

Rocking Star Yash: ಕನ್ನಡದ ಅಗ್ರಗಣ್ಯ ಚಿತ್ರನಟರಲ್ಲಿ ರಾಕಿಂಗ್ ಸ್ಟಾರ್ ಯಶ್(Rocking Star Yash) ಕೊಡ ಒಬ್ರು. ಕೆಜಿಫ್ ಮೂಲಕ ಮಹಾನ್ ನಟರಾಗಿ ಬೆಳೆದು ಇಡೀ ಭಾರತೀಯ ಚಿತ್ರರಂಗವನ್ನೇ ಧೂಳೆಬ್ಬಿಸಿದವರು ಈ ಯಶ್. ಇದಾದ ಬಳಿಕ ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಯಾವುದೇ ಸೀಕ್ರೇಟ್ ಲೀಕ್ ಆಗಿಲ್ಲ. ಅಲ್ಲೊಂದು ಇಲ್ಲೊಂದು ಗುಸು ಗುಸು ಕೇಳಿಬಂದರೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಲ್ಲ. ಆದರೆ ಈ ನಡುವೆಯೇ ರಾಕಿಭಾಯ್ ಅಭಿಮಾನಿಗಳಿಗೆ ದೊಡ್ಡ ಆಘಾತವೊಂದು ಎದುರಾಗಿದ್ದು ಯಶ್ ಪೋಲಿಯೋ ಸೊಂಕಿನಿಂದ ಬಳಲುತ್ತಿದ್ದಾರೆ ಎನ್ನುವ ಆಘಾತಕಾರಿ ವಿಷಯವೊಂದು ಹೊರಬಿದ್ದಿದೆ.
ಹೌದು, ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿರುವ ವಿಡಿಯೋ ಒಂದು ಚಂದನವನದಲ್ಲಿ ಈ ರೀತಿಯಾಗಿ ಗುಲ್ಲೆಬ್ಬಿಸಿದೆ. ಅಂದಹಾಗೆ Box Office – South India ಎಂಬ ಎಕ್ಸ್(ಟ್ವಿಟ್ಟರ್)ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಿಂದ ಇದೀಗ ಯಶ್ ಕಾಲಿಗೆ ಪೋಲಿಯೋ ಆಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು. ಆದ್ದರಿಂದ ಯಶ್ ಅವರ ಮುಂದಿನ ಸಿನಿಮಾ, ಸಿನಿಮಾದ ಶೂಟಿಂಗ್ ಅನ್ನು ಮುಂದೂಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಮುಖ್ಯವಾಗಿ ಯಶ್ ಅವರು ಮುಂದೆ ತಮ್ಮ 19ನೇ ಸಿನಿಮಾ ಘೋಷಣೆ ಮಾಡಬೇಕಿತ್ತು. ಆದರೆ ಕೆಜಿಎಫ್ ಮೂಲಕ ಸಾಕಷ್ಟು ಭರವಸೆ ಮೂಡಿಸಿದ್ದ ನಟ ಏಕಾಏಕಿ ಸುಮ್ಮನಾಗಿಬಿಟ್ಟಿದ್ದರು. ಕೆಲವು ದಿನಗಳಿಂದ ಸಾರ್ವಜನಿಕವಾಗಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಸೋಷಿಯಲ್ ವಿಡಿಯಾದಲ್ಲೆ ವೈರಲ್ ಆದ ವಿಡಿಯೋ ಇಡೀ ಅಭಿಮಾನಿ ಬಳಗವನ್ನೇ ನಲುಗಿಸಿಬಿಟ್ಟಿದೆ.
ವೈರಲ್ ಆದ ವಿಡಿಯೋದಲ್ಲಿ
ಯಶ್ ಕಾಲಿಗೆ ಪೋಲಿಯೋ ಆಗಿದೆ. ಆದ್ದರಿಂದ Yash19 ಸಿನಿಮಾದ ಶೂಟಿಂಗ್ ಡೇಟ್ ಮುಂದೂಡಲಾಗುತ್ತಿದೆ ಎಂದು ಹೇಳಲಾಗಿದೆ. ಅದೇ ರೀತಿ ವಿಡಿಯೋದಲ್ಲಿ ಯಶ್ ಲೆಗ್ ವರ್ಕೌಟ್ನ ವಿಡಿಯೋ ಹರಿಬಿಡಲಾಗಿದೆ. ನಟನ ಕಾಲಿಗೆ ಪೋಲಿಯೋ ಸೋಂಕು ತಗುಲಿದೆ. ಇದೇ ಕಾರಣಕ್ಕೆ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುತ್ತಿದೆ. ಸದ್ಯ ಯಶ್ ಅವರು ಚೇತರಿಸಿಕೊಳ್ಳುತ್ತಿದ್ದು, ನಾವಿಬ್ಬರೂ ಒಂದೇ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದೇವೆ. ಒಮ್ಮೆ ಯಶ್ ಸಂಪೂರ್ಣವಾಗಿ ಚೇತರಿಸಿಕೊಂಡರೆ, yash19 ಪ್ರಾಜೆಕ್ಟ್ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಎಂದು ಬರೆಯಲಾಗಿದೆ.
ಹೀಗೆ ಯಶ್ ಕಾಲಿಗೆ ಪೋಲಿಯೋ ಆಗಿದೆ ಎಂದು ವಿಡಿಯೋದಲ್ಲಿ ಹೇಳಿದ್ರೆ. ಈ ವಿಡಿಯೋ ಸುಳ್ಳು ಅದರಲ್ಲಿ ಇರೋದು ಯಶ್ ಅಲ್ವೇ ಅಲ್ಲ. ವಿಡಿಯೋದಲ್ಲಿರುವ ಯಶ್ ಫೇಕ್, ಈ ವ್ಯಕ್ತಿಯನ್ನ ಅಮೆಜಾನ್ ಅಥವಾ ಮೀಶೋ ಆ್ಯಪ್ನಿಂದ ಆರ್ಡರ್ ಮಾಡಿರಬೇಕು ಎಂದು ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಹಲವರು ಚಿಕ್ಕ ವಯಸ್ಸಿನಲ್ಲಿ ಮಾತ್ರ ಪೋಲಿಯೋ ಬರೋದು. ಪೋಲಿಯೋ ಲಸಿಕೆ ಹಾಕಿಸಿಕೊಳ್ಳದೆ ಹೋದಲ್ಲಿ ಮಾತ್ರ ದೊಡ್ಡವರಿಗೆ ಪೋಲಿಯೋ ಆಗುತ್ತೆ. ಈ ರೀತಿಯಾಗಿ ಸುಳ್ಳು ಸಂದೇಶ ರವಾನಿಸಬೇಡಿ ಎಂದಿದ್ದಾರೆ. ಒಟ್ಟಿನಲ್ಲಿ ಯಾವುದ ಸುಳ್ಳು, ಯಾವುದು ನಿಜ ಎಂಬುದು ಇನ್ನು ತಿಳಿಯಬೇಕಿದೆ. ಇದರ ಬಗ್ಗೆ ಸ್ವತಃ ಯಶ್ ಅವರೇ ಸ್ಪಷ್ಟೀಕರಣ ನೀಡುತ್ತಾರಾ?! ಎಂದು ನೋಡಬೇಕಿದೆ.
https://x.com/BoSouthIndia/status/1714245384309235847?t=grbJ2DiMaSWbSeBO6z_eGQ&s=08
ಇದನ್ನು ಓದಿ: Dakshina kannada: ಕೆರೆಗೆ ಬಿದ್ದು ಮಹಿಳೆ ಮೃತ್ಯು













