Beauty Tips: ಮುಖದ ಸೌಂದರ್ಯ ಹೆಚ್ಚಿಸಲು ಇದೊಂದು ವಸ್ತುವಿದ್ರೆ ಸಾಕು – ಒಮ್ಮೆ ಹಚ್ಚಿ ಆಗೋ ಚಮತ್ಕಾರ ನೋಡಿ

Lifestyle best Beauty Tips for glowing skin for women

Beauty Tips: ಸೌಂದರ್ಯ (beauty)ಎನ್ನುವುದು ನೋಡುವವರ ಕಣ್ಣಿನಲ್ಲಿದೆ ಎನ್ನುವುದು ಪ್ರಚಲಿತ ಮಾತು. ಆದರೆ, ಸೌಂದರ್ಯ ಎಂದೊಡನೆ ಹೆಚ್ಚಿನವರಿಗೆ ನೆನಪಾಗುವುದು ಹೆಣ್ಣು. ಹೆಣ್ಣು ಅಂದ ಸೌಂದರ್ಯದ ಕಾಳಜಿ ಮಾಡುವ ವಿಷಯದಲ್ಲಿ ಹೆಚ್ಚು ಲಕ್ಷ್ಯ ವಹಿಸುತ್ತಾರೆ. ಹೆಂಗೆಳೆಯರು ದೇಹ, ಚರ್ಮದ ಕಾಂತಿ ಹೆಚ್ಚಿಸುವ ನಿಟ್ಟಿನಲ್ಲಿ ಏನೇನೋ ಹರಸಾಹಸ ಪಡುತ್ತಾರೆ. ಚರ್ಮದ ಆರೋಗ್ಯದ(Health) ದೃಷ್ಠಿಯಿಂದ ಇದು ಅವಶ್ಯಕವೆಂದರು ತಪ್ಪಾಗದು. ಮಹಿಳೆಯರೇ ಗಮನಿಸಿ, ಮುಖದ ಅಂದವನ್ನು(Beauty Tips)ಹೆಚ್ಚಿಸಲು ಇದೊಂದು ವಸ್ತು ಬಳಸಿ ನೋಡಿ!! ಒಮ್ಮೆ ಹಚ್ಚಿದ್ರೆ ಸಾಕು ಮುಖ ಫಳ ಫಳ ಅಂತ ಹೊಳೆಯುತ್ತೆ!!

ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ(Beauty Tips)ಐಸ್ ಕ್ಯೂಬ್ (Ice cubes)ವಿಶೇಷ ಪಾತ್ರ ವಹಿಸುತ್ತದೆ. ಐಸ್ ಕ್ಯೂಬ್ ಮುಖದ ಊತವನ್ನು, ಕೆಂಪನೆಯ ಗುರುತುಗಳನ್ನು ಕಡಿಮೆ ಮಾಡಿ, ರಕ್ತ ಸಂಚಲನವನ್ನು ಸುಧಾರಿಸಿ ಹೊಸ ಹೊಳಪನ್ನು ನೀಡುತ್ತದೆ.

# ಎಣ್ಣೆ ಅಂಶ ಹಾಗೂ ಮೊಡವೆ ನಿವಾರಣೆ ಮಾಡಲು ಐಸ್‌ ಕ್ಯೂಬ್‌ ಬಳಕೆ ಮಾಡಿ ರಿಸಲ್ಟ್ಸ್ ನೀವೇ ಕಂಡುಕೊಳ್ಳಿ.
# ಕಣ್ಣುಗಳ ಕೆಳಗೆ ಐಸ್ ಕ್ಯೂಬ್‌ಗಳನ್ನು ಅನ್ವಯಿಸುವ ಮೂಲಕ ಕಪ್ಪು ವಲಯಗಳನ್ನು ನಿವಾರಿಸಬಹುದು. ನೀವು ರೋಸ್ ವಾಟರ್ ಮತ್ತು ಸೌತೆಕಾಯಿ ರಸ ಎರಡನ್ನೂ ಕುದಿಸಿ ಕೊಂಡು ನಂತರ, ಇವುಗಳನ್ನು ಫ್ರೀಜ್ ಮಾಡಿಟ್ಟು ಪ್ರತಿದಿನ ಇವುಗಳನ್ನು ಕಣ್ಣಿನ ಕೆಳಗಿನ ಕಪ್ಪು ವಲಯಕ್ಕೆ ಸುಮಾರು ದಿನಗಳವರೆಗೆ ಅನ್ವಯಿಸುತ್ತಾ ಬಂದರೆ ಡಾರ್ಕ್‌ ಸರ್ಕಲ್‌ ಮಾಯಾವಾಗುತ್ತದೆ.
# ಅಲರ್ಜಿಗಳು, ದದ್ದುಗಳು, ಶಾಖದ ಗುಳ್ಳೆಗಳು, ಉಂಟಾಗಿ ತುರಿಕೆ, ಉರಿ ಉಂಟಾದರೆ ಇದನ್ನು ಪರಿಹರಿಸಲು ಕಾಟನ್‌ ಬಟ್ಟೆಯಲ್ಲಿ ಐಸ್ ಕ್ಯೂಬ್‌ ಅನ್ನು ಸುತ್ತಿ ಸಮಸ್ಯೆಯಿರುವ ಕಡೆಗೆ ಅನ್ವಯಿಸುವ ಮೂಲಕ ಈ ಎಲ್ಲ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
# ಕಾಂತಿಯುತ ಮತ್ತು ಹೊಳೆಯುವ ಚರ್ಮ ಪಡೆಯಲು ಐಸ್‌ ಕ್ಯೂಬ್‌ ಅನ್ನು ಮುಖದ ಮೇಲೆ ಅನ್ವಯಿಸಿ. ಇದರಿಂದ ರಕ್ತ ಪರಿಚಲನೆ ಸುಧಾರಿಸುವ ಜೊತೆಗೆ ಚರ್ಮದಲ್ಲಿ ಆಮ್ಲಜನಕದ ಮಟ್ಟವನ್ನು ಸುಧಾರಿಸುತ್ತದೆ. ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ.
# ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುಲು ಐಸ್ ಕ್ಯೂಬ್ ಬಳಸಿ. ನಿಯಮಿತವಾಗಿ ಐಸ್ ತುಂಡುಗಳನ್ನು ಚರ್ಮದ ಮೇಲೆ ಉಜ್ಜುವುದರಿಂದ ವಯಸ್ಸಾದಂತೆ ಮುಖದ ಮೇಲೆ ಸುಕ್ಕು ಕಡಿಮೆಯಾಗುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸಿ, ನಿಮ್ಮ ಚರ್ಮದ ರಂಧ್ರಗಳನ್ನು ಬಿಗಿಗೊಳಿಸಲು ಸಹಕರಿಸುತ್ತದೆ.

ಇದನ್ನೂ ಓದಿ: Fashion Brand: ಯಾವಾಗ್ಲೂ ಬ್ರಾಂಡೆಡ್ ಆದ, ತುಂಬಾ ಬೆಲೆಬಾಳೋ ವಸ್ತುಗಳನ್ನು ಕೊಂಡುಕೊಳ್ತೀರಾ ?! ಹಾಗಿದ್ರೆ ತಪ್ಪದೇ ಈ ಸ್ಟೋರಿ ನೋಡಿ

Leave A Reply

Your email address will not be published.