KSRTC: ಫ್ರೀ ಬಸ್ಸಲ್ಲಿ ಓಡಾಡೋ ಮಹಿಳೆಯರು, ಪುರುಷರಿಗೆಲ್ಲಾ ಭರ್ಜರಿ ಸುದ್ದಿ – ದಸರಾ ಪ್ರಯುಕ್ತ KSRTC ಕೊಡ್ತು ಬಂಪರ್ ಆಫರ್

KSRTC: ನಾಡಿನಲ್ಲಿ ಏನೇ ಪ್ರಮುಖ ಹಬ್ಬಗಳು ನಡೆವ ವೇಳೆ ರಾಜ್ಯ ಸರ್ಕಾರ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುತ್ತದೆ. ಆ ಸಮಯಕ್ಕೆ ಏನೇನು ಸೌಲಭ್ಯ,ಸವಲತ್ತುಗಳು ಕೊಡಬೇಕೋ ಅದೆಲ್ಲವನ್ನು ಸಾಧ್ಯವಾದಷ್ಟು ಕಲ್ಪಿಸಲು ಪ್ರಯತ್ನಿಸುತ್ತದೆ. ಅಂತೆಯೇ ಸರ್ಕಾರದ ಅಂಗವಾದ KSRTC ಕೂಡ ಜನರಿಗೆ ತನ್ನಿಂದಾದ ಸಹಕಾರ ನೀಡುತ್ತದೆ.

ಹೌದು, ಹಬ್ಬ-ಹರಿದಿನಗಳಲ್ಲಿ KSRTC ಯು ಹೆಚ್ಚಿಗೆ ಬಸ್ ನೀಡುವ ಮೂವಕ ಊರಿಂದ ಊರಿಗೆ ಪ್ರಯಾಣಿಸೋ ಪ್ರಯಾಣಿಕರಿಗೆ ಅನುಕೂಲ ಮಾಡುತ್ತದೆ. ಅಂತೆಯೇ ಇದೀಗ ನಾಡ ಹಬ್ಬ ದಸರಾ ಪ್ರಯುಕ್ತ ಜನರು ತಮ್ಮ ಊರುಗಳಿಗೆ ತೆರಳುಲು ರೆಡಿಯಾಗುತತಿದ್ದಾರೆ. ಹೀಗಾಗಿ ಈ ದಸರಾ ಹಬ್ಬ ಪ್ರಯುಕ್ತ ಅ.20ರಿಂದ 26ರವರೆಗೆ ಬೆಂಗಳೂರಿನಿಂದ ಮೈಸೂರು ಸೇರಿದಂತೆ ರಾಜ್ಯದ ಬೇರೆ ಊರುಗಳು ಮತ್ತು ಹೊರರಾಜ್ಯಗಳ ವಿವಿಧ ನಗರಗಳಿಗೆ ಹೆಚ್ಚುವರಿ ಎರಡು ಸಾವಿರ ಬಸ್‌ಗಳ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತದೆ.

ದಸರಾ ಎಂದಮೇಲೆ 9 ದಿನಗಳ ಕಾಲ ನಡೆಯುವ ಹಬ್ಬ. ಈ ವೇಳೆ ಜನರು ತಮ್ಮ ದೂರದೂರುಗಳಿಗೆ ಹೋಗಲು ತವಕಿಸುತ್ತಾರೆ. ಹೆಚ್ಚಾಗಿ ಬೆಂಗಳೂರು ಹಾಗೂ ಮೈಸೂರು ಭಾಗಗಳಲ್ಲಿ ಜನರು ಇರುವುದರಿಂದ ಅಲ್ಲಿಂದ ಹೊರಡುವ ಬಸ್ ಗಳೆಲ್ಲವೂ ಈ ವೇಳೆ ರಶ್ ಇರುತ್ತವೆ. ಹೀಗಾಗಿ ಹೆಚ್ಚಿಗೆ ಬಸ್ ನಿಯೋಜನೆ ಮಾಡುವುದು ಜನರಿಗೆ ತುಂಬಾ ಅನುಕೂಲ ಮಾಡಿಕೊಟ್ಟಂತಾಗಿದೆ.

 

ಇದನ್ನು ಓದಿ: ಹಳೇ ಪೆನ್‌ಡ್ರೈವ್’ಗೆ ಹೇಳಿ ಬಾಯ್ ಬಾಯ್ – ಡೇಟಾ ಪ್ರೊಟೆಕ್ಟ್ ಗಾಗಿ ಲಾಂಚ್ ಆಗಿದೆ ಸ್ಟ್ರಾಂಗ್ ‘ಫಿಂಗರ್‌ಪ್ರಿಂಟ್‌’ ಇರೋ ಪೆನ್‌ಡ್ರೈವ್

Leave A Reply

Your email address will not be published.