Mangaluru: ಸಂತೆ ವ್ಯಾಪಾರದಲ್ಲಿ ಧರ್ಮ ದಂಗಲ್‌ಗೆ ಯತ್ನ ಆರೋಪ: ಶರಣ್ ಪಂಪ್‌ವೆಲ್ ವಿರುದ್ಧ ಕೇಸ್ ಫೈಲ್ !

mangalore news case registered against vhp sharan pumpwell over mangaladevi temple

Mangaluru: ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಭಗವಾಧ್ವಜವನ್ನು ಹಿಂದೂಗಳ ಅಂಗಡಿಗಳಿಗೆ ಕಟ್ಟಿ ಮುಸ್ಲಿಮರ ಅಂಗಡಿಗಳಿಗೆ ಭೇಟಿ ನೀಡದೆ, ವ್ಯಾಪಾರ ಮಾಡದಂತೆ ಕರೆ ನೀಡಿದ್ದ ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್ವೆಲ್‌ ಕರೆ ನೀಡಿದ್ದರಿಂದ ಇವರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ವಿಎಚ್‌ಪಿ ಮುಖಂಡ ಶರಣ್‌ ಪಂಪ್‌ವೆಲ್‌ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಂದೂ ವ್ಯಾಪಾರಿಗಳ ಅಂಗಡಿಗಳ ಮೇಲೆ ಕೇಸರಿ ಧ್ವಜ ಹಾಕಿದ್ದರು. ಹಿಂದೂಗಳು ಹಿಂದೂ ವ್ಯಾಪಾರಿಗಳಿಂದಲೇ ವ್ಯಾಪಾರ ಮಾಡುವಂತೆ ಅವರು ಹೇಳಿಕೆಯನ್ನು ಕೂಡಾ ಮಾಧ್ಯಮಗಳಿಗೆ ನೀಡಿದ್ದರು. ಇದು ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಜಾತ್ಯತೀತ ಪಕ್ಷಗಳ ನಾಯಕರು ಖಂಡಿಸಿದ್ದರು. ಹಾಗಾಗಿ ಈ ಕುರಿತು ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ದೂರೊಂದನ್ನು ನೀಡಿದ್ದು, ಕ್ರಮ ಜರುಗಿಸಲು ಆಗ್ರಹಿಸಿದ್ದರು.

ಹಾಗಾಗಿ ಪಾಂಡೇಶ್ವರ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಎಸ್‌ಐ ಮನೋಹರ್‌ ಪ್ರಸಾದ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

Leave A Reply

Your email address will not be published.