Jio Recharge Plan: ಇದೊಂದು ರಿಚಾರ್ಜ್ ಮಾಡಿಸಿ, ಇಡೀ ವರ್ಲ್ಡ್ ಕಪ್ ಮ್ಯಾಚ್, OTT ಎಲ್ಲವನ್ನೂ ಉಚಿತವಾಗಿಯೇ ವೀಕ್ಷಿಸಿ !!

Technology NEWS jio announces new prepaid recharge plan Disney hotstar subscription recharge

Jio Recharge Plan: ಭಾರತದ ಟೆಲಿಕಾಂ ಕಂಪನಿಗಳಲ್ಲಿ (Telecom Companies) ಅಗ್ರಸ್ಥಾನದಲ್ಲಿರುವ ಜಿಯೋ ರಿಲಯನ್ಸ್ (JIO), ಗ್ರಾಹಕರ ಮನಸೆಳೆಯಲು ಪ್ರತಿ ಬಾರಿಯು ಹೊಚ್ಚ ಹೊಸ ಆಫರ್ ಗಳನ್ನು ನೀಡುತ್ತಿದೆ. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪೈಪೋಟಿಯಲ್ಲಿ ಮುನ್ನುಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿದಿನ ಅಧಿಕ ಡೇಟಾ ಪ್ರಯೋಜನ ನೀಡುವುದರ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳ (Jio Recharge Plan) ಆಯ್ಕೆಗಳನ್ನೂ ನೀಡುತ್ತಿದೆ.

ಇದೀಗ ದೇಶದ ಜನಪ್ರಿಯ ಟೆಲಿಕಾಂ ಕಂಪನಿಯಾದ ರಿಲಯನ್ಸ್ Jio ತನ್ನ ಗ್ರಾಹಕರಿಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುವ ರಿಚಾರ್ಜ್ ಪ್ಲ್ಯಾನ್ ಗಳನ್ನು ಪರಿಚಯಿಸಿದೆ. ನೀವು Jio ಗ್ರಾಹಕರಾಗಿದ್ದರೆ ಈ ರಿಚಾರ್ಜ್ ಪ್ಲ್ಯಾನ್ ಅನ್ನು ಬಳಸಿಕೊಂಡು World Cup ಪಂದ್ಯವನ್ನು Disney+ Hotstar ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.

2023 ರ ವರ್ಲ್ಡ್ ಕಪ್ ಅರಂಭಗೊಂಡಿದೆ. ಕ್ರಿಕೆಟ್ ಅಭಿಮಾನಿಗಳು ಭಾರೀ ಕುತೂಹಲದಿಂದ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಆದರೆ, ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್ ಇಲ್ಲಿದೆ. ನೀವು ವರ್ಲ್ಡ್ ಕಪ್ ಪಂದ್ಯವನ್ನು ಸ್ಟೇಡಿಯಂ ಗೆ ಹೋಗಿ ನೋಡಬೇಕೆಂದಿಲ್ಲ. ಬದಲಾಗಿ ಇದೊಂದು ರಿಚಾರ್ಜ್ (Jio Recharge Plan) ಮಾಡಿಸಿ, ಇಡೀ ವರ್ಲ್ಡ್ ಕಪ್ ಮ್ಯಾಚ್, OTT ಎಲ್ಲವನ್ನೂ ಉಚಿತವಾಗೇ ವೀಕ್ಷಿಸಿ !!

ಜಿಯೋ 328 ರಿಚಾರ್ಜ್ ಪ್ಲ್ಯಾನ್ :
Jio 328 ರಿಚಾರ್ಜ್ ಪ್ಲ್ಯಾನ್ ನಲ್ಲಿ ನಿಮಗೆ ದಿನಕ್ಕೆ 1 .5GB ಡೇಟಾ ಹಾಗೂ 28 ದಿನಗಳ ಉಚಿತ ಕರೆ ಸೌಲಭ್ಯ ಸಿಗುತ್ತದೆ. ಈ ಯೋಜನೆ ನಿಮಗೆ ಮೂರು ತಿಂಗಳವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

ಜಿಯೋ 388 ರಿಚಾರ್ಜ್ ಪ್ಲ್ಯಾನ್ :
Jio 388 ರಿಚಾರ್ಜ್ ಪ್ಲ್ಯಾನ್ ನಲ್ಲಿ ನೀವು ದಿನಕ್ಕೆ 2GB ಡೇಟಾ ಹಾಗೂ 28 ದಿನಗಳವರೆಗೆ ಉಚಿತ ಕರೆಯನ್ನು ಪಡೆಯಬಹುದು. ಈ ಪ್ಲಾನ್ ನಿಮಗೆ ಮೂರು ತಿಂಗಳವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

ಜಿಯೋ 598 ರಿಚಾರ್ಜ್ ಪ್ಲ್ಯಾನ್ :
ಈ ಯೋಜನೆಯಲ್ಲಿ ದಿನಕ್ಕೆ 2GB ಡೇಟಾ ಜೊತೆಗೆ 56 ದಿನಗಳವರೆಗೆ ಉಚಿತ ಕಾಲ್ ಸೌಲಭ್ಯ ಇದೆ. ಈ ಪ್ಲ್ಯಾನ್ ಒಂದು ವರ್ಷದವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

ಜಿಯೋ 758 ರಿಚಾರ್ಜ್ ಪ್ಲ್ಯಾನ್ :
ದಿನಕ್ಕೆ 1 .5GB ಡೇಟಾದ ಜೊತೆಗೆ 84 ದಿನಗಳವರೆಗೆ ಉಚಿತ ಕರೆಯನ್ನು ಪಡೆಯಬಹುದು. ಈ ಯೋಜನೆ ನಿಮಗೆ ಮೂರು ತಿಂಗಳವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

ಜಿಯೋ 808 ರಿಚಾರ್ಜ್ ಪ್ಲ್ಯಾನ್ :
ಈ ಯೋಜನೆಯಲ್ಲಿ ದಿನಕ್ಕೆ 2GB ಡೇಟಾ ಹಾಗೂ ಉಚಿತ ಕರೆಯನ್ನು 84 ದಿನಗಳವರೆಗೆ ಪಡೆಯಬಹುದು. ಈ ಪ್ಲ್ಯಾನ್ ನಿಮಗೆ ಮೂರು ತಿಂಗಳವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

ಜಿಯೋ 3178 ರಿಚಾರ್ಜ್ ಪ್ಲ್ಯಾನ್ :
Jio 3178 ರಿಚಾರ್ಜ್ ಪ್ಲ್ಯಾನ್ ನಲ್ಲಿ ದಿನಕ್ಕೆ 2GB ಡೇಟಾ ಸೌಲಭ್ಯವಿದೆ. ಈ ಪ್ಲಾನ್ ಒಂದು ವರ್ಷದವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

ಇದನ್ನೂ ಓದಿ: ‘ಜಾರು ಜಾಗೃತೆ’ …!!! ನಟಿ ಮೌನಿ ರಾಯ್ ಡ್ರೆಸ್ ಗೆ ಈ ರೀತಿಯಾ ಕಮೆಂಟಾ???

Leave A Reply

Your email address will not be published.