Student Died: ರನ್ನಿಂಗ್‌ ರೇಸ್‌ನಲ್ಲಿ ಗೆದ್ದ ಹೈಸ್ಕೂಲ್ ವಿದ್ಯಾರ್ಥಿ, ಕೊನೆಗೆ ಅಲ್ಲೇ ಕುಸಿದು ಪ್ರಾಣ ಬಿಟ್ಟ!!!

Student Died After Winning Running Race: ʼಕ್ರಾಸ್‌ ಕಂಟ್ರಿ ಮೀಟ್‌ʼ ಎಂಬ ಸ್ಪರ್ಧೆಯಲ್ಲಿ 16ವರ್ಷದ ಹೈಸ್ಕೂಲ್‌ ವಿದ್ಯಾರ್ಥಿ ಭಾಗಿಯಾಗಿದ್ದ. ಗುಡ್ಡಗಾಡಿನ ರಸ್ತೆಯಲ್ಲಿ ಏರ್ಪಡಿಸುವ ಓಟದ ಸ್ಪರ್ಧೆ ಇದು. ಇದು ಹದಿನಾರು ವರ್ಷ ವಯಸ್ಸಿನ ಹೈಸ್ಕೂಲ್‌ ವಿದ್ಯಾರ್ಥಿಗಳಿಗಾಗಿಯೇ ಆಯೋಜಿಸಿದ ಸ್ಪರ್ಧೆ.

ಈ ಸ್ಪರ್ಧೆಯಲ್ಲಿ ಏಂಜಲ್‌ ಹರ್ನಾಂಡೆಜ್‌ ಎಂಬಾತ ಭಾಗವಹಿಸಿದ್ದ. ಇದು ಮೂರು ಮೈಲು ದೂರದ ಓಟದ ಸ್ಪರ್ಧೆ. ಈತ ಈ ಓಟದ ಸ್ಪರ್ಧೆಯಲ್ಲಿ ವೇಗವಾಗಿ ಓಡಿದ್ದಷ್ಟೇ ಅಲ್ಲ, ಪ್ರಥಮ ಬಹುಮಾನ ಕೂಡಾ ಪಡೆದ. ಆದರೆ ಓಟ ಮುಗಿದ ನಂತರ ಅಲ್ಲೇ ಕುಸಿದು ಪ್ರಾಣ ಕೂಡಾ ಬಿಟ್ಟ. ಇಂತಹ ಒಂದು ದುರದೃಷ್ಟಕರ ಘಟನೆ ನಡೆದಿದ್ದು ಅಮೆರಿಕಾದಲ್ಲಿ. ಈ ಘಟನೆ ಅ.13 ರಂದು ನಡೆದಿತ್ತು. ರೇಸ್‌ ಬಳಿಕ ಕುಸಿದು ಬಿದ್ದಿದ್ದ ಬಾಲಕ ಏಂಜಲ್‌ ಹರ್ನಾಂಡೆಜ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸ್‌ ತನಿಖೆ, ವೈದ್ಯಕೀಯ ತಜ್ಞರ ಪರಿಶೀಲನೆ ಬಳಿಕ ಹೇಳಲಾಗಿದೆ.

ಓಟದ ನಂತರ ಕುಸಿದು ಬಿದ್ದ ಏಂಜಲ್‌ಗೆ ಕಾರ್ಯಕ್ರಮದ ಸಂಘಟಕರು ನೀರು ಕುಡಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ದುರದೃಷ್ಟವಶಾತ್‌ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಉಸಿರಾಟ ಆತನದು ನಿಂತ ಹಾಗೆ ಕಾಣುತ್ತಿತ್ತು, ಹಾಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಆದರೆ ಅಲ್ಲಿ ತಲುಪುವ ವೇಳೆಗೆ ಬಾಲಕ ಮೃತ ಹೊಂದಿದ್ದಾನೆ ಎಂದು ವೈದ್ಯರು ಘೋಷಿಸಿದರು.

ಓಟದ ಸ್ಪರ್ಧೆ ಆಯೋಜನೆ ಮೊದಲು ಎಲ್ಲಾ ಸ್ಪರ್ಧಿಗಳ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಯಾರಿಗೂ ಹೃದಯ ಸಂಬಂಧಿ ಇನ್ನಿತರ ಆರೋಗ್ಯ ಸಮಸ್ಯೆ ಮೃತ ವಿದ್ಯಾರ್ಥಿ ಸೇರಿ ಯಾರಿಗೂ ಇರಲಿಲ್ಲ ಎಂದು ಹೇಳಲಾಗಿದೆ. ಬಾಲಕನ ಪೋಷಕರು ತಮ್ಮ ಮಗನ ಸಾವಿನಿಂದ ಆಘಾತದಲ್ಲಿದ್ದಾರೆ. ಆಟದಲ್ಲಿ ಗೆದ್ದ ಬಾಲಕ ಜೀವನದ ಓಟದಲ್ಲಿ ಸೋತು ಸಾವಿಗೆ ಶರಣಾಗಿದ್ದು ನಿಜಕ್ಕೂ ವಿಪರ್ಯಾಸದ ಸಂಗತಿ.

 

 

 

 

Leave A Reply

Your email address will not be published.