Israel Palestine war: ಉಗ್ರರು ಕೊಲೆಗೈದ ಪುಟ್ಟ ಕಂದಮ್ಮಗಳ ಫೋಟೋ ಹಂಚಿಕೊಂಡ ಇಸ್ರೇಲ್ – ಭೀಕರ ದೃಶ್ಯ ಕಂಡು ಉಸಿರುಗಟ್ಟಿದ ಜಗತ್ತು

World news Israel Palestine war Israel releases photo of dead babies murdered by Hamas terrorist

Israel Palestine war: ಇಸ್ರೇಲ್-ಪ್ಯಾಲೆಸ್ತೇನ್(Israel Palestine war) ಯುದ್ಧ ಭೀಕರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಮಾಸ್​, ಐಸಿಸ್​ ಮಾದರಿಯಲ್ಲಿ ಕ್ರೂರವಾಗಿ ನಡೆದುಕೊಳ್ಳುತ್ತಿದೆ. ಮಕ್ಕಳನ್ನೂ ಬಿಡದೇ ಬರ್ಬರವಾಗಿ ಹತ್ಯೆ ಮಾಡುತ್ತಿದೆ. ಆದರೀಗ ಹಮಾಸ್ ಉಗ್ರರು ನಡೆಸಿದ ಭೀಕರ ದಾಳಿಗೆ ಪ್ರತಿಯಾಗಿ ದಾಳಿ ನಡೆಯುತ್ತಿದೆ. ಹಮಾಸ್ ಉಗ್ರರ ಸಂಪೂರ್ಣ ನಾಶ ಮಾಡಲು ಇಸ್ರೇಲ್ ಪಣತೊಟ್ಟಿದೆ. ಭಾರತ, ಅಮೇರಿಕಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಇಸ್ರೇಲ್ ಪರ ನಿಂತಿವೆ. ಈ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಉಗ್ರರು ಕೊಲೆಗೈದ ಪುಟ್ಟ ಕಂದಮ್ಮಗಳ ಕೆಲ ಫೋಟೋಗಳನ್ನು ಹಂಚಿದ್ದಾರೆ. ಸದ್ಯ ಇದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು ಇಡೀ ಜಗತ್ತೇ ಕಂಬನಿಮಿಡಿದಿದೆ.

ಹೌದು, ಹಮಾಸ್ ಉಗ್ರರ (Hamas) ದಾಳಿಗೆ ಕ್ರೂರವಾಗಿ ಸಾವಿಗೀಡಾದ ಮಕ್ಕಳ ಚಿತ್ರಗಳನ್ನು ಇಸ್ರೇಲ್ (Israel) ಪ್ರಧಾನಿ ಕಚೇರಿ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಅಲ್ಲದೇ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರಿಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಈ ಚಿತ್ರಗಳನ್ನು ತೋರಿಸಿ ಭೀಕರತೆಯನ್ನು ಹೇಳಿಕೊಂಡಿದ್ದಾರೆ. ರಕ್ತಸಿಕ್ತ, ಭಯಾನಕ ಚಿತ್ರಗಳು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ.

ಅಂದಹಾಗೆ ಜೀವಂತ ಸುಟ್ಟು ಕರಕಲಾಗಿರುವ ಪುಟ್ಟ ಕಂದಮ್ಮಗಳ ಫೋಟೋ, ಮಲಗಿರುವಲ್ಲೇ ರುಂಡ ಕತ್ತರಿಸಿದ ಹಾಲುಗೆನ್ನೇಯ ಕಂದಮ್ಮಗಳ ಫೋಟೋಗಳು ಇದಾಗಿದೆ. ಹಮಾಸ್ ಉಗ್ರರು ನಡೆಸಿದ ಭೀಕರತೆಗೆ ಈ ಫೋಟೋಗಳೇ ಸಾಕ್ಷಿ ಹೇಳುತ್ತಿದೆ. ನಾಲ್ಕು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಈ ರೀತಿಯ ಸಾವಿರ ಕುಟುಂಬದ ಫೋಟೋಗಳಿವೆ. ನೂರಾರು ಮಕ್ಕಳ ಹೃದವಿದ್ರಾವಕ ಘಟನೆಗಳಿವೆ.

ಸದ್ಯ ಹಮಾಸ್ ಉಗ್ರರು ಭೀಕರ ದಾಳಿ ಕುರಿತ ಹಲವು ವಿಡಿಯೋಗಳು, ಫೋಟೋಗಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. 40 ಮಕ್ಕಳ ಶಿರಚ್ಚೇಧ, ಜೀವಂತ ಸುಟ್ಟ ಹಲವು ಘಟನೆಗಳು ವರದಿಯಾಗಿದೆ. ಹೀಗಾಗಿ ಪ್ರಧಾನಿ ನೆತನ್ಯಾಹು ಅವರು ತಮ್ಮ ಜಾಲತಾಣದಲ್ಲಿ ಹಮಾಸ್​ ರಾಕ್ಷಸೀ ಕೃತ್ಯ ನಡೆಸುತ್ತಿದೆ. ಶಿಶುಗಳನ್ನೂ ಸುಟ್ಟು ಹಾಕಿದೆ. ಐಸಿಸ್​ನಂತೆ ವರ್ತಿಸುತ್ತಿರುವ ಉಗ್ರರನ್ನು ನಾಮಾವಶೇಷ ಮಾಡಬೇಕು ಎಂದು ಬರೆದುಕೊಂಡಿದ್ದಾರೆ.

ಇನ್ನು ಇಸ್ರೇಲ್-ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಯುದ್ಧ ಮುಂದುವರೆದಿದ್ದು ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: K N Rajanna: ರೈತರ ಕೃಷಿ ಸಾಲ ಮನ್ನಾ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ- ಸಚಿವರ ಹೇಳಿಕೆ ಕೇಳಿ ಹೆಚ್ಚಿದ ಆತಂಕ !!

Leave A Reply

Your email address will not be published.