Dakshina Kannada: ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಯೂರ ನರ್ತನ! ಕಾಲಿಗೆ ಗೆಜ್ಜಿ ಕಟ್ಟಿ ಕುಣಿಯೋ ನಾಟ್ಯ ಮಯೂರಿ, ದೃಶ್ಯ ಕಂಡು ಭಕ್ತರು ಭಾವಪರವಶ!

mangaluru news peacock dance at manuru sbramanya temple viral video

Mangaluru; ನವಿಲನ್ನು ನಾಟ್ಯ ಮಯೂರಿ ಎಂದು ಕರೆಯುತ್ತಾರೆ. ಆದರ ನವಿಲಿನ ನಾಟ್ಯ ಕಾಣಲು ಸಿಗುವುದು ಬಹಳ ಅಪರೂಪ. ಅದರಲ್ಲೂ ಸಿಟಿ ಮಂದಿಗೆ ನವಿಲಿನ ನಾಟ್ಯ ಏನಾದರೂ ಕಂಡರೆ ನಿಜಕ್ಕೂ ಪುಳಕಗೊಳ್ಳುತ್ತಾರೆ. ಆದರೆ (Mangaluru) ಮಂಗಳೂರು ನಗರ ಹೊರವಲಯದ ನೀರುಮಾರ್ಗದ ಮಾಣೂರು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಯೂರವೊಂದು ಕಾಲಿಗೆ ಗೆಜ್ಜೆ ಕಟ್ಟಿ ಪ್ರತಿನಿತ್ಯ ನಾಟ್ಯ ಮಾಡುತ್ತಿದೆ.

ಈ ನರ್ತನದ ವೀಡಿಯೋ ಈಗ ವೈರಲ್‌ ಆಗಿದೆ. ಇಲ್ಲಿನ ಅರ್ಚರು ನವಿಲಿಗೆ ಗೆಜ್ಜೆ ಕಟ್ಟಿದ್ದಾರೆ. ಇದರಿಂದ ನವಿಲು ಖುಷಿಯಿಂದ ನರ್ತನ ಮಾಡುತ್ತಿದೆ. ವರದಿ ಪ್ರಕಾರ, ಇದೇ ನವಿಲು ಅರ್ಚಕರ ಮನೆಗೆ ಬಂದು ನಿತ್ಯವೂ ಕುಣಿಯುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ನಾಟ್ಯ ಮಯೂರಿಯ ನೃತ್ಯಕ್ಕೆ ದೇವಸ್ಥಾನಕ್ಕೆ ಬರುವ ಭಕ್ತರು ನಿಜಕ್ಕೂ ಖುಷಿಗೊಂಡಿದ್ದಾರೆ. ಮಯೂರ ನೃತ್ಯಕ್ಕೆ ಭಕ್ತರು ಕಾಯುತ್ತಾ ಕುಳಿತಿರುತ್ತಾರೆ. ಗೆಜ್ಜೆ ಸದ್ದಿಗೆ ಭಕ್ತರು ಭಕ್ತಿಯಲ್ಲಿ ಮೈಮರೆಯುತ್ತಾರೆ. ದೇವಸ್ಥಾನದಲ್ಲಿ ನೃತ್ಯ ಮಾಡುವ ಈ ಮಯೂರಿ, ಸಂಜೆಯಾಗ್ತಿದ್ದಂತೆ ಅರ್ಚಕರ ಮನೆಗೆ ಹೋಗಿ ಅಲ್ಲಿ ಕೂಡಾ ನೃತ್ಯ ಮಾಡುತ್ತದೆ.

 

ಇದನ್ನು ಓದಿ: Kota Srinivas Poojary: ಹರೀಶ್‌ ಪೂಂಜ ವಿರುದ್ಧ FIR, ಕೋಟ ಶ್ರೀನಿವಾಸ್‌ ಪೂಜಾರಿ ಅವರಿಂದ ಬಿಗ್‌ ಅಪ್ಡೇಟ್‌!!!

Leave A Reply

Your email address will not be published.