Karnataka BJP: ವಿಜಯದಶಮಿ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ – ಇವರೇ ನೋಡಿ ವಿಪಕ್ಷ ನಾಯಕ ಮತ್ತು ನೂತನ ರಾಜ್ಯಾಧ್ಯಕ್ಷರು !!

Karnataka politics news karnataka opposition leader and bjp state president elected

Karnataka BJP: ರಾಜ್ಯದಲ್ಲಿ ರಾಜ್ಯ ಬಿಜೆಪಿಯನೂತನ ಅಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ವಿಚಾರ ಕಗ್ಗಂಟಾಗಿ ಉಳಿದುಬಿಟ್ಟಿದೆ. ಚುನಾವಣೆ ಮುಗಿದು, ನೂತನ ಸರ್ಕಾರ ರಚನೆಯಾಗಿ ಮೂರ್ನಾಲ್ಕು ತಿಂಗಳುಗಳೇ ಉರುಳಿದರು ಕೂಡ ಇನ್ನೂ ಬಿಜೆಪಿಗೆ (Karnataka BJP)ಸಮರ್ಥ ನಾಯಕ ಸಿಕ್ಕದಿರುವುದು ದುರಂತವೇ ಸರಿ. ಆದರೀಗ ಈ ಬಿಜೆಪಿ ಅಧ್ಯಕ್ಷರ ಆಯ್ಕೆ ವಿಚಾರ ಇದೀಗ ಮತ್ತೆ ಮುನ್ನಲೆಗೆ ಬಂದಿದೆ.

ಹೌದು, ರಾಜ್ಯ ಬಿಜೆಪಿ ಸಮರ್ಥ ನಾಯಕನಿಲ್ಲದೆ ಬಿಕಾರಿಯಾಗಿಬಿಟ್ಟಿದೆ. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ, ಬೆಳೆಸಿದ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿದ ಪರಿಣಾಮವೇ ಬಿಜೆಪಿಗೆ ಈ ಸ್ಥಿತಿ ಬರಲು ಕಾರಣ ಎಂದು ಜನ ಮಾತನಾಡುತ್ತಿದ್ದಾರೆ. ಆದರೀಗ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ನಾಡ ಹಬ್ಬ ದಸರಾ ಮುಗಿದ ಕೂಡಲೇ ರಾಜ್ಯ ಬಿಜೆಪಿ ಪಾಳಯದಲ್ಲಿ ಮಹತ್ವದ ಬದಲಾವಣೆ ಆಗಲಿದ್ದು, ಇವರೇ ಬಿಜೆಪಿಯ ಮುಂದಿನ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರು ಎಂಬು ಸುದ್ದಿ ಹರಿದಾಡುತ್ತಿದೆ. ಹಾಗಿದ್ರೆ ಯಾರದು?

ರಾಜ್ಯಾಧ್ಯಕ್ಷರಾಗಿ ಶೋಭಾ ಕರಂದ್ಲಾಜೆ? :
ದೇಶದಲ್ಲಿ ಮಹಿಳಾ ಮೀಸಲಾತಿ ಘೋಷಣೆ ಬೆನ್ನಲ್ಲೇ ರಾಜ್ಯಾಧ್ಯಕ್ಷ ಸ್ಥಾನವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ. ಶೋಭಾ ಕರಂದ್ಲಾಕೆ ಆವರು ರಾಜ್ಯ, ಕೇಂದ್ರ ಸಚಿವೆಯಾಗಿ ಅನುಭವ ಹೊಂದಿದ್ದು, ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕಿದಂತೆ ಆಗುತ್ತದೆ. ಇದರ ಜೊತೆಗೆ ರಾಜ್ಯ ರಾಜಕೀಯದ ಅನುಭವವನ್ನು ಹೊಂದಿದ್ದಾರೆ. ಇನ್ನೂ ಶೋಭಾ ಅವರ ಆಯ್ಕೆಗೆ ಮಾಜಿ ಸಿಎಂ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಲ್ಲ ಎಂಬುವುದು ಹೈಕಮಾಂಡ್ ಲೆಕ್ಕಾಚಾರ. ಆದರೆ ಈ ರೇಸ್ ನಲ್ಲಿ ಸಿಟಿ ರವಿ, ಯಡಿಯೂರಪ್ಪರ ಮಗ ವಿಜಯೇಂದ್ರ ಕೂಡ ಇದ್ದಾರೆ.

ವಿಪಕ್ಷ ನಾಯಕನಾಗಿ ಬೊಮ್ಮಾಯಿ ಅಥವಾ ಯತ್ನಾಳ್?
ವಿಪಕ್ಷ ನಾಯಕನಾಗಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿರೋ ಅನುಭವ ಹೊಂದಿರುವ, ರಾಜ್ಯದ ಪ್ರಬಲ ಲಿಂಗಾಯತ ಸಮುದಾಯದ ನಾಯಕರಾಗಿರುವ ಆಡಳಿತಾತ್ಮಕ, ರಾಜಕೀಯದ ಅನುಭವ ಜೊತೆಗೆ ಆಡಳಿತ ಪಕ್ಷವನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಅತ್ಯಾಪ್ತರೂ ಆಗಿರುವ ಬಸವರಾಜ್ ಬೊಮ್ಮಾಯಿ ಆಯ್ಕೆ ಆಗಬಹುದು ಎನ್ನಲಾಗುತ್ತಿದೆ.

ಇನ್ನು ಪ್ರಖರ ಹಿಂದುತ್ವವಾದಿ, ವಾಗ್ಮಿಯಾಗಿದ್ದು, ಲಿಂಗಾಯತ ಸಮುದಾಯದ ನಾಯಕ. ಕೇಂದ್ರ ಸಚಿವರಾಗಿದ್ದ ಅನುಭವ ಹೊಂದಿರುವ ಯತ್ನಾಳ್ ಸೈದ್ಧಾಂತಿಕ ವಿಚಾರದಲ್ಲಿ ರಾಜಿ ಇಲ್ಲದ ಸ್ವಭಾವದವರು. ಎದುರಾಳಿ ಪಕ್ಷಗಳ ವಿರುದ್ಧ ಆಕ್ರಮಣಕಾರಿ ನಿಲುವು ಹೊಂದಿರುತ್ತಾರೆ. ಹೀಗಾಗಿ ಯತ್ನಾಳ್ ಕೂಡ ಆಯ್ಕೆ ಆಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: Beauty Tips: ಮುಖದ ಸೌಂದರ್ಯ ಹೆಚ್ಚಿಸಲು ಇದೊಂದು ವಸ್ತುವಿದ್ರೆ ಸಾಕು – ಒಮ್ಮೆ ಹಚ್ಚಿ ಆಗೋ ಚಮತ್ಕಾರ ನೋಡಿ

Leave A Reply

Your email address will not be published.