Bigg Boss Santhosh: ಹುಲಿ ಪೆಂಡೆಂಟ್‌ ಧರಿಸಿ ಬಂಧನಕ್ಕೊಳಗಾದ ವರ್ತೂರ್‌ ಸಂತೋಷ್‌! ಆರೋಪ ಸಾಬೀತಾದರೆ ಎಷ್ಟು ವರ್ಷ ಶಿಕ್ಷೆಯಾಗಬಹುದು?

entertainment news bangalore newss bigg boss santhosh and wild life protection act 1972

Bigg Boss Kannada Santhosh: ಹುಲಿ ಪೆಂಡೆಂಟ್‌ ಧರಿಸಿದಕ್ಕೆ ಬಂಧನಕ್ಕೆ ಒಳಗಾಗಿರುವ ಬಿಗ್‌ಬಾಸ್‌ ಸ್ಪರ್ಧಿ ವರ್ತೂರ್‌ ಸಂತೋಷ್‌ (Varthur Santhosh) ಅವರನ್ನು ವನ್ಯಜೀವಿ ಕಾಯಿದೆ ಅಡಿ ಬಂಧಿಸಲಾಗಿದ್ದು, ಒಂದು ವೇಳೆ ಆರೋಪ ಸಾಬೀತಾದರೆ ಎಷ್ಟು ವರ್ಷ ಅವರಿಗೆ ಶಿಕ್ಷೆಯಾಗಬಹುದು ಎಂಬ ಚರ್ಚೆಯೊಂದು ಎದ್ದಿದೆ.

 

ವನ್ಯಜೀವಿಗೆ ಸಂಬಂಧ ಪಟ್ಟ ವಸ್ತುಗಳನ್ನು ವನ್ಯಜೀವಿ ಕಾಯಿದೆ ಪ್ರಕಾರ ಇಟ್ಟುಕೊಳ್ಳಬಾರದು. ಹಾಗೆ ಇಟ್ಟುಕೊಂಡರೆ ಅಥವಾ ಬಳಕೆ ಮಾಡುತಿದ್ದರೆ ಅದನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿ, ಆರೋಪ ಸಾಬೀತಾದರೆ ಏಳು ವರ್ಷಕ್ಕೂ ಅಧಿಕ ಇರಲಿದೆ.

ಆನೆಗಳ ಕೂದಲು, ಹುಲಿ ಚರ್ಮ, ವನ್ಯಜೀವಿಗಳಿಗೆ ಸಂಬಂಧಿಸಿದ ದೇಹದ ಭಾಗಗಳು, ಹುಲಿ ದೇಹದಿಂದ ಮಾಡಿದ ಪೆಂಡೆಂಟ್‌, ಹೀಗೆ ಹಲವಾರು ಧಾರ್ಮಿಕ ಮತ್ತು ಅಲಂಕಾರಿಕ ಮಹತ್ವ ಇರುವ ವನ್ಯಜೀವಿಗಳಿಗೆ ಸಂಬಂಧಪಟ್ಟ ವಸ್ತುಗಳನ್ನು ವನ್ಯಜೀವಿ ರಕ್ಷಣಾ ಕಾಯಿದೆ 1972 (Wildlife Protection act 1972) ಇಟ್ಟುಕೊಳ್ಳಲು ಅನುಮತಿ ಇಲ್ಲ. ಇದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ.

ಹೀಗೆ ಆರೋಪ ಸಾಬೀತಾದರೆ ಮೊಕದ್ದಮೆ ದಾಖಲಿಸಿದರೆ ಒಂದು ವರ್ಷದಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ಇರಲಿದೆ. ಅಲ್ಲದೇ ಜಾಮೀನು ಕೂಡಾ ಸಿಗಲ್ಲ. ಗಂಭೀರ ಪ್ರಕರಣಕ್ಕೆ ಏಳು ವರ್ಷ, ಮಾರಾಟ ಮಾಡಿದ್ದರೆ ಹತ್ತು ವರ್ಷಗಳವರೆಗೂ ಶಿಕ್ಷೆ ಪ್ರಮಾಣ ಇರುತ್ತದೆ. ಜೊತೆಗೆ ದಂಡ ಕೂಡಾ ಇರುತ್ತದೆ. ಕನಿಷ್ಠ 50 ಸಾವಿರದಿಂದ 1 ಲಕ್ಷದವರೆಗೆ ದಂಡ ವಿಧಿಸಬಹುದು. ಇದು ಇನ್ನೂ ಅಧಿಕವಾಗಿರಬಹುದು.

ಸಂತೋಷ್‌ ಅವರು ತಮ್ಮ ತಂದೆಯವರ ಕಾಲದಿಂದ ಇದನ್ನು ಬಳಕೆ ಮಾಡಲಾಗುತ್ತಿದ್ದು, ಇದು ನಮ್ಮ ತಾತ ನಮಗೆ ಕೊಟ್ಟಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಆದರೆ ಇದನ್ನು ನೋಡಿದಾಗ ಇತ್ತೀಚೆಗೆ ಖರೀದಿ ಮಾಡಿದ ರೀತಿ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಕುರಿತು ಎಲ್ಲಾ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಮಾರಾಟ ಮಾಡಿದವರ ಮೇಲೂ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

 

ಇದನ್ನು ಓದಿ: High Salary Jobs: ಯಾವುದೇ ಪದವಿ ಪಡೆಯದಿದ್ರೂ ಇಲ್ಲಿ ಸಿಗುತ್ತೆ ಲಕ್ಷ ಲಕ್ಷ ಸಂಬಳದ ಜಾಬ್ – ಈ ಚಾನ್ಸ್ ಅಂತೂ ಮಿಸ್ ಮಾಡ್ಲೇಬೇಡಿ !!

Leave A Reply

Your email address will not be published.