಲಿ ಮಟ ಮಟ ಬಿಸಿಲಿನಲ್ಲಿ ಪ್ರೇತವೊಂದು ಓಡಾಡುತ್ತಾ ಇದೆ. ಆದರೆ, ಇದರಿಂದ ಜನ ಭಯ ಆಗ್ತಾ ಇಲ್ಲ ಬದಲಿಗೆ ಮನರಂಜನೆಯನ್ನು ತೆಗೆದುಕೊಳ್ತಾ ಇದ್ದಾರೆ. ಅರೇ! ಪ್ರೇತದಿಂತ ಮನರಂಜನೆನಾ? ಎಸ್, ಮೊದಲಿಗೆ ಭಯ ಆದ್ರೂ ಮತ್ತೆ ಆಗಿಲ್ಲ. ಯಾಕೆ ಗೊತ್ತಾ? ಕರಾವಳಿಯಲ್ಲಿ ಹುಲಿವೇಷ ಸಹಿತ ಯಾವುದೇ ವೇಷಗಳಿದ್ರೂ ಅವುಗಳೆಲ್ಲನೂ ಕಂಡು ಬರೋದೆ ನವರಾತ್ರಿ ಹಬ್ಬಕ್ಕೆ ಅಲ್ವಾ? ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೆಮ್ಮಾಯಿ ನಿವಾಸಿ ದಿವಾಕರ್ ದೇವಾಡಿಗ ಅವರದ್ದು ಪ್ರೇತದ ವೇಷ. ನವರಾತ್ರಿ 9 ದಿನಗಳು ಇವ್ರು ಅಸ್ಥಿಪಂಜರದಂತೆ ವೇಷ ಧರಿಸಿ ನಡುಕದ ಜೊತೆಗೆ ಒಂದಿಷ್ಟು ಮನರಂಜನೆ ಕೊಡ್ತಾರಂತೆ.

ರಾಘವೇಂದ್ರ ಸ್ವಾಮಿ, ಈಶ್ವರ, ಕೃಷ್ಣ ಹೀಗೆ ದೇವರ ವೇಷವನ್ನು ಹಾಕ್ತಾ ಇದ್ದರು. ಇವರ ವೃತ್ತಿ ಆಟೋ ಚಾಲಕ. ಆದರೆ ದೇವರ ವೇಷ ಹಾಕೋದಕ್ಕೆ ನಿರ್ಬಂಧ ಎದುರಾದ ಮೇಲೆ ಇವ್ರು ಆಯ್ಕೆ ಮಾಡಿಕೊಂಡಿದ್ದೇ ಈ ಪ್ರೇತದ ವೇಷ. ಕಳೆದ ಹನ್ನೆರಡು ವರ್ಷಗಳಿಂದ ಪ್ರೇತದ ವೇಷವನ್ನು ಹಾಕಿಕೊಂಡು ಜನರನ್ನು ಮನರಂಜಿಸುತ್ತಾ ಇದ್ದಾರೆ.

ಈ ವೇಷ ಧರಿಸುವುದಕ್ಕಾಗಿ ಅವರು ಪೊಲೀಸರ ಅನುಮತಿಯನ್ನೂ ಪಡೆಯುತ್ತಾರೆ. ಒಟ್ಟಿನಲ್ಲಿ ದಿವಾಕರ್‌ ದೇವಾಡಿಗ ಅವರ ಪ್ರೇತ ವೇಷವಂತೂ ನವರಾತ್ರಿಯ ದಿವಸಗಳಲ್ಲಿ ಪುತ್ತೂರಿನಲ್ಲಿ ಫುಲ್ ಫೇಮಸ್.
ನಿಮಗೂ ಇವರ ವೇಷ ನೋಡಬೇಕು ಅಂತ ಅನಿಸಿದ್ರೆ ಪುತ್ತೂರಿಗೆ ಭೇಟಿ ನೀಡಿ ಅದರಲ್ಲೂ ನವರಾತ್ರಿಯ ಸಮಯದಲ್ಲಿ ಹೋಗಬೇಕು, ನಿಮ್ಮ ಕಲ್ಪನೆಯ ಪ್ರೇತ ಆಲದ ಮರದ ಬೀಳಲುಗಳಿಗೆ ಜಗ್ಗಿ ಬಿದ್ದು ನೇತಾಡುವುದನ್ನು ಲೈವ್ ಆಗಿ ನೋಡಿ ಆನಂದಿಸಿ !

Leave A Reply

Your email address will not be published.