Gaganayana Mission: ಗಗನಯಾನ ಪರೀಕ್ಷಾರ್ಥ ಉಡಾವಣೆ ಸಕ್ಸಸ್: ಇಸ್ರೋ ಮತ್ತೊಂದು ವಿಕ್ರಮ !

National news Gaganyaan Mission: ISRO successfully launches test flight

Gaganayana mission: ಮಾನವ ಸಮೇತ ಗಗನಯಾನ ಪ್ರೋಗ್ರಾಂ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಗಗನಯಾನ TVDI ಟೆಸ್ಟ್ ನೌಕೆ ಪ್ರಯೋಗ ಯಶಸ್ವಿಯಾಗಿದೆ. ಇಸ್ರೋ ಸಂಸ್ಥೆಯ ಬಹು ಉದ್ದೇಶಿತ ಗಗನಯಾನ ಪ್ರೋಗ್ರಾಮ್ ನ ಪ್ರಯೋಗಾರ್ಥ ಯಶಸ್ವಿ ಆಗಿದೆ. ಆಂಧ್ರಪ್ರದೇಶದ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಡ್ಡಯನ ನಡೆದಿದೆ.

ಇದು ಮಾನವನನ್ನು ಆಕಾಶಕ್ಕೆ ಕಳಿಸಲು ಭಾರತ ಹಮ್ಮಿಕೊಂಡ ಗಗನಯಾನ ಪ್ರೋಗ್ರಾಂ (Gaganayana mission) ನ ಟ್ರೈನಿಂಗ್ ಕಾರ್ಯಕ್ರಮ ಆಗಿದ್ದು, ಇದು ಮೊದಲನೆಯ ಟ್ರೈನಿಂಗ್ ಆಗಿದೆ.

ಕ್ರು ಮಾಡೆಲ್ ಮತ್ತು ಕ್ರೂ ಎಸ್ಕೇಪ್ ಮಾಡೆಲ್ ಎಂಬ ಎರಡು ಗಗನಯಾನ ಪ್ರಯಾಣಿಕರ ರೀತಿಯಲ್ಲೇ ಮಾಡೆಲ್ ಗಳನ್ನು ಇವತ್ತು ಇಸ್ರೋ ಅಂತರಿಕ್ಷಕ್ಕೆ ಕಳಿಸಿದೆ. ಇದು ಮಾನವ ಸಹಿತ ಅಂತರಿಕ್ಷ ಯಾನದ ಮೊದಲ ಯಶಸ್ವಿ ಪ್ರಯೋಗ. ಈ ಮೂಲಕ ಮಾನವನನ್ನು, ಅದರಲ್ಲೂ ಮುಖ್ಯವಾಗಿ ಭಾರತೀಯನನ್ನು ಅನ್ಯಗ್ರಹಕ್ಕೆ ಕಳಿಸಲು ಭಾರತ ಪ್ರಾಯೋಗಿಕವಾಗಿ ಸಜ್ಜಾಗಿದೆ.

ಇಂದು ಹಾರಿ ಬಿಟ್ಟ ರಾಕೆಟ್ ನಲ್ಲಿ ಮಾನವರ ರೀತಿಯ ಎರಡು ಮಾಡೆಲ್ ಗಳನ್ನು ಹಾರಿ ಬಿಡಲಾಗಿತ್ತು. ಆ ಮಾನವ ಮಾಡೆಲ್ ಗಳು ರಾಕೆಟ್ ಮೂಲಕ ನೆಲದಿಂದ ಚಿಮ್ಮಿ, ನಂತರ ರಾಕೆಟ್ ನಿಂದ ಎಗರಿ ಸಮುದ್ರಕ್ಕೆ ಪ್ಯಾರಾಚೂಟ್ ಮೂಲಕ ಕೆಳಕ್ಕೆ ಇಳಿದಿವೆ. ಒಟ್ಟಾರೆ, ಈ ಪ್ರಯೋಗ ಯಶಸ್ವಿ ಆಗಿದೆ. ಸ್ಪೇಸ್ ಗೆ ಮತ್ತು ನಂತರದಲ್ಲಿ ಅನ್ಯ ಗೃಹಕ್ಕೆ ಹೊರಡಲು ಭಾರತೀಯ ರೆಡಿ ಆಗಿದ್ದಾನೆ.

ಇಂದು ಬೆಳಿಗ್ಗೆ ಪರೀಕ್ಷಾ ಉಡ್ಡಯನ ನಡೆಯಬೇಕಿದ್ದು ಹವಾಮಾನ ವೈಪರಿತ್ಯ ಕಾರಣದಿಂದ ಮುಂದಕ್ಕೆ ಹೋಗಿತ್ತು. ತದನಂತರ ಮಾಡುವ ಇಂಗ್ಲಿಷ್ ಸಣ್ಣ ಸಮಸ್ಯೆ ಕಾಣಿಸಿಕೊಂಡು ಮತ್ತೊಂದು ಗಂಟೆ ಉಡ್ಡಯನ ತಡವಾಗಿತ್ತು.

ಇದನ್ನೂ ಓದಿ: Consumer Court: ‘ಡಿ.ಕೆ ಬ್ರದರ್ಸ್’ಗೆ ಮತ್ತೊಂದು ಭಾರೀ ದೊಡ್ಡ ಆಘಾತ !! ಗ್ರಾಹಕರ ಕೋರ್ಟ್ ನಿಂದಲೂ ಬಂತು ಲಕ್ಷ, ಲಕ್ಷ ಹಣ ವಸೂಲಾತಿಯ ಆರ್ಡರ್

Leave A Reply

Your email address will not be published.