Pramod muthalik: ಅದನ್ನು ಮಾಡಿ, ಆದರೆ ಮದುವೆ ಬೇಡ !! ಸಲಿಂಗಿ ವಿವಾಹದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಪ್ರಮೋದ್ ಮುತಾಲಿಕ್

Karnataka news Pramod muthalik opposed homo marriage latest news

Pramod muthalik: ಸಲಿಂಗ ವಿವಾಹ ವಿಚಾರದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿರೋದು ಎಲ್ಲರಿಗೂ ತಿಳಿದೇ ಇದೆ. ಇದೀಗ ಈ ಸಲಿಂಗ ವಿವಾಹದ ಕುರಿತು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್(Pramod muthalik) ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಹೌದು, ರಾಷ್ಟ್ರದಲ್ಲಿ ಬಾರಿ ಸದ್ದು ಮಾಡುತ್ತಿದ್ದ ಸಲಿಂಗಿ ವಿವಾಹ ವಿಚಾರದ ಕುರಿತು ಸುಪ್ರೀಂ ಕೋರ್ಟ್(Supreme court) ಮಹತ್ವದ ತೀರ್ಪು ನೀಡಿದ್ದು, ಕಾನೂನಲ್ಲಿ ಅದಕ್ಕೆ ಮಾನ್ಯತೆ ಇಲ್ಲ ಆದರೆ ಅದನ್ನು ಮಾನ್ಯ ಮಾಡುವ ವಿಚಾರವನ್ನು ಸಂಸತ್ತಿಗೆ ಬಿಟ್ಟದ್ದು ಎಂದು ಮಹತ್ವದ ತೀರ್ಪು ನೀಡಿದೆ. ಆದರೆ ಈ ಬೆನ್ನೆಲ್ಲೇ ಇದೀಗ ಶ್ರೀರಾಮ ಸೇನೆಯ ಸಂಸ್ಥಾಪಕ, ಹಿಂದೂ ಸಂಘಟನೆಗಳ ಫೈರ್ ಬ್ರಾಂಡ್ ಆಗಿರುವ ಪ್ರಮೋದ್ ಮುತಾಲಿಕ್ ಮಹತ್ವದ ಹೇಳಿಕೆ ನೀಡಿದ್ದು ಎಷ್ಟು ಬೇಕಾದರೂ ಪ್ರೀತಿ ಮಾಡಿ, ಆದರೆ ಮದುವೆ ಬೇಡ ಎಂದು ಹೇಳಿದ್ದಾರೆ.

ಅಂದಹಾಗೆ ಉಡುಪಿಯಲ್ಲಿ(Udupi) ಈ ಕುರಿತು ಮಾತನಾಡಿದ ಅವರು ಸಲಿಂಗಿ ಮದುವೆ, ಸೃಷ್ಟಿಗೆ ವಿರುದ್ಧವಾಗಿದೆ. ಇದನ್ನು ನಾನು ಒಪ್ಪುವುದಿಲ್ಲ. ಮದುವೆ ಪವಿತ್ರವಾದ ಬಂಧನ, ಅದಕ್ಕೆ ಕಳಂಕ ಬೇಡ. ಬೇಕಾದಷ್ಟು ಪ್ರೀತಿ ಮಾಡಿ ಅಡ್ಡಿಯಿಲ್ಲ, ಆದರೆ ಸಲಿಂಗಿ ಮದುವೆ ಬೇಡ. ಅತ್ಯಂತ ಅಸಹ್ಯವಾದ ಪ್ರಕ್ರಿಯೆಗೆ ಕಾನೂನು ಮಾನ್ಯತೆ ನೀಡುವುದು ಸರಿಯಲ್ಲ, ಕೇಂದ್ರ ಸರ್ಕಾರದ ನಿಲುವು ಸರಿಯಿದೆ. ಸೃಷ್ಟಿಯ ವಿರುದ್ಧದ ಕ್ರಿಯೆಗೆ ಕಾನೂನು‌ ಮುದ್ರೆ ನೀಡುವುದು ಸೂಕ್ತವಲ್ಲ’ ಎಂದು ಹೇಳಿದರು.

ಇದನ್ನೂ ಓದಿ:  Mahalingeshwara swamiji: ನರೇಂದ್ರ ಮೋದಿಯನ್ನು ಪ್ರಧಾನಿ ಮಾಡೋ ವಿಚಾರ- ತನ್ನ ಭವಿಷ್ಯದ ಬಗ್ಗೆ ತಾನೇ ಉಲ್ಟಾ ಹೊಡೆದ ಮಹಾಲಿಂಗೇಶ್ವರ ಸ್ವಾಮೀಜಿ

Leave A Reply

Your email address will not be published.