LPG Gas Cylinder: ಮಹಿಳೆಯರೇ ಜಸ್ಟ್ ಹೀಗೆ ಮಾಡಿ ಸಾಕು, ‘ಉಜ್ವಲ ಯೋಜನೆ’ಯ ಉಚಿತ ಸಿಲಿಂಡರ್ ಈ ವಸ್ತುಗಳ ಜೊತೆ ಮನೆಬಾಗಿಲಿಗೇ ಬರುತ್ತೆ !!
Pradhan Mantri Ujjwala Yojana how to apply for free cylinder latest news
LPG Gas Cylinder: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ(Pradhan Mantri Ujjwala Yojana) (3ನೇ ಹಂತ)ಬಡ ಕುಟುಂಬಗಳ ಮಹಿಳಾ ಸಬಲೀಕರಣಕ್ಕಾಗಿ ಉಚಿತ ಎಲ್.ಪಿ.ಜಿ LPG ವಿತರಣೆ ಮಾಡಲಾಗುತ್ತದೆ.ಅಡುಗೆ ಅನಿಲ ಸಂಪರ್ಕ ಪಡೆಯದೆ ವಂಚಿತರಾಗಿರುವ ಬಿಪಿಎಲ್ ಕಾರ್ಡ್(BPL)ಹೊಂದಿರುವ ಮಹಿಳೆಯರು ಅಡುಗೆ ಅನಿಲ(LPG Gas Cylinder)ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಯೋಜನೆ ಜಾರಿ ಮಾಡಲಾಗುತ್ತಿದ್ದು, ಉಚಿತ ಸಿಲಿಂಡರ್ (Free Gas Cylinder)ಪಡೆಯಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಇಲ್ಲಿಯವರೆಗೆ ಎಲ್ಪಿಜಿ ಸಂಪರ್ಕಗಳನ್ನುLPG Cylinder ಹೊಂದಿರದ ಕುಟುಂಬದ ಮಹಿಳೆಯರು ಅಗತ್ಯ ದಾಖಲೆಗಳನ್ನು ನೀಡಿ ಸಮೀಪದ ಎಲ್ಪಿಜಿ ವಿತರಕ(LPG Gas Cylinder Agency)ಕಂಪನಿಗೆ ಭೇಟಿ ನೀಡಿ ಈ ಯೋಜನೆಯಡಿ ಸಿಲಿಂಡರ್ ಸೌಲಭ್ಯವನ್ನು ಪಡೆಯಲು ಅವಕಾಶವಿದೆ.
ಅರ್ಹತಾ ಮಾನದಂಡಗಳು:
* ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಎಲ್ಪಿಜಿ ಸಂಪರ್ಕದ ಅರ್ಜಿದಾರ ಮಹಿಳೆಗೆ ವಯಸ್ಸು 18 ವರ್ಷ ತುಂಬಿರಬೇಕು.
* ಒಂದೇ ಮನೆಯಲ್ಲಿ ಯಾವುದೇ OMCಯಿಂದ ಬೇರೆ ಯಾವುದೇ LPG ಸಂಪರ್ಕ ಹೊಂದಿರಬಾರದು.
ಬೇಕಾಗುವ ದಾಖಲೆಗಳು:
# ಅರ್ಜಿದಾರರ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯಾಗಿ ಅರ್ಜಿದಾರರ ಆಧಾರ್ ಕಾರ್ಡ್ ಆಧಾರ್ನಲ್ಲಿ ನಮೂದಿಸಿದ ವಿಳಾಸದಲ್ಲಿ ನೆಲೆಸಿದ್ದರೆ ಆ ದಾಖಲೆ ನೀಡಬೇಕು.
# ಅರ್ಜಿಗಳನ್ನು ಸಲ್ಲಿಕೆ ಮಾಡುವಾಗ ನಿಮ್ಮ ಗ್ರಾಹಕರನ್ನು(KYC) ಬಗ್ಗೆ ತಿಳಿದುಕೊಳ್ಳಿ.
# ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC, ಕುಟುಂಬದ ಸ್ಥಿತಿಯನ್ನು ಬೆಂಬಲಿಸಲು ಪೂರಕ KYCಯನ್ನು ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ನೀಡಬೇಕಾಗುತ್ತದೆ.
# ಅರ್ಜಿದಾರರು ವಿತರಕರಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಇಲ್ಲವೇ ಆನ್ಲೈನ್ ಪೋರ್ಟಲ್ (Online Portal)ಮೂಲಕ ಸಹ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.
# ರಾಜ್ಯ ಸರ್ಕಾರದ ಪ್ರಕಾರ ಕುಟುಂಬದ ಸಂಯೋಜನೆ/ ಸ್ವಯಂ ಘೋಷಣೆ ಪ್ರಮಾಣೀಕರಿಸುವ ದಾಖಲೆ Sl ನಲ್ಲಿ ಡಾಕ್ಯುಮೆಂಟ್ನಲ್ಲಿ ಅರ್ಜಿ ಸಲ್ಲಿಸುತ್ತಿರುವ ರಾಜ್ಯದಿಂದ ನೀಡಲಾದ ಪಡಿತರ ಚೀಟಿ/ ಇತರೆ (ವಲಸೆ ಅರ್ಜಿದಾರರಿಗೆ) ಫಲಾನುಭವಿ ಮತ್ತು ವಯಸ್ಕ ಕುಟುಂಬದ ಸದಸ್ಯರ ಆಧಾರ್ ನೀಡಬೇಕಾಗುತ್ತದೆ
ಉಜ್ವಲ್ ಯೋಜನೆ 3ನೇ ಹಂತದಡಿ ಎಲ್ಪಿಜಿ ಸಂಪರ್ಕ ಪಡೆಯುವ ಗ್ರಾಹಕರಿಗೆ ಎರಡು ಬರ್ನರ್ ಸ್ಟೌವ್, 14.2 ಕೆಜಿ ಸಿಲಿಂಡರ್ ಮತ್ತು ಎರಡು 5 ಕೆಜಿ ಸಿಲಿಂಡರ್, ಒಂದು ರೆಗ್ಯುಲೇಟರ್, ಒಂದು ಸುರಕ್ಷಾ ಹೋಸ್, ಡಿ.ಜಿ.ಸಿ.ಸಿ ಬುಕ್‍ಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.
ಇದನ್ನು ಓದಿ: ಯೂಸ್ ಮಾಡಿದ ಹೂವನ್ನು ಬಾಡಿತೆಂದು ಬಿಸಾಡ್ತೀರಾ?! ಇನ್ಮುಂದೆ ಹೀಗ್ ಮಾಡಿ, ಮನೆಯಲ್ಲೇ ಧೂಪ ತಯಾರಿಸಿ