Smelly Urine: ಮೂತ್ರ ನಿರಂತರವಾಗಿ ದುರ್ವಾಸನೆ ಬೀರುತ್ತಿದೆಯೇ ?! ಹಾಗಿದ್ರೆ ಈ ಆಹಾರಗಳಿಗೆ ಕೊಡಿ ಗೇಟ್ ಪಾಸ್

Avoid these foods if your urine is constantly smelly

Smelly Urine: ಕೆಲವರಲ್ಲಿ ಮೂತ್ರ ಗಾಢ ಬಣ್ಣ ಮತ್ತು ವಾಸನೆಯಿಂದ ಕೂಡಿರುತ್ತದೆ. ಮೂತ್ರದ ದುರ್ನಾತವು ಅಸಹನೀಯವಾಗಿರುವುದರಿಂದ ಒಳ ಉಡುಪು ಕೂಡ ಕೆಟ್ಟ ವಾಸನೆ ಬರುತ್ತೆ. ಇದರಿಂದ ನೀವು ಮುಜುಗರಕ್ಕೆ ಒಳಗಾಗಬಹುದು. ಇದಕ್ಕೆ ಕಾರಣ ಏನು ಎಂಬುದು ತಿಳಿದಿರುವುದಿಲ್ಲ. ಆದರೆ ಕೆಲವೊಮ್ಮೆ ನಿಮ್ಮ ಆರೋಗ್ಯ ಸಮಸ್ಯೆಯೂ ಮೂತ್ರದ ವಾಸನೆಗೆ ಕಾರಣವಾಗುತ್ತದೆ. ಇನ್ನು ಕೆಲವೊಮ್ಮೆ ಸೇವಿಸುವ ಆಹಾರ ಪದ್ಧತಿ ಕೂಡ ಕಾರಣ ಆಗಿರುತ್ತೆ. ಹಾಗಾದರೆ ಈ ರೀತಿ ಮೂತ್ರವಾಸನೆ ಬರಲು ಕಾರಣವೇನು, ಇದನ್ನು ಹೇಗೆ ನಿವಾರಿಸಬಹುದು ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.

ಮೂಲತಃ ಮೂತ್ರವು ಕೆಟ್ಟ ವಾಸನೆಯಿಂದ (Smelly Urine) ಕೂಡಿರುವುದು ವಿವಿಧ ದೈಹಿಕ ಸಮಸ್ಯೆಗಳ ಲಕ್ಷಣವಾಗಿರಬಹುದು, ಜೊತೆಗೆ ಇದು ಕೆಲವು ಆಹಾರಗಳ ಸೇವನೆಯಿಂದಲೂ ಉಂಟಾಗಬಹುದು. ಹಾಗಾದರೆ ಆ ಆಹಾರಗಳು ಯಾವುವು ಎಂದು ತಿಳಿದುಕೊಳ್ಳಿ. ಮುಖ್ಯವಾಗಿ ನೀವು ಸೇವಿಸುವ ಆಹಾರವು ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ವ್ಯಕ್ತಿ ಸೇವಿಸುವ ಆಹಾರ ಮತ್ತು ಪಾನೀಯಗಳು ಮೂತ್ರದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎನ್ನುತ್ತಾರೆ ತಜ್ಞರು.

ಕಡಿಮೆ ನೀರು ಕುಡಿಯುವುದು:
ಕಡಿಮೆ ನೀರು ಕುಡಿಯುವುದರಿಂದ ಮೂತ್ರದ ದುರ್ನಾತ ಉಂಟಾಗುತ್ತದೆ. ಇದರಿಂದ ಮೂತ್ರವು ಹಳದಿ ಬಣ್ಣಕ್ಕೆ ತಿರುಗುತ್ತದೆ. ದುರ್ವಾಸನೆಯ ಮೂತ್ರವು ನಿರ್ಜಲೀಕರಣದ ಸೂಚನೆಯಾಗಿದೆ. ಮೂತ್ರವು ಅಮೋನಿಯಾವನ್ನು ಹೊಂದಿರುತ್ತದೆ. ದೇಹವು ನಿರ್ಜಲೀಕರಣಗೊಂಡಾಗ, ಅಮೋನಿಯದ ಸಾಂದ್ರತೆಯು ಹೆಚ್ಚಾಗುತ್ತದೆ. ಪರಿಣಾಮವಾಗಿ, ವಾಸನೆ ಕೂಡ ಹೆಚ್ಚಾಗುತ್ತದೆ.

ಅತಿಯಾಗಿ ಕಾಫಿ ಕುಡಿಯುವುದು:
ಹೆಚ್ಚು ಕಾಫಿ ಕುಡಿಯುವುದರಿಂದ ಮೂತ್ರದ ದುರ್ನಾತಕ್ಕೆ ಕಾರಣವಾಗಬಹುದು. ಕಾಫಿಯಲ್ಲಿರುವ ಸಂಯುಕ್ತಗಳು ಮೂತ್ರವು ಕೆಟ್ಟ ವಾಸನೆ ಬರಲು ಕಾರಣವಾಗುತ್ತದೆ. ದಿನದಲ್ಲಿ ಹಲವು ಬಾರಿ ಕಾಫಿ ಕುಡಿಯುವುದರಿಂದ ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ. ಪರಿಣಾಮವಾಗಿ, ದೇಹವು ನಿರ್ಜಲೀಕರಣಗೊಳ್ಳುತ್ತದೆ. ಇದರಿಂದ ಮೂತ್ರ ಕೆಟ್ಟ ವಾಸನೆ ಬರುತ್ತದೆ.

ಹೆಚ್ಚು ಬೆಳ್ಳುಳ್ಳಿ, ಈರುಳ್ಳಿ ಸೇವನೆ:
ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಅತಿಯಾಗಿ ಸೇವಿಸುವುದರಿಂದ ಮೂತ್ರದ ದುರ್ವಾಸನೆ ಉಂಟಾಗುತ್ತದೆ. ಏಕೆಂದರೆ ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿ ಸಲ್ಫರಸ್ ರಾಸಾಯನಿಕಗಳಿವೆ. ಪರಿಣಾಮವಾಗಿ, ಮೂತ್ರವು ಕೆಟ್ಟ ವಾಸನೆಯನ್ನು ಹೊಂದಿರುತ್ತದೆ.

ಮಸಾಲೆಯುಕ್ತ ಆಹಾರ ಸೇವನೆ:
ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ ಮೂತ್ರದ ವಾಸನೆಯೂ ಬರುತ್ತದೆ. ಜೀರಿಗೆ, ಅರಿಸಿನ ಮತ್ತು ಕೊತ್ತಂಬರಿ ಮುಂತಾದ ಮಸಾಲೆಗಳ ಅತಿಯಾದ ಸೇವನೆಯು ಮೂತ್ರದ ಕೆಟ್ಟ ವಾಸನೆಗೆ ಕಾರಣವಾಗಬಹುದು. ವಾಸ್ತವವಾಗಿ, ಈ ಮಸಾಲೆಗಳಲ್ಲಿ ಇರುವ ಆರೊಮ್ಯಾಟಿಕ್ ರಾಸಾಯನಿಕಗಳು ನಮ್ಮ ದೇಹದಲ್ಲಿ ಇರುತ್ತವೆ. ಆಹಾರ ಜೀರ್ಣವಾದ ನಂತರ ಮೂತ್ರ ವಾಸನೆ ಬರುತ್ತದೆ.

ಮೂತ್ರ ಕೆಟ್ಟ ವಾಸನೆ ನಿವಾರಣೆ ಕ್ರಮ :
ಮೂತ್ರ ಕೆಟ್ಟ ವಾಸನೆ ಅಥವಾ ಮೂತ್ರದ ಬಣ್ಣದಲ್ಲಿ ಬದಲಾವಣೆಯು ಯುಟಿಐ ಚಿಹ್ನೆಯಾಗಿರಬಹುದು ಆದ್ದರಿಂದ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಸಾಕಷ್ಟು ನೀರು ಕುಡಿಯುವುದು.

ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಲು ಕ್ರ್ಯಾನ್ಬೆರಿ ಜ್ಯೂಸ್ ಪ್ರಯೋಜನಕಾರಿಯಾಗಿದೆ. ಇದನ್ನು ಮೂತ್ರನಾಳದ ಸೋಂಕಿಗೆ ಮನೆಮದ್ದಾಗಿ ದೀರ್ಘಕಾಲದಿಂದ ಬಳಸಲಾಗುತ್ತಿದೆ.

ಆದರೆ ಮೂತ್ರದ ದುರ್ವಾಸನೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಒಂದು ವೇಳೆ ಉರಿಮೂತ್ರ, ಪದೇ ಪದೇ ಮೂತ್ರ ವಿಸರ್ಜನೆ, ಸಾಮಾನ್ಯಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆಯಂತಹ ಇತರ ರೋಗಲಕ್ಷಣಗಳೊಂದಿಗೆ ಇದ್ದರೆ, ಇದು ಮೂತ್ರನಾಳದ ಸೋಂಕಿನ ಸಂಕೇತವಾಗಿರಬಹುದು. ಟೈಪ್ 2 ಡಯಾಬಿಟಿಸ್ ಮತ್ತು ಮೂತ್ರಪಿಂಡದ ಕಲ್ಲುಗಳು ಮೂತ್ರದ ದುರ್ವಾಸನೆಗೆ ಕಾರಣವಾಗಬಹುದು. ಹಾಗಾಗಿ ಮೂತ್ರದ ದುರ್ವಾಸನೆ ಸಮಸ್ಯೆಯು ದೀರ್ಘಕಾಲದವರೆಗೆ ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

 

ಇದನ್ನು ಓದಿ: ಕೊನೆಗೂ ಸರ್ಕಾರದ ಕದ ತಟ್ಟಿದ ‘ಬಯಲಾದ ಹೆಗ್ಗಡೆ ಕರ್ಮಕಾಂಡ’ – ವೀರೇಂದ್ರ ಹೆಗ್ಗಡೆ ಸುತ್ತ ಕಾನೂನು ಕುಣಿಕೆ ಬಿಗಿಯೋದು ಫಿಕ್ಸ್ ?!

Leave A Reply

Your email address will not be published.