KC Raghu Passes Away: ನಾಡಿನ ಹೆಸರಾಂತ ಆಹಾರ ತಜ್ಞ ಕೆ.ಸಿ. ರಘು ನಿಧನ, ಅಚ್ಚರಿಗೆ ನೂಕಿದ ಈ ಅಕಾಲಿಕ ನಿಧನ !

Karnataka news Food Expert KC Raghu Passes Away In Bengaluru latest news

Food Expert KC Raghu Passes Away: ಹೆಸರಾಂತ, ಖ್ಯಾತ ಆಹಾರ ತಜ್ಞ ಕೆ.ಸಿ ರಘು ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಘುರವರು ಇಂದು, ಅಕ್ಟೋಬರ್ 15 ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ರಘು ಅವರ ನಿಧನ ಹಲವರನ್ನು ಅಚ್ಚರಿಗೆ ನೂಕಿದೆ.

ಖ್ಯಾತ ಆಹಾರ ತಜ್ಞ ಕೆ.ಸಿ ರಘು (Food Expert KC Raghu ) ರವರು ಚಿಕ್ಕ ಪ್ರಾಯದಲ್ಲೇ ವಿಧಿಲೀನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಘು ಇಂದು, ಅಕ್ಟೋಬರ್ 15 ರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದು, ಕೇವಲ 60 ವರ್ಷ ಪ್ರಾಯದಲ್ಲಿ ಅವರು ತೀರಿಕೊಂಡಿದ್ದಾರೆ. ಅವರು ಶ್ವಾಸಕೋಶದ ಕ್ಯಾನ್ಸರ್ ನಿಂಡ ಬಳಲುತ್ತಿದ್ದರು. ಅವರು ಬೆಂಗಳೂರಿನ ದಾಸರಹಳ್ಳಿಯ ಅಮೃತ ನಗರದಲ್ಲಿರುವ ಅವರ ನಿವಾಸದಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ಅವರ ಪತ್ನಿ ಆಶಾರವರು ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ರಘು ಅವರ ವಯಸ್ಸಲ್ಲದ ವಯಸ್ಸಿನ ಸಾವಿಗೆ ಲೋಕ ಅಚ್ಚರಿ ಪಟ್ಟಿದೆ. “Surprised” ಎನ್ನುವ ಒಟ್ಟಾರೆ ಅಭಿಪ್ರಾಯವನ್ನು ಓದುಗರ ವಿಭಾಗ ಮಾಡಿದೆ.

ಅವರು ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಎಂಬ ಸಂಸ್ಥೆ ಸ್ಥಾಪಿಸಿದ್ದರು. ಆ ಮೂಲಕ ಅವರು ನವಜಾತ ಶಿಶುಗಳಲ್ಲಿ ಕಂಡುಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಮೂಲಕ ಪರಿಹಾರವನ್ನು ಸಂಶೋಧನೆಯಿಂದ ಕಂಡುಹಿಡಿದು, ದೇಶಾದ್ಯಂತ ಹಾಗೂ ವಿದೇಶಕ್ಕೂ ಒದಗಿಸುತ್ತಿದ್ದರು. ನಿರರ್ಗಳವಾಗಿ ಮಾತನಾಡುತ್ತಿದ್ದ ರಘು ಅವರು ಆಹಾರ ಆರೋಗ್ಯದ ವಿಚಾರದಲ್ಲಿ ಅತ್ಯದ್ಭುತ ಜ್ಞಾನ ಹೊಂದಿದ್ದರು.

ಕೆ.ಸಿ. ರಘು ಅವರು ಸಂಪಾದಕರೂ ಕೂಡಾ. ಅವರು ಹಲವು ವರ್ಷಗಳ ಕಾಲ ಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅವರು ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಕೂಡಾ ಬರೆಯುತ್ತಿದ್ದರು. ಸಾಮಾನ್ಯ ವಿಜ್ಞಾನ ಮತ್ತು ಆರ್ಥಿಕತೆಯ ವಿಷಯದ ಅತಿಥಿ ಉಪನ್ಯಾಸಕರಾಗಿ ಕೂಡಾ ಅವರು ಕಾರ್ಯ ನಿರ್ವಹಿಸಿದ್ದಾರೆ.

ರಘು ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
“ನಾಡಿನ ಹೆಸರಾಂತ ಆಹಾರ ತಜ್ಞರಾದ ಶ್ರೀ ಕೆ.ಸಿ.ರಘು ಅವರ ನಿಧನ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅನೇಕ ವರ್ಷಗಳ ಕಾಲ ಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದು ಅರಿವು ಮೂಡಿಸಿದ್ದಾರೆ. ಭಗವಂತ ಅವರ….pic.twitter.com/HlGuidF5WG

— DK Shivakumar (@DKShivakumar) October 15, 2023

ಇದನ್ನೂ ಓದಿ: ಸುತ್ತಲೂ ಶತ್ರು ರಾಷ್ಟ್ರಗಳಿದ್ದರೂ ಇಸ್ರೇಲ್ ನ ತಾಕತ್ತಿನ ಹಿಂದಿರುವ ಪ್ರಬಲ ಅಸ್ತ್ರವೇನು ಗೊತ್ತೆ?!! ಗಾಜಾ ಪುಡಿ ಪುಡಿ!!!

Leave A Reply

Your email address will not be published.