Vehicle Rule: ಡೀಸೆಲ್ ವಾಹನ ಹೊಂದಿರೋರಿಗೆ ಬಂತು ಹೊಸ ರೂಲ್ಸ್- ಏಕಾಏಕಿ ಮಹತ್ವದ ನಿರ್ಧಾರ ಕೈಗೊಂಡ ಕೇಂದ್ರ

National news Indian government taken big decision about diesel vehicles latest news

Diesel vehicles: ಡೀಸೆಲ್ ವಾಹನ ಹೊಂದಿರೋರಿಗೆ ಹೊಸ ರೂಲ್ಸ್ (Vehicle Rule) ಬಂದಿದೆ. ಕೇಂದ್ರ ಸರ್ಕಾರ ಏಕಾಏಕಿ ಮಹತ್ವದ ನಿರ್ಧಾರ ಕೈಗೊಂಡಿದೆ. ಹೌದು, 10 ಲಕ್ಷಕ್ಕೂ ಹೆಚ್ಚು ಜನರು ಇರುವಂತಹ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಬಳಸಿಕೊಂಡು ಚಲಾವಣೆ ಮಾಡುವಂತಹ ವಾಹನಗಳ ಮೇಲೆ ಕೆಲವೊಂದು ಪ್ರತಿಬಂಧವನ್ನು ಹೇರುವಂತಹ ಸಾಧ್ಯತೆ ಹೆಚ್ಚಾಗಿದೆ.

ಇಂಧನದ ಎನರ್ಜಿಗಳ ಕಡಿಮೆ ಆಗುತ್ತಿರುವ ಕಾರಣದಿಂದಾಗಿ 2027ರ ಒಳಗೆ ಇಂತಹ ವಾಹನಗಳ ಮೇಲೆ ನಿಷೇಧವನ್ನು ಹೇರುವ ಸಲಹೆಯನ್ನು ಸರ್ಕಾರಕ್ಕೆ ನೀಡಿದೆ. ಹೆಚ್ಚಿನ ಜನಸಂಖ್ಯೆ ಇರುವಂತಹ ನಗರಗಳಲ್ಲಿ ಗ್ಯಾಸ್ ಅನ್ನು ಬಳಸಿಕೊಂಡು ಓಡಾಡುವಂತಹ ವಾಹನಗಳನ್ನು (CNG Supported Vehicle) ಜಾರಿಗೆ ತರುವ ಬಗ್ಗೆ ಕೂಡ ಸಲಹೆಯನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಪೆಟ್ರೋಲ್ ಹಾಗೂ ಪ್ರಾಕೃತಿಕ ಇಂಧನಗಳ ಸಚಿವಾಲಯದಿಂದ ಈ ರಿಪೋರ್ಟ್ ಅನ್ನು ಪಡೆದುಕೊಳ್ಳಲಾಗಿದೆ.

2070ರ ಒಳಗೆ ಭಾರತ ದೇಶದಲ್ಲಿ ಕಾರ್ಬನ್ ಕಡಿಮೆ ಮಾಡುವಂತಹ ಉತ್ತಮ ಗಾಳಿಯನ್ನು ಹೊಂದುವಂತಹ ಉದ್ದೇಶವನ್ನು ಹೊಂದಿದೆ. ಇದಕ್ಕಾಗಿ ಅತ್ಯಂತ ಕಡಿಮೆ ಕಾರ್ಬನ್ ಅನ್ನು ಹೊರ ಸೂಸುವಂತಹ ವಾಹನಗಳಿಗೆ( Diesel vehicles) ಹೆಚ್ಚು ಪ್ರೋತ್ಸಾಹ ನೀಡುವುದು ಹಾಗೂ ಹೆಚ್ಚಿನ ಕಾರ್ಬನ್ ಅನ್ನು ಹೊರ ಸೂಸುವಂತಹ ವಾಹನಗಳನ್ನು ನಿರ್ಬಂಧ ಗೊಳಿಸುವುದಾಗಿದೆ. ಮುಂದಿನ ದಿನಗಳಲ್ಲಿ ಇವುಗಳನ್ನು ಕಾರ್ಯರೂಪಕ್ಕೆ ತರುವಂತಹ ಕೆಲಸವನ್ನು ಮಾಡಲಿದ್ದೇವೆ ಎಂಬುದಾಗಿ ಇಂದಿನ ಸಚಿವಾಲಯದಿಂದ ಮಾಹಿತಿಗಳು ಹೊರಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಡೀಸೆಲ್ ಇಂಜಿನ್ ವಾಹನಗಳು (Diesel Engine Vehicles) ರದ್ದಾಗಬಹುದು ಎಂಬ ಸುದ್ದಿ ಹಬ್ಬಿದೆ.

ಇದನ್ನೂ ಓದಿ: Anna bhagya: ಅನ್ನಭಾಗ್ಯದ ಫಲಾನುಭವಿಗಳೇ ಎಚ್ಚರ !! ಈ ಕೆಲಸ ಮಾಡೇ ಇಲ್ಲ ಅಂದ್ರೆ ಯಾವತ್ತೂ ಅಕ್ಕಿ ದುಡ್ಡು ಬರೋದಿಲ್ಲ

Leave A Reply

Your email address will not be published.