Hijab: ಹಿಜಾಬ್ ಧರಿಸೇ ಪರೀಕ್ಷೆ ಬರೆಯಲು ಬಂತು ಅನುಮತಿ – ಪರ್ಮಿಷನ್ ಕೊಟ್ಟಿದ್ಯಾರು ಗೊತ್ತಾ ?!

Hijab: ರಾಜ್ಯದಲ್ಲಿ ಹಿಜಾಬ್(Hijab) ಧರಿಸಿ ಶಾಲಾ-ಕಾಲೇಜುಗಳಿಗೆ ಹಾಜರಾಗುವ ವಿಚಾರ ಭಾರೀ ವಾದ ವಿವಾದಗಳ ನಡುವೆ ಇದೀಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊಸ ಹೇಳಿಕೆ ಒಂದನ್ನು ನೀಡಿದೆ.

ಹೌದು, ಅಕ್ಟೋಬರ್ 28 ಮತ್ತು 29 ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗೆ ನಡೆಯಲಿರುವ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅನುಮತಿ ನೀಡಿದೆ. ಪರೀಕ್ಷೆಗೆ ಅಭ್ಯರ್ಥಿಗಳು ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಅವರನ್ನು ಮಹಿಳಾ ಸಿಬ್ಬಂದಿ ತಪಾಸಣೆ ನಡೆಸಲಿದ್ದಾರೆ ಎಂದು ಕೆಇಎ ತಿಳಿಸಿದೆ.

ಸದ್ಯ ಕೆಇಎ ವಿವಿಧ ನಿಗಮ ಮಂಡಳಿಗಳ ಹುದ್ದೆ ಪರೀಕ್ಷೆಗೆ ಹಾಜರಾಗುವವರು ಪ್ರವೇಶ ಪತ್ರ, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 2 ಫೋಟೋ, ಸರ್ಕಾರದ ಮಾನ್ಯ ಮಾಡಿರುವ ಗುರುತಿನ ಚೀಟಿ ತರಬೇಕು. ಹಾಗೂ ಪರೀಕ್ಷೆ ಮುಗಿಯುವವರೆಗೂ ಹೊರ ಹೋಗಲು ಅವಕಾಶವಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ತಿಳಿಸಿದೆ.

 

ಇದನ್ನು ಓದಿ: LPG Gas Cylinder: ಮಹಿಳೆಯರೇ ಜಸ್ಟ್ ಹೀಗೆ ಮಾಡಿ ಸಾಕು, ‘ಉಜ್ವಲ ಯೋಜನೆ’ಯ ಉಚಿತ ಸಿಲಿಂಡರ್ ಈ ವಸ್ತುಗಳ ಜೊತೆ ಮನೆಬಾಗಿಲಿಗೇ ಬರುತ್ತೆ !!

Leave A Reply

Your email address will not be published.