Rishab Shetty: ʼಕಾಂತಾರʼ ಥೀಮ್‌ನಲ್ಲಿ ಮೂಡಿಬಂದ ಕೋಲ್ಕತ್ತಾ ಜನರ ದುರ್ಗಾ ಪೂಜೆ!!!

entertainment news sandalwood kantara movie theme durga pooja in kolkata

Rishab Shetty: ʼಕಾಂತಾರʼ (Kantara) ಸಿನಿಮಾ ರಿಲೀಸ್‌ ಆಗಿ ಇಲ್ಲಿಯ ತನಕ ತನ್ನ ಹವಾ ಇನ್ನೂ ಕಮ್ಮಿ ಮಾಡಿಕೊಂಡಿಲ್ಲ. ಕಾಂತಾರ ಗೆಟಪ್‌, ಕಾಂತಾರ ಸ್ಟೈಲ್‌ , ದೈವದ ಮೇಲೆ ನಂಬಿಕೆ, ದೇಶ ವಿದೇಶಗಳಲ್ಲಿ ಕನ್ನಡ ಚಿತ್ರವೊಂದು ಗಳಿಸಿದ ಮನ್ನಣೆ ನಿಜಕ್ಕೂ ಊಹೆಗೆ ಮೀರಿದಂತಿತ್ತು.

ದುರ್ಗಾ ಪೂಜೆ ಈಗ ಎಲ್ಲಾ ಕಡೆ ನಡೆಯುತ್ತಿದೆ. ಹಾಗೆನೇ ಕೋಲ್ಕತ್ತಾದಲ್ಲಿ ಕಾಂತಾರ ಥೀಮ್‌ನಲ್ಲಿ ದುರ್ಗಾ ಪೂಜೆ ಮಾಡಲಾಗಿದ್ದು, ಇದರ ಈ ವೀಡಿಯೋ ವೈರಲ್‌ ಆಗಿದೆ. ಇದು ಕಾಂತಾರ ಥೀಮ್‌ನಲ್ಲಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಹಬ್ಬದ ಸಂಭ್ರಮವು ಕಾಂತಾರದ ಪ್ರಭಾವವನ್ನು ಒಳಗೊಂಡಿದ್ದು, ಜನ ಕೊಂಡಾಡುತ್ತಿದ್ದಾರೆ.

ಕಾಂತಾರ-2 ಸಿನಿಮಾದ ಮೇಲೆ ಈಗ ಎಲ್ಲಾ ಪ್ರೇಕ್ಷಕರು ತಮ್ಮ ಗಮನ ಹರಿಸಿದ್ದಾರೆ. ನಿರ್ದೇಶಕ, ನಟ ರಿಷಬ್‌ ಶೆಟ್ಟಿ ಅವರು ತಮ್ಮ ಸ್ಕ್ರಿಪ್ಟ್‌ ಕೆಲಸ ಪೂರ್ಣಗೊಳಿಸಿದ್ದಾರೆ. ಕಾಂತಾರ ಪ್ರೀಕ್ವೆಲ್‌ ಗೆ ಜನ ಕಾತುರದಿಂದ ಕಾಯುತ್ತಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಈ ಸಿನಿಮಾ ಶುರುವಾಗಲಿಲ್ಲ, ಹೊಂಬಾಳೆ ಫಿಲ್ಮ್ನ್‌ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.

 

ಇದನ್ನು ಓದಿ: Dakshina Kannada: ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಯೂರ ನರ್ತನ! ಕಾಲಿಗೆ ಗೆಜ್ಜಿ ಕಟ್ಟಿ ಕುಣಿಯೋ ನಾಟ್ಯ ಮಯೂರಿ, ದೃಶ್ಯ ಕಂಡು ಭಕ್ತರು ಭಾವಪರವಶ!

Leave A Reply

Your email address will not be published.