Papaya: ಚಪ್ಪರಿಸಿಕೊಂಡು ಪಪ್ಪಾಯ ತಿನ್ನುತ್ತೀರಾ ?! ಹಾಗಿದ್ರೆ ತಪ್ಪದೆ ಈ ವಿಚಾರ ತಿಳಿಯಿರಿ
Lifestyle help news papaya benefits know this before eating papaya
Papaya: ಹಣ್ಣು- ತರಕಾರಿಗಳೆಂದರೆ ಹೆಚ್ಚಿನವರಿಗೆ ಪಂಚಪ್ರಾಣ. ಅದರಲ್ಲೂ ಕೂಡ ಡಯಟ್ ಮಾಡುವವರಿಗಂತೂ ತುಂಬಾ ಫೇವರಿಟ್!! ಹೆಚ್ಚಿನ ಪ್ರೋಟೀನ್ ಗಳನ್ನು ನೀಡುವುದರಿಂದ ಡಯಟ್ ಫುಡ್ ಆಗಿ ಹಣ್ಣುಗಳನ್ನು ಹೆಚ್ಚಿನವರು ಇಷ್ಟಪಟ್ಟು ತಿನ್ನುತ್ತಾರೆ. ಒಬ್ಬೊಬ್ಬರಿಗೂ ಒಂದೊಂದು ಹಣ್ಣು ಇಷ್ಟವಿರುತ್ತದೆ. ಅದರಲ್ಲೂ ಕೂಡ ಕೆಲವರಿಗೆ ಪಪ್ಪಾಯ(Papaya) ಹಣ್ಣು ಎಂದರೆ ಬಲು ಪ್ರೀತಿ. ಒಂದು ವೇಳೆ ನಿಮಗೂ ಪಪ್ಪಾಯ ಹಣ್ಣು ಇಷ್ಟ, ಚಪ್ಪರಿಸಿಕೊಂಡು ಅದನ್ನು ತಿನ್ನುತ್ತೇವೆ ಎಂದರೆ ಮೊದಲು ನೀವು ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಹೌದು, ಹಣ್ಣುಗಳಲ್ಲಿಯೇ ಹೆಚ್ಚಿನ ಆರೋಗ್ಯಕರ ಲಾಭಗಳನ್ನು ಒದಗಿಸುವ ಹಣ್ಣೆಂದರೆ ಅದು ಪಪ್ಪಾಯ. ಹಲವರು ದುಡ್ಡುಕೊಟ್ಪು ತಂದರೆ ಕೆಲವರು ಮನೆಯಲ್ಲೇ ಬೆಳೆಯುತ್ತಾರೆ. ಒಟ್ಟಿನಲ್ಲಿ ಸುಲಭವಾಗಿಯೂ, ಅಗ್ಗದಲ್ಲಿಯೂ ಸಿಗುವ ಹಣ್ಣು ಇದು. ಇನ್ನೂ ಗರ್ಭಿಣಿಯರು ಈ ಪಪ್ಪಾಯವನ್ನು ಸೇವಿಸಬಾರದು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಇದನ್ನು ಬಿಟ್ರೆ ಪಪ್ಪಾಯದಿಂದ ಹಲವು ಪ್ರಯೋಜನಗಳೇ ಇವೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇದನ್ನು ತಿನ್ನುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿಟ್ನುಕೊಳ್ಳಿ.
ಪಪ್ಪಾಯದಿಂದ ಏನೆಲ್ಲಾ ಲಾಭಗಳಿವೆ?
• ವಿಟಮಿನ್ ಎ ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಹೇರಳವಾಗಿ ಹೊಂದಿರುವ ಇದು ಮೂತ್ರಪಿಂಡದ ಹಲವು ಕಾಯಿಲೆಗಳಿಗೆ ಮದ್ದಾಗಬಲ್ಲದು.
• ಮುಖದ ಕಾಂತಿಯನ್ನೂ ಹೆಚ್ಚಿಸುವಲ್ಲಿಯೂ ಇದು ತುಂಬಾ ಸಹಕಾರಿಯಾಗಿದೆ.
• ನಾರಿನಂಶ ಹೆಚ್ಚಿರುವ ಈ ಹಣ್ಣಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
• ಕರುಳನ್ನು ಶುದ್ಧಗೊಳಿಸುತ್ತದೆ.
• ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹ ಪೋಷಕಾಂಶಗಳನ್ನು ಹೀರಿಕೊಳ್ಳಲು ಅನುವು ಮಾಡಿ ಕೊಡುತ್ತದೆ.
• ಪಪ್ಪಾಯಿಯ ಕಾಯಿಗಳು ಪ್ರೋಟೀನ್, ಫೈಟೊನ್ಯೂಟ್ರಿಯೆಂಟ್ , ಪಪೈನ್ ಮತ್ತು ಚೈಮೊಪಪೈನ್‌ನಂತಹ ಕಿಣ್ವಗಳನ್ನು ಹೊಂದಿರುತ್ತದೆ, ಇದು ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕಡಿಮೆ ಮಾಡಿ ದೇಹದ ತೂಕ ಇಳಿಕೆಗೆ ಸಹಕಾರಿಯಾಗಿದೆ.
•ಪಪ್ಪಾಯ ತಿಂದಾಗ ವಹಿಸಬೇಕಾದ ಎಚ್ಚರಿಕೆಗಳು!!
ಪಪ್ಪಾಯ ತಿಂದ ನಂತರ ಹೆಚ್ಚು ನೀರು ಕುಡಿಯಬಾರದು. ಯಾಕೆಂದರೆ ಪಪ್ಪಾಯ ಹಣ್ಣಿನಲ್ಲಿ ಸಾಕಷ್ಟು ನೀರಿದೆ. ಈ ಹಣ್ಣು ತಿಂದ ಬಳಿಕ ಮತ್ತೆ ನೀರು ಕುಡಿದರೆ ಹೊಟ್ಟೆ ಉಬ್ಬರ ಉಂಟಾಗಿ ಅಜೀರ್ಣ ಸಮಸ್ಯೆಗೆ ಕಾರಣವಾಗಬಹುದು. ಹೀಗಿರುವಾಗ ಮೇಲೆ ಹೇಳಿದ ಪ್ರಯೋಜನಗಳು ಸಿಗಬೇಕಾದರೆ ಹಣ್ಣು ತಿಂದಮೇಲೆ ನೀರು ಕುಡಿಯಬೇಡಿ.
ಹೀಗಾಗಿ ವಾರದಲ್ಲಿ ಒಮ್ಮೆಯಾದರೂ ಪಪ್ಪಾಯ ಕಾಯಿಯನ್ನು ಬಳಕೆ ಮಾಡಿ. ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು.
ಇದನ್ನೂ ಓದಿ: Sherica de Armas : ಕ್ಯಾನ್ಸರ್’ಗೆ 26ರ ಮಾಜಿ ವಿಶ್ವ ಸುಂದರಿ ಸ್ಪರ್ಧಿ ಬಲಿ – ದಯವಿಟ್ಟು ಈ ಲಕ್ಷಣಗಳಿದ್ರೆ ನಿರ್ಲಕ್ಷಿಸದಿರಿ