Nagpura Crime: ಹೆತ್ತ ತಾಯಿಯನ್ನೇ ಉಸಿರುಗಟ್ಟಿಸಿ ಕೊಂದು, ನಾಟಕವಾಡಿದ ಪಾಪಿ ಮಗ! ಕಾರಣವೇನು ಗೊತ್ತೇ?

Nagpura crime news son kills his mother for smartphone latest news

Nagpura Crime News: ಹೆತ್ತ ಮಗನೋರ್ವ ತನ್ನ ತಾಯಿ ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಹಣ ನೀಡಿಲ್ಲವೆಂದು ಕತ್ತು ಹಿಸುಕಿ ಕೊಲೆಗೈದ ಘಟನೆಯೊಂದು ನಾಗ್ಪುರದಲ್ಲಿ (Nagpura Crime)ನಡೆದಿದೆ.

ಕಮಲಾಬಾಯಿ ಬದ್ವೈಕ್‌ (47) ಮೃತಪಟ್ಟ ಮಹಿಳೆ. ರಮಾನಾಥ (28) ಎಂಬಾತನೇ ಕೊಲೆ ಆರೋಪಿ.

ಸ್ಮಾರ್ಟ್‌ ಫೋನ್‌ ಖರೀದಿಸಲು ತಾಯಿ ಬಳಿ ಈತ ಹಣ ಕೇಳಿದ್ದಾನೆ. ಇದಕ್ಕೆ ಕಮಲಾಬಾಯಿ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಮಗ ಚೂಡಿದಾರದ ಶಾಲ್‌ನಿಂದ ತಾಯಿಯ ಕುತ್ತಿಗೆ ಬಿಗಿದಿದ್ದು, ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದರಿಂದ ಗಾಬರಿಗೊಂಡ ರಮಾನಾಥ್‌ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೋಗುವಾಗ ತನ್ನ ಸಹೋದರ ದೀಪಕ್ ಬಳಿ ತಾಯಿ ಆರೋಗ್ಯ ಸರಿ ಇಲ್ಲ ಎಂದು ಹೇಳಿದ್ದಾನೆ. ಆದರೆ ಆಸ್ಪತ್ರೆಗೆ ದಾಖಲು ಮಾಡಿದ ನಂತರ ಚಿಕಿತ್ಸೆ ಫಲಿಸದೆ ತಾಯಿ ಮೃತಪಟ್ಟಿರುವುದಾಗಿ ಕರೆ ಮಾಡಿ ಹೇಳಿದ್ದಾನೆ.

ಇದರಿಂದ ಭಯಗೊಂಡ ಸಹೋದರ ದೀಪಕ್‌ ಅವರು ಆಸ್ಪತ್ರೆಗೆ ಬಂದಿದ್ದು, ತಾಯಿಯನ್ನು ಪರಿಶೀಲಿಸಿದಾಗ ಕತ್ತಿನ ಬಳಿ ಗಾಯದ ಕಲೆ ಕಂಡು ಬಂದಿದೆ. ಅಲ್ಲದೆ ತಾಯಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕೂಡಾ ಕಾಣೆಯಾಗಿತ್ತು. ಇದರಿಂದ ಅನುಮಾನಗೊಂಡ ದೀಪಕ್‌ ಪೊಲೀಸರಿಗೆ ಇದನ್ನು ಹೇಳಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ರಮಾನಾಥ್‌ನನ್ನು ತನಿಖೆಗೊಳಪಡಿಸಿದಾಗ ತನಗೆ ಮೊಬೈಲ್‌ ಖರೀದಿಗೆ ಅಮ್ಮನ ಹಣ ನೀಡಿಲ್ಲ ಅದಕ್ಕೆ ಕೋಪದಿಂದ ಶಾಲ್‌ನಿಂದ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಪೊಲೀಸರು ಆರೋಪಿ ರಮಾನಾಥ್‌ನನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆಗೊಳಪಡಿಸಿದ್ದಾರೆ.

ಇದನ್ನೂ ಓದಿ: ಘೋರ ದುರಂತ; ನದಿಯಲ್ಲಿ ಮುಳುಗಿ 5 ಕಾಲೇಜು ವಿದ್ಯಾರ್ಥಿಗಳ ದಾರುಣ ಸಾವು!!!

Leave A Reply

Your email address will not be published.