Latest news: ಹೋಗಿ ಹೋಗಿ ಪೊಲೀಸ್ ವಾಹನಕ್ಕೇ ಕೈ ತೋರಿಸಿ ನಿಲ್ಲಿಸಿ, ಸೀಟ್ ಬೆಲ್ಟ್ ಎಲ್ರೀ ಎಂದ ಹುಡುಗರು – ಮುಂದೇನಾಯ್ತು ಎಂದು ಊಹಿಸಿ !
Latest news boys stopped the police vehicle and asked where the seat belt
ಪೊಲೀಸ್ ವಾಹನವನ್ನೇ ತಡೆದು ನಿಲ್ಲಿಸಿ, ‘ ನೀವು ಸೀಟ್ ಬೆಲ್ಟ್ ಎಲ್ರೀ, ಯಾಕೆ ಧರಿಸಿಲ್ಲ ಸೀಟ್ ಬೆಲ್ಟ್, ರೂಲ್ಸ್ ಗೊತ್ತಿಲ್ವಾ ?’ ಎಂದು ಪ್ರಶ್ನೆ ಮಾಡಿದ ಯುವಕರಿಬ್ಬರನ್ನು ಬಂಧಿಸಿರುವ ಘಟನೆ ಪೊಲೀಸರ ನಡೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕರ ರಕ್ಷಣೆಗೆ ಸ್ಥಳೀಯರು ಧಾವಿಸಿದ ಸಂಗತಿ ಕೂಡಾ ತಿಳಿದುಬಂದಿದೆ.
ಕೇರಳದ ಪನೂರ್ ಎಂಬಲ್ಲಿ ಈ ಘಟನೆ ನಡೆದಿದ್ದು, ಬಂಧಿತ ಯುವಕರನ್ನು ಫಯಿಜ್ ಮತ್ತು ಸನೂಪ್ ಎಂದು ಗುರುತಿಸಲಾಗಿದೆ. ಪೊಲೀಸ್ ಸಿಬ್ಬಂದಿ ಸೀಟ್ ಬೆಲ್ಟ್ ಧರಿಸದೇ ಇರುವುದನ್ನು ನೋಡಿದ ಯುವಕರು ತಕ್ಷಣ ಕಾರನ್ನು ತಡೆದು ಪ್ರಶ್ನೆ ಮಾಡಿದ್ದಾರೆ. ಆದರೆ, ಅವರ ವಿರುದ್ಧವೇ ಕಾರು ತಡೆದು ಪೊಲೀಸರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧನ ಮಾಡಿದ್ದಾರೆ.
ಈ ಘಟನೆಗೆ ಹಿನ್ನೆಲೆಯಲ್ಲಿ ಸದರಿ ಯುವಕರು ಮತ್ತು ಪೊಲೀಸರ ಮಧ್ಯೆ ಸಣ್ಣ ಮನಸ್ತಾಪ ಇತ್ತು. ಇದೀಗ ಬಂಧಿತ ಯುವಕರು ಹೆಲ್ಮೆಟ್ ಧರಿಸದೇ ವಾಹನ ಓಡಿಸುವ ಅಭ್ಯಾಸ ಉಳ್ಳವರಾಗಿದ್ದರು. ಹೀಗಾಗಿ ಈ ಹಿಂದೆ ಅವರನ್ನು ತಡೆದ ಪೊಲೀಸರು ದಂಡ ವಿಧಿಸಿದ್ದರು. ಈಗ ಈ ಯುವಕರು ಪೊಲೀಸ್ ವಾಹನವನ್ನು ತಡೆದು ಸೀಟ್ ಬೆಲ್ಟ್ ಧರಿಸದಿರುವುದನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಕಾನೂನು ಎಲ್ಲರಿಗೂ ಒಂದೇ ಎಂದಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಗೂ ಮತ್ತು ಯುವಕರ ನಡುವೆ ಮಾತಿನ ಚಕಮಕಿಯಾಗೋಡೆ. ಅಲ್ಲದೆ ಅಲ್ಲಿದ್ದ ಸ್ಥಳೀಯರು ಸಹ ಯುವಕರ ನೆರವಿಗೆ ಧಾವಿಸಿದ್ದಾರೆ ಮತ್ತು ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಳಿಕ ಪ್ರಶ್ನೆ ಮಾಡಿದ ಯುವಕರ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ. ಈ ಘಟನೆಗೆ ಪೂರಕ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸರ ನಡೆಯನ್ನು ನೆಟ್ಟಿಗರು ಜನರು ಖಂಡಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ, ನೀವೇನು ಪ್ರಶ್ನಾತೀತರಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ: Government Employee: ದಿನಗೂಲಿ ನೌಕರರ ವೇತನದಲ್ಲಿ ಭಾರೀ ಹೆಚ್ಚಳ ?! ಇಲ್ಲಿದೆ ನೋಡಿ ಸಂಪೂರ್ಣ ವಿವರ