Hair Falling Remedy: ವಿಪರೀತ ಕೂದಲು ಉದುರುತ್ತಿದೆಯೇ?! ಇಲ್ಲಿದೆ ನೋಡಿ ಹೊಸದಾದ ರಾಮಬಾಣ

Lifestyle health news hair tips home remedies for hair falling problem

Hair Falling Remedy: ತಲೆಕೂದಲು ಉದುರುವ ಸಮಸ್ಯೆ (Hair Falling problem) ಬಹುತೇಕರಿಗೆ ಇರುತ್ತೆ. ಕೂದಲು ಉದುರಲಾರಂಭಿಸಿದಾಗ ಹೆಚ್ಚಿನವರು ಸಿಕ್ಕ ಸಿಕ್ಕ ಎಣ್ಣೆಗಳು, ಹೇರ್‌ ಪ್ಯಾಕ್‌ಗಳು, ಮಸಾಜ್‌ಗಳು, ಶಾಂಪೂ ಕಂಡೀಷನರ್‌ಗಳನ್ನೆಲ್ಲ ಟ್ರೈ ಮಾಡಿದರೂ, ಯಾವ ಎಣ್ಣೆ ಹಚ್ಚಬೇಕು, ಯಾವ ಶ್ಯಾಂಪೂ ಹಚ್ಚಿದರೆ ಕೂದಲು ಉದುರುವುದನ್ನು ತಟೆಗಟ್ಟಬಹುದು ಎಂದು ಯೋಚಿಸುತ್ತಾರೆಯೇ ವಿನಃ ಕೂದಲಿನ ಆರೋಗ್ಯಕ್ಕಾಗಿ ಯಾವ ಆಹಾರ ತಿನ್ನಬೇಕೆಂದು ಯೋಚಿಸುವುದಿಲ್ಲ.

ಆದರೆ ಕೂದಲ ಬುಡದಲ್ಲಿರುವ ಶಕ್ತಿಯನ್ನು ವೃದ್ಧಿ ಮಾಡುವ ಆಹಾರಗಳನ್ನು ಸೇವನೆ ಮಾಡುವ ಮೂಲಕ, ಕೂದಲ ಆರೋಗ್ಯವನ್ನು ಕಾಪಾಡಬಹುದು. ಹೌದು, ನೀವು ಕೆಲವು ಒಣ ಬೀಜಗಳ ಸೇವನೆಯ ಮೂಲಕ ಕೂದಲುದುರುವಿಕೆಯನ್ನು ಹೇಗೆ ತಡೆಗಟ್ಟಬಹುದು (Hair Falling Remedy).

ಒಣ ಪ್ಲಮ್:
ನೀವು ದಿನದಲ್ಲಿ 1-2 ಒಣ ಪ್ಲಮ್ ತಿನ್ನಿ. ಇದು ಕೂದಲು ಮಂದವಾಗಿ ಬೆಳೆಯುವಂತೆ ಮಾಡುವುದು. ಇದರಲ್ಲಿ ಕಬ್ಬಿಣದಂಶ ಅಧಿಕವಿದ್ದು ಕೂದಲು ಉದುರುವುದು, ಒಣ ಕೂದಲು ಈ ರೀತಿಯ ಸಮಸ್ಯೆ ಉಂಟಾಗದಂತೆ ತಡೆಯುತ್ತದೆ.

ಬಾದಾಮಿ:
ಬಾದಾಮಿಯಲ್ಲಿ ವಿಟಮಿನ್‌ ಇ, ಫ್ಯಾಟಿ ಆಸಿಡ್‌ಗಳು ಹಾಗೂ ಬಯೋಟಿನ್‌ ಹೇರಳವಾಗಿರುವುದರಿಂದ ಇದು ಕೂದಲ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಕೂದಲ ಬುಡವನ್ನು ಶಕ್ತಿಯುತವನ್ನಾಗಿ ಮಾಡುವುದಷ್ಟೇ ಅಲ್ಲದೇ ಕೂದಲು ಉದುರದಂತೆ ಕಾಪಾಡುತ್ತದೆ.

ವಾಲ್ನಟ್‌:
ವಾಲ್ನಟ್‌ನಲ್ಲಿ ಒಮೆಗಾ 3 ಕೊಬ್ಬಿನ ಆಮ್ಲ, ಬಯೋಟಿನ್, ವಿಟಮಿನ್ ಇ, ಸತುವಿನಂಶವಿದ್ದು ಇದು ಕೂದಲನ್ನು ಬಲಯುತವಾಗಿಸಿ, ಸಂರಕ್ಷಿಸುವುದಷ್ಟೇ ಅಲ್ಲ, ಆರೋಗ್ಯಯುತವಾಗಿ ಉದ್ದ ಬೆಳೆಯುವಂತೆ ಮಾಡುವಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆ. ನಿತ್ಯವೂ ಒಂದೋ ಎರಡೋ ವಾಲ್ನಟ್‌ ತಿನ್ನುವ ಮೂಲಕ ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಹೆಚ್ಚಿಸಬಹುದು. ಅಲ್ಲದೆ ಬಿಸಿಲಿನಲ್ಲಿ ಓಡಾಡಿದಾಗ ಕೂದಲು ಹಾಳಾಗದಂತೆ ತಡೆಯುತ್ತದೆ.

ಬ್ರೆಜಿಲ್‌ ನಟ್:‌
ಬ್ರೆಜಿಲ್‌ ನಟ್‌ನಲ್ಲಿ ಸೆಲೆನಿಯಮ್‌ ಎಂಬ ಖನಿಜಾಂಶವು ಹೇರಳವಾಗಿರುವುದರಿಂದ ಇದು, ಕೂದಲ ಬುಡದ ಚರ್ಮದ ಆರೋಗ್ಯಕ್ಕೆ ಉತ್ತಮ. ಇದರ ಸೇವನೆ ಕೂದಲಿಗೆ ಮತ್ತಷ್ಟು ಶಕ್ತಿಯನ್ನು ನೀಡುತ್ತದೆ.

ಗೋಡಂಬಿ:
ಗೋಡಂಬಿಯಲ್ಲಿ ಝಿಂಕ್‌ ಹೇರಳವಾಗಿದ್ದು, ಇದು, ಕೂದಲ ಬುಡದ ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಹೀಗಾಗಿ ದಿನವೂ ಒಂದೆರಡು ಗೋಡಂಬಿಯ ಸೇವನೆ ಮಾಡಿದಲ್ಲಿ ಕೂದಲು ಶಕ್ತಿಯುತವಾಗುತ್ತದೆ.

ಪಿಸ್ತಾ:
ಪಿಸ್ತಾ ಇದರಲ್ಲಿ ಬಯೋಟಿನ್‌, ಫ್ಯಾಟಿ ಆಸಿಡ್‌ಗಳು ಹಾಗೂ ವಿಟಮಿನ್‌ ಇ ಇರುವುದರಿಂದ ಇವು ಕೂದಲನ್ನು ಗಟ್ಟಿಗೊಳಿಸಿ ಆರೋಗ್ಯವಾಗಿಡುತ್ತದೆ.

ಕಪ್ಪು ಒಣ ದ್ರಾಕ್ಷಿ:
ಕಪ್ಪು ಒಣ ದ್ರಾಕ್ಷಿಯಲ್ಲಿ ನೈಸರ್ಗಿಕ ಕಬ್ಬಿಣಾಂಶವು ಹೇರಳವಾಗಿರುವುದರಿಂದ ಇದು ಕೂದಲ ಬುಡದಲ್ಲಿ ಸರಿಯಾದ ರಕ್ತ ಸಂಚಾರವಾಗುವಂತೆ ಮಾಡಿ, ಕೂದಲನ್ನು ಶಕ್ತಿಯುತಗೊಳಿಸುತ್ತದೆ.

ಖರ್ಜೂರ:
ಖರ್ಜೂರದಲ್ಲೂ ಕಬ್ಬಿಣಾಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇದು ಒಟ್ಟು ದೇಹಾರೋಗ್ಯವನ್ನು ಕಾಪಾಡಿ, ಸಾಮರ್ಥ್ಯವನ್ನು ಹೆಚ್ಚು ಮಾಡುವುದಷ್ಟೇ ಅಲ್ಲದೆ, ಕೂದಲ ಬುಡದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ಸಹಜವಾಗಿಯೇ ಕೂದಲು ಬಲಗೊಳ್ಳುತ್ತದೆ. ಕೂದಲಿನ ಉದುರುವಿಕೆ ಕಡಿಮೆಯಾಗುತ್ತದೆ.

ಇದರ ಜೊತೆಗೆ ಸೂರ್ಯಕಾಂತಿ ಬೀಜ, ಅಗಸೆ ಬೀಜ, ಶಿಯಾಬೀಜಗಳು ಇವುಗಳಲ್ಲಿ ವಿಟಮಿನ್ ಇ ಅಧಿಕವಿದ್ದು ಪ್ರತಿದಿನ 1 ಸ್ಪೂನ್‌ ತಿನ್ನುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತವೆ.

ಇದನ್ನೂ ಓದಿ: ಇಡೀ ದಿನ ನಿಮ್ಮ ದೇಹ ಬೆಚ್ಚಗಿರುತ್ತಾ ?! ಹಾಗಿದ್ರೆ ಈ ಸ್ಟೋರಿ ಒಮ್ಮೆ ನೋಡಿ

Leave A Reply

Your email address will not be published.