C M Ibrahim: ನಮ್ಮ ಬೆಂಬಲ ಕಾಂಗ್ರೆಸ್’ಗೆ, ನಮ್ಮದೇ ಒರಿಜನಲ್ ಜೆಡಿಎಸ್, ನಾನೇ ಜೆಡಿಎಸ್ ಅಧ್ಯಕ್ಷ !! ಹೊಸ ಬಾಂಬ್ ಸಿಡಿಸಿದ ಸಿಎಂ ಇಬ್ರಾಹಿಮ್
New statement by CM Ibrahim in JDS
C M Ibrahim: ರಾಜ್ಯ ರಾಜಕೀಯದಲ್ಲಿ ದಸರಾ ಸಂದಭ್ರಮದ ಹೊತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದೇ ಬಹಳ ಕುತೂಹಲಕಾರಿಯಾಗಿದೆ. ಒಂದೆಡೆ ಬಿಜೆಪಿ(BJP) ನಾಯಕರು ಕಾಂಗ್ರೆಸ್(Congress) ಸೇರಲು ಮುಂದಾದರೆ ಇನ್ನೊಂದೆಡೆ ಕಾಂಗ್ರೆಸ್ ಪಾಳಯದಲ್ಲಿ ಸತೀಶ್ ಜಾರಕಿಹೊಳಿಯವರು 20 ಶಾಸಕರನ್ನು ಕೂರಿಸಿಕೊಂಡು ಬಸ್ ಹತ್ತಲು ರೆಡಿಯಾಗಿದ್ದಾರೆ. ಭಾರೀ ಶಾಕಿಂಗ್ ನ್ಯೂಸ್ ಎಂದರೆ ಇತ್ತ ಜೆಡಿಎಸ್(JDS) ನಲ್ಲಿ ಸಿಎಂ ಇಬ್ರಾಹಿಂ(CM Ibrahim) ಅವರು ಹೊಸ ಬಾಂಬನ್ನೇ ಸಿಡಿಸಿಬಿಟ್ಟಿದ್ದು, ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗುವಂತಹ ಎಲ್ಲಾ ಸೂಚನೆಗಳನ್ನು ನೀಡಿದ್ದಾರೆ.
ಕಳೆದ ವರ್ಷ ಮಹಾರಾಷ್ಟ್ರದಲ್ಲಿ(Maharastra) ಕಾಂಗ್ರೆಸ್ ಜೊತೆ ಕೈಗೂಡಿಸಿದ ಶಿವಸೇನೆಯ ಉದ್ಧವ್ ಠಾಕ್ರೆಗೆ ಭಾರೀ ಆಘಾತ ಎದುರಾಗಿತ್ತು. ಪಕ್ಷದಲ್ಲಿ ಎರಡು ಬಣಗಳು ಉದ್ಭವಿಸಿ ಏಕನಾಥ್ ಶಿಂದೆ ಬಣವೇ ನಿಜವಾದ ‘ಶಿವಸೇನೆ’ ಎಂದು ಎಲ್ಲಾ ರೀತಿಯ ಅಧಿಕಾರಗಳು ಶಿಂಧೆ ಪಾಲಾಗಿ ರಾಷ್ಟ್ರ ರಾಜಕಾರಣದಲ್ಲಿ ಭಾರೀ ದೊಡ್ಡ ಕಂಪನ ಉಂಟಾಗಿತ್ತು. ಇದೀಗ ಸದ್ಯ ಕರ್ನಾಟಕದಲ್ಲೂ ಅದೇ ರೀತಿಯ ಎಲ್ಲಾ ಘಟನೆಗಳು ಸಂಭವಿಸುವ ಲಕ್ಷಣಗಳು ಬಿಗಡಾಯಿಸಿದೆ.
ಹೌದು, ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಸಿಎಂ ಇಬ್ರಾಹಿಮ್ ಅವರು ಇದೀಗ ಹೊಸ ಬಾಂಬ್ ಸಿಡಿಸಿದ್ದು ಈ ಅನುಮಾನಗಳಿಗೆ ಕಾರಣವಾಗಿದೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ವರಿಷ್ಠರ ನಡೆಗೆ ಅಸಮಾಧಾನಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಭೆ ನಡೆಸಿ ಮಾತನಾಡಿದ್ದು, ಎನ್ಡಿಎ ಸೋಲಿಸಬೇಕಿದೆ. ನಾವು ಕಾಂಗ್ರೆಸ್ ಬೆಂಬಲ ನೀಡುತ್ತೇವೆ. ಜೆಡಿಎಸ್ ಒರಿಜಿನಲ್ ನಮ್ಮದೆ. ನಾನು ಅದರ ಅಧ್ಯಕ್ಷ, ನನ್ನನ್ನ ತೆಗೆಯಲು ಸಾಧ್ಯವಿಲ್ಲ. ಏನಾಗುತ್ತದೆ ನೋಡೋಣ ಎಂದು ಹೊಸ ವರಸೆಯ ಮೂಲಕ ಕರ್ನಾಟಕ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗುವ ಸುಳಿವನ್ನು ನೀಡಿದ್ದಾರೆ.
ಇಷ್ಟೇ ಅಲ್ಲದೆ ಜೆಡಿಎಸ್ ಮುಖಂಡರು ಹಾಗೂ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಗುಡುಗಿರುವ ಅವರು 1995ರಲ್ಲಿ ಜೆಡಿಎಸ್ ಅಧ್ಯಕ್ಷನಾಗಿ 16 ಲೋಕಸಭೆ ಸದಸ್ಯರನ್ನ ಗೆಲ್ಲಿಸಿ ದೇವೇಗೌಡರನ್ನ ಪ್ರಧಾನಿ ಮಾಡಿದ್ದ ಕೀರ್ತಿ ಇದೆ. ಹೀಗಾಗಿ ಇವತ್ತು ದೇಶಕ್ಕೆ ದೊಡ್ಡ ಸಂದೇಶ ಹೋಗಬೇಕು. ಜಿಲ್ಲಾ ಅಧ್ಯಕ್ಷರು ನನ್ನ ಕರೆಯಲಿಲ್ಲ. ಇಂದು ನನ್ನ ಸಂಪರ್ಕದಲ್ಲಿ ಶಾಸಕರು ಇದ್ದಾರೆ. ಕೋರ್ ಕಮಿಟಿ ಮಾಡಿ ಸಾಧಕ ಬಾಧಕ ಮಾಡುತ್ತೇನೆ ಎಂಬ ಖಡಕ್ ಸಂದೇಶವನ್ನೂ ರವಾನಿಸಿದ್ದಾರೆ.
ಅಂದಹಾಗೆ ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಮಣಿಸಲು ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳು ಸೇರಿ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿಯನ್ನು ಮಾಡಿದ ಬಳಿಕ ಜೆಡಿಎಸ್ ನಲ್ಲಿ ಇರುವಂತಹ ಹಲವಾರು ಮುಸ್ಲಿಂ ಬಾಂಧವರು ಹಾಗೂ ಅಲ್ಪಸಂಖ್ಯಾತ ಬಂಧುಗಳು ಜೆಡಿಎಸ್ ನಡೆಯನ್ನು ತಿರಸ್ಕರಿಸಿ ಕಾಂಗ್ರೆಸ್ ಸೇರಲು ಮುಂದಾಗುತ್ತಿದ್ದಾರೆ ಇದರೊಂದಿಗೆ ಜೆಡಿಎಸ್ ನ ರಾಜ್ಯ ಅಧ್ಯಕ್ಷರಾಗಿರುವಂತಹ ಸಿಎಂ ಇಬ್ರಾಹಿಂ ಅವರಿಗೆ ಮೈತ್ರಿಯ ಯಾವುದೇ ರೀತಿಯ ಮಾಹಿತಿಗಳು ಇರಲಿಲ್ಲ ಇದು ಕೂಡ ಸಿಎಂ ಇಬ್ರಾಹಿಂ ಅವರಿಗೆ ತುಂಬಾ ಬೇಸರವನ್ನುಂಟು ಮಾಡಿದೆ.
ಇನ್ನು ಮುಖ್ಯವಾದ ವಿಚಾರ ಎಂದರೆ ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ಅನ್ನು ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದವು. ಈ ವೇಳೆ ಕಾಂಗ್ರೆಸ್ ಗೆ ಕೊಕ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಶಿವಸೇನೆಯನ್ನು ಎರಡು ಬಣವಾಗಿ ವಿಂಗಡಿಸಿ ಅದರಲ್ಲಿ ಏಕನಾಥ ಶಿಂದೆ ಬಣವನ್ನು ಗೆಲ್ಲಿಸಿ ಅವರೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚಿಸಿತು. ಇದೀಗ ಈ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ಬಹುಶ ಹೊಸ ರಣತಂತ್ರವನ್ನು ರಚಿಸುತ್ತಿದ್ದು, ಸಿಎಂ ಇಬ್ರಾಹಿಂ ಅವರೊಂದಿಗೆ ಮಾತುಕತೆ ನಡೆಸಿ ಮಹಾರಾಷ್ಟ್ರದಲ್ಲೆ ನಡೆದಂತೆಯೇ ಕರ್ನಾಟಕದಲ್ಲಿ ನಡೆಸಿಈ ಬಿಜೆಪಿಗೆ ಟಕ್ಕರ್ ಕೊಡಲು ಈ ರೀತಿಯ ಬೆಳವಣಿಗೆಗಳನ್ನು ಮಾಡುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಇದನ್ನು ಓದಿ: Lip Lock Viral Video: ಚಲಿಸೋ ಕಾರಿನ ಮೇಲೆ ‘ಸರಸ’ವಾಡಿದ ಜೋಡಿಗಳು – ವೈರಲ್ ಆಯ್ತು ಲಿಪ್’ಲಾಕ್ ವೀಡಿಯೋ