Dakshina Kannada: ನವರಾತ್ರಿ – ಕೊರಗ ಜನಾಂಗದ ವೇಷ ಧರಿಸಿ ಕುಣಿದರೆ ಜೈಲು ಗ್ಯಾರಂಟಿ -ಸಮಾಜ ಕಲ್ಯಾಣ ಇಲಾಖೆ ಎಚ್ಚರಿಕೆ

managaluru social welfare departs warns dressing up as koraga tribe

Social welfare department: ಮಂಗಳೂರು: ದಸರಾ ಆಚರಣೆಯ ಸಮಯದಲ್ಲಿ ಅನ್ಯ ಸಮುದಾಯದವರು ಕೊರಗ ಜನಾಂಗದವರ ವೇಷ ಧರಿಸಿ ಅಂಗಡಿ, ಮನೆಗಳ ಮುಂದೆ ಕುಣಿದರೆ ಇನ್ನು ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ಈ ರೀತಿ ಜಾತಿ ನಿಂದನೆಯ ಕುರಿತು ಬಿಗ್‌ ಮಾಹಿತಿ ಇಲ್ಲಿದೆ. ದಸರಾ ಹಬ್ಬದ ಸಮಯದಲ್ಲಿ ಇಂತಹ ಘಟನೆಗಳು ಏನಾದರೂ ಕಂಡು ಬಂದರೆ ಹತ್ತಿರದ ಪೊಲೀಸ್‌ ಠಾಣೆಗೆ ತಿಳಿಸಲು ಸಮಾಜ ಕಲ್ಯಾಣ ಇಲಾಖೆಯ (Social welfare department)ಸಹಾಯಕ ನಿರ್ದೇಶಕರು ಸೂಚಿಸಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ನವರಾತ್ರಿ ಹಬ್ಬದ ಸಂದರ್ಭ ವೇಷ ತೊಟ್ಟು ಮನೆ ಮನೆಗೆ, ಅಂಗಡಿಗೆ ಹೋಗುವುದು ಸಾಮಾನ್ಯ. ಇದರಲ್ಲಿ, ಹುಲಿ, ಕರಡಿ, ಸಿಂಹ, ಜೋಕರ್‌, ಅನಾರ್ಕಲಿ ಇತ್ಯಾದಿ ಪ್ರಸಿದ್ಧ ವೇಷಗಳು ಇವೆ. ಇದು ಮಾತ್ರವಲ್ಲದೇ, ಕೊರಗ ಜನಾಂಗದವರ ವೇಷ ತೊಡುವವರು ಕೂಡಾ ಇದ್ದಾರೆ. ಇದನ್ನು ಕಾನೂನು ಪ್ರಕಾರ ನಿಷೇಧ ಮಾಡಿದರೂ, ಅಲ್ಲಲ್ಲಿ ಈ ವೇಷ ತೊಡುವುದು ಕಂಡು ಬರುತ್ತದೆ.

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಕೊರಗ ಸಮುದಾಯದವರು ಹೆಚ್ಚಾಗಿ ಇದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆಗಳ ಕೆಲ ಭಾಗಗಳಲ್ಲಿ ಸ್ವಲ್ಪ ಸಂಖ್ಯೆಯಲ್ಲಿ ಇದ್ದಾರೆ.

ಉಳಿದ ಹಾಗೆ ಅಮವಾಸ್ಯೆ ದಿನಗಳಲ್ಲಿ ಕೊರಗ ಜನಾಂಗದ ಹೆಂಗಸರಿಗೆ ತಲೆ ಕೂದಲುಗಳನ್ನು ಊಟದಲ್ಲಿ ಹಾಕಿ ಊಟ ಮಾಡಲು ಹೇಳುವುದು, ಚಿಕ್ಕ ಮಕ್ಕಳಿಗೆ ಕಾಯಿಲೆ ಇದ್ದಾಗ ಕೊರಗ ಜನಾಂಗದ ಮಹಿಳೆಯನ್ನು ಕರೆದು ಮಗುವಿಗೆ ಹಾಲುಣಿಸಲು ಹೇಳುವುದು, ನಂತರ ಮಗುವಿನ ಕಾಯಿಲೆಯನ್ನು ಕೊರಗ ಜನಾಂಗದವರಿಗೆ ಹರಡುವಂತೆ ಮಾಡುವುದು, ಜಾನಪದ ಕ್ರೀಡೆಯಾದ ಕಂಬಳದಲ್ಲಿ ಹಿಂದಿನ ದಿನ ಕಂಬಳದ ಕೆರೆಯಲ್ಲಿ ಕುಪ್ಪಿ ಚೂರು, ಮುಳ್ಳು ಇದ್ದರೆ ಆ ಕೆರೆಯಲ್ಲಿ ಕೊರಗ ಜನಾಂಗದವರನ್ನು ಬಳಸುವುದು ಜಾತ್ರೆ, ಕಂಬಳ ಸಮಾರಂಭಗಳಲ್ಲಿ ಡೋಲು ಬಡಿತ, ಕುಣಿತಕ್ಕೆ ಬಳಸಿಕೊಳ್ಳುವುದು, ಬೇರೆ ಜನಾಂಗದವರ ಹೆಂಗಸರಿಗೆ ಸೀಮಂತದ ದಿನ ಕೊರಗ ಜನಾಂಗದ ಮಹಿಳೆಯನ್ನು ಕರೆದು ಎಂಜಲು ಮಾಡಿಸಿ, ದೃಷ್ಟಿ ತೆಗೆಯಲು ಬಳಸಿಕೊಳ್ಳುವುದು ನಿಷೇಧಿಸಲಾಗಿದೆ.

ಅಜಲು ಪದ್ಧತಿ ನಷೇದ ಕಾಯಿದೆಯಡಿ ಈ ಎಲ್ಲಾ ಚಟುವಟಿಕೆ ಬರುವುದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲೆ ದೌರ್ಜನ್ಯ ನಿಷೇಧ ಅಧಿನಿಯಮ 1989 ಅಡಿಯಲ್ಲಿ ಬರುತ್ತದೆ. ಕಾನೂನು ಕ್ರಮ ಜರುಗಿಸಿದರೆ 5ರಿಂದ 6ವರ್ಷಗಳ ವರೆಗೆ ಕಾರಾಗೃಹವಾಸ ಮತ್ತು ರೂ.5000 ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ: Pappaya: ಚಪ್ಪರಿಸಿಕೊಂಡು ಪಪ್ಪಾಯ ತಿನ್ನುತ್ತೀರಾ ?! ಹಾಗಿದ್ರೆ ತಪ್ಪದೆ ಈ ವಿಚಾರ ತಿಳಿಯಿರಿ

Leave A Reply

Your email address will not be published.