Poornima srinivas: ರಾಜ್ಯ ಬಿಜೆಪಿಗೆ ಭಾರೀ ದೊಡ್ಡ ಶಾಕ್ ಕೊಟ್ಟ ಮಾಜಿ ಶಾಸಕಿ – ಆ ದೃಶ್ಯಾವಳಿ ಕಂಡು ನಡುಗಿಹೋದ ನಾಯಕರು

Karnataka politics news Former mla poornima srinivas join Congress latest news

Poornima srinivas: ಕರ್ನಾಟಕ ರಾಜ್ಯದಲ್ಲಿ ಆಗುತ್ತಿರುವಂತ ರಾಜಕೀಯದ ಹಲವಾರು ಕುತೂಹಲಕಾರಿ ಬೆಳವಣಿಗೆಗಳನ್ನು ನಾಡಿನ ಜನ ವೀಕ್ಷಿಸುತ್ತಿದ್ದಾರೆ. ಅದರಲ್ಲೂ ಕೂಡ ನಾಯಕನಿಲ್ಲದೆ, ಹೈಕಮಾಂಡಿನ ಬೆಂಬಲವೂ ಇಲ್ಲದೆ ಅತಂತ್ರವಾಗಿರುವ ಬಿಜೆಪಿಗೆ ದಿನೇ ದಿನೇ ಒಂದೊಂದು ಶಾಕ್ ಎದುರಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ವರ್ಚಸ್ಸು ಹಚ್ಚಾಗುತ್ತಿದ್ದಂತೆ ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ಸೇರುತ್ತಿದ್ದು ಬಿಜೆಪಿಗಿದು ಸಹಿಸಾಗದ ಪೆಟ್ಟಾಗಿದೆ. ಅಂತಯೇ ಇದೀಗ ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮ ಶ್ರೀನಿವಾಸ್(Poornima srinivas) ರಾಜ್ಯದ ನಾಯಕರಿಗೆ ಭಾರೀ ದೊಡ್ಡ ಶಾಕ್ ನೀಡಿದ್ದಾರೆ.

 

ಹೌದು, ಬಿಜೆಪಿಯ ಮಾಜಿ ಶಾಸಕಿಯಾದ ಪೂರ್ಣಿಮ ಶ್ರೀನಿವಾಸ್ ಅವರು ಬಿಜೆಪಿಯಿಂದ ತಮ್ಮ ಸಮುದಾಯದ ಕಡಗಣನೆಯಾಗಿದೆ. ಹೀಗಾಗಿ ತಾನು ಮನನೊಂದು ಕಾಂಗ್ರೆಸ್ ಸೇರುತ್ತೇನೆ. ಸದ್ಯದಲ್ಲೇ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಿ, ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ ಎಂದಿದ್ದರು. ಅಂತೆಯೇ ನಿನ್ನೆ ದಿನ ಪೂರ್ಣಿಮಾ ಶ್ರೀನಿವಾಸ್ ಅವರು ಬಿಜೆಪಿ ದೊಡ್ಡ ಆಘಾತ ಉಂಟಾಗುವಂತೆ ಅವರ ಪತಿ ಶ್ರೀನಿವಾಸ್ ರನ್ನೂ ಕೂಡಿಕೊಂಡು ಅಪಾರ ಬೆಂಬಲಿಗರ ಜೊತೆಗೆ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.

ಸಾಮಾನ್ಯವಾಗಿ ಪಕ್ಷಗಳಿಗೆ ಸೇರ್ಪಡೆಯಾಗುವಾಗ ಸಣ್ಣದೊಂದು ಕಾರ್ಯಕ್ರಮ, ಕೆಲವು ಬೆಂಬಲಿಗರು ಇರುವುದನ್ನು ನೋಡಿದ್ದೇವೆ. ಆದರೆ ನಿನ್ನೆ ದಿನ ಮಾತ್ರ ಬೆಂಗಳೂರಿನಲ್ಲಿ ಪೂರ್ಣಿಮಾ ಅವರು ಕಾಂಗ್ರೆಸ್ ಸೇರುವ ಕಾರ್ಯಕ್ರಮ ದೊಡ್ಡ ಜಾತ್ರೆಯಾಗಿತ್ತು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಜನ ತುಂಬಿ ತುಳುಕುತಿತ್ತು. ವೇದಿಕೆ ತುಂಬಾ ಪೂರ್ಣಿಮ ಅವರ ಬೆಂಬಲಿಗರು ಸಾಸಿವೆ ಹಾಕಿದರೂ ಬೀಳದಂತ ಸ್ಥಿತಿಯಲ್ಲಿ ನಿಂತಿದ್ದರು. ಇದು ಪಕ್ಷ ಸೇರ್ಪಡೆ ಕಾರ್ಯಕ್ರಮ ಅನ್ನುವುದಕ್ಕಿಂದ ಯಾವದೋ MLA ಅಥವಾ MP ಚುನಾವಣೆಯಲ್ಲಿ ಗೆದ್ದು ಸಂಭ್ರಮಿಸುತ್ತಿರುವ ಹಾಗಿತ್ತು. ಕಾಂಗ್ರೆಸ್ ನಾಯಕರು ಮಾತ್ರವಲ್ಲ ಸ್ವತಃ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸೇರಿದಂತೆ ಕಾಂಗ್ರೆಸ್ ನ ಹಲವು ಪ್ರಬಲ ನಾಯಕರು ಇದರಲ್ಲಿ ಪಾಲ್ಗೊಂಡಿದ್ದರು. ಒಟ್ಟಿನಲ್ಲಿ ಈ ದೃಶ್ಯಾವಳಿಗಳನ್ನು ಕಂಡಂತಹ ಬಿಜೆಪಿ ನಾಯಕರಿಗಂತೂ ನಡುಗ ಶುರುವಾಗಿರೋದು ಪಕ್ಕಾ!!

ಇನ್ನು ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಪೂರ್ಣಿಮ ಅವರು ನಾನು ಕಾಂಗ್ರೆಸ್‍ನ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರಿದ್ದೇನೆ. ಆ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಮುಂದಿನ ಪಯಣ ಬೆಳೆಸುತ್ತೇನೆ. ಬಹಳ ದಿನಗಳಿಂದ ನನ್ನನ್ನ ಅಧ್ಯಕ್ಷರು ಸಂಪರ್ಕ ಮಾಡಿದ್ದರು. ಈಗಲೂ ಕೃಷ್ಣಪ್ಪ ಕುಟುಂಬಕ್ಕೆ ಅವರು ಗೌರವ ಕೊಡುತ್ತಾರೆ. ನನ್ನನ್ನ ಯಾವಾಗಲು ಕಾಂಗ್ರೆಸ್ ಕೃಷ್ಣಪ್ಪನವರ ಮಗಳು ಎಂದು ಪರಿಚಯ ಮಾಡಿಕೊಡುತ್ತಿದ್ದರು. ಕಾರಣಾಂತರಗಳಿಂದ ಕಹಿ ಘಟನೆಯಿಂದ ನಮ್ಮ ತಂದೆ ಕೃಷ್ಣಪ್ಪನವರು ಪಕ್ಷ ಬಿಟ್ಟಿದ್ದರು. ಮೊದಲು ನಾನು ಬಿಜೆಪಿಯಲ್ಲೆದ್ದೆ. ಆದರೆ ಕಾಂಗ್ರೆಸ್‍ನ ರಕ್ತ ನಿನ್ನಲ್ಲಿ ಇದೆ ಎಂದು ಅನೇಕರು ನನಗೆ ಹೇಳುತ್ತಿದ್ದರು. ಹೀಗಾಗಿ ಈಗ ಕಾಂಗ್ರೆಸ್‍ನಲ್ಲಿ ಪ್ರಯಾಣ ಶುರುವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ : A manju: ಸಿಎಂ ಇಬ್ರಾಹಿಂ ಬಗ್ಗೆ ಹೊಸ ಬಾಂಬ್ ಸಿಡಿಸಿದ ಎ ಮಂಜು – ಹೀಗೇಕೆ ಮಾಡಿದ್ರು ಇಬ್ರಾಹಿಂ !!

Leave A Reply

Your email address will not be published.