LPG Gas Cylinder: ದೀಪಾವಳಿಗೆ ಜನರಿಗೆ ಸಿಗಲಿದೆ ಎರಡು ಉಚಿತ ಗ್ಯಾಸ್ ಸಿಲಿಂಡರ್; ಸರಕಾರದಿಂದ ಮಹತ್ವದ ಘೋಷಣೆ
yogi government ready to give free lpg gas cylinder in a year from diwali
Free LPG Gas Cylinder: ಚುನಾವಣೆ ಸಂದರ್ಭ ಉತ್ತರ ಪ್ರದೇಶದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಒಂದು ವರ್ಷದಲ್ಲಿ ಎರಡು ಉಚಿತ ಸಿಲಿಂಡರ್(Free LPG Gas Cylinder) ನೀಡುವುದಾಗಿ ಘೋಷಿಸಿತ್ತು. ಆದರೆ ಇದು ಈ ದೀಪಾವಳಿಯಿಂದ (Dipavali 2023) ಸುಮಾರು ಒಂದೂವರೆ ವರ್ಷಗಳ ನಂತರ ಪ್ರಾರಂಭವಾಗಲಿದೆ. ಈ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ ಕುರಿತು ಯುಪಿ ಮುಖ್ಯ ಕಾರ್ಯದರ್ಶಿ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಮಾರ್ಗಸೂಚಿಗಳನ್ನು ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಉಜ್ವಲ ಯೋಜನೆಯಡಿ ಸುಮಾರು ಒಂದು ಕೋಟಿ 75 ಲಕ್ಷ ಗ್ಯಾಸ್ ಸಂಪರ್ಕಗಳಿವೆ. ಈ ಬಾರಿ ಮೊದಲ ಬಾರಿಗೆ ದೀಪಾವಳಿ ಸಂದರ್ಭದಲ್ಲಿ ಉಚಿತ ಸಿಲಿಂಡರ್‌ಗೆ ಹಣವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಈ ಗ್ಯಾಸ್ ಸಂಪರ್ಕ ಹೊಂದಿರುವವರ ಖಾತೆಗಳಿಗೆ ಕಳುಹಿಸಲಾಗುವುದು. ಸೋಮವಾರದಂದು ಲಕ್ನೋದಲ್ಲಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ದೀಪಾವಳಿ ಜೊತೆಗೆ ಹೋಳಿಯಲ್ಲಿಯೂ ಉಚಿತ ಸಿಲಿಂಡರ್;
ಈ ನಿರ್ಧಾರಕ್ಕೂ ಮುನ್ನ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಹಣದ ವ್ಯವಸ್ಥೆಯನ್ನೂ ಮಾಡಿದೆ. ಆಹಾರ ಮತ್ತು ವ್ಯವಸ್ಥಾಪನಾ ಇಲಾಖೆಯ ಈ ಪ್ರಸ್ತಾವನೆಗೆ ಶೀಘ್ರವೇ ಸಚಿವ ಸಂಪುಟದ ಅನುಮೋದನೆ ದೊರೆಯಲಿದೆ. ಉಜ್ವಲಾ ಯೋಜನೆಯ ಮಹಿಳಾ ಫಲಾನುಭವಿಗಳಿಗೆ ದೀಪಾವಳಿಯ ಮೊದಲು ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು ಎಂದು ಹೇಳಲಾಗುತ್ತಿದೆ.
ಅದೇ ರೀತಿ ಹೋಳಿ ಹಬ್ಬದಂದು ಕೂಡ ಉಚಿತ ಸಿಲಿಂಡರ್ ನೀಡಲಾಗುವುದು, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉಜ್ವಲ ಯೋಜನೆಯ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಿಲಿಂಡರ್ ನೀಡುವುದಾಗಿ ಘೋಷಣೆ ಮಾಡಿತ್ತು. ಇದಕ್ಕಾಗಿ ಕಳೆದ ವರ್ಷ ಹೋಳಿ ಮತ್ತು ದೀಪಾವಳಿಯಂದು ಉಜ್ವಲ ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ನೀಡಲು ಬಜೆಟ್‌ನಲ್ಲಿ 3300 ಕೋಟಿ ರೂ.ಗೂ ಹೆಚ್ಚು ಹಣ ಮೀಸಲಿಡಲಾಗಿತ್ತು.
ಇದನ್ನೂ ಓದಿ: ದಕ್ಷಿಣ ಕನ್ನಡ: ನವರಾತ್ರಿ – ಕೊರಗ ಜನಾಂಗದ ವೇಷ ಧರಿಸಿ ಕುಣಿದರೆ ಜೈಲು ಗ್ಯಾರಂಟಿ -ಸಮಾಜ ಕಲ್ಯಾಣ ಇಲಾಖೆ ಎಚ್ಚರಿಕೆ