Chitradurga: ಚಿತ್ರದುರ್ಗ ಮುರುಘಾ ಶ್ರೀಗಳ ಪೋಕ್ಸೋ ಪ್ರಕರಣಕ್ಕೆ ಮಹತ್ವದ ತಿರುವು – ಆರೋಪಿಗೆ ಮಂಜೂರಾಯ್ತು ಜಾಮೀನು

Accused granted bail in POCSO case of Chitradurga Muruga Shri

Chitradurga: ಚಿತ್ರದುರ್ಗದ(Chitradurga) ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣದ ಕುರಿತು ಎಲ್ಲರಿಗೂ ತಿಳಿದೇ ಇದೆ. ಕೋಟ್ಯಾಂತರ ಜನರು ನಂಬುವ, ಗೌರವಿಸುವ ಶ್ರೀಗಳು ಇಡೀ ಮಠದ ಪರಂಪರೆಯೇ ತಲೆತಗ್ಗಿಸುವಂತಹ ಕೆಲಸ ಮಾಡಿ ಇಂದು ಜೈಲಲ್ಲಿ ಕಂಬಿ ಎಣಿಸುತ್ತಿದ್ದಾರೆ. ವರ್ಷವೇ ಕಳೆದರೂ ನಮ್ಮ ಕಾನೂನಲ್ಲಿ ಸತ್ಯಾಸತ್ಯತೆಯ ತನಿಖೆ ಆಗಿ ಇನ್ನೂ ಶಿಕ್ಷೆ ನೀಡದೆ ಇರುವುದು ದುರಂತವೇ ಆಗಿದೆ. ಸದ್ಯ ಈ ಪ್ರಕರಣಕ್ಕ ಮಹತ್ವದ ತಿರುವು ದೊರೆತಿದ್ದು, ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಸ್ ಜೆ ಎಂ ವಿದ್ಯಾಪೀಠದ ಕಾರ್ಯದರ್ಶಿ ಪರಮಶಿವಯ್ಯಗೆ ಗೆ ಜಾಮೀನು ಮಂಜೂರಾಗಿದೆ.

ಹೌದು, ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸ್ ಕೇಸ್ ದಾಖಲಾಗಿದ್ದು, ಜೈಲು ಪಾಲಾಗಿದ್ದಾರೆ. ಈ ಪ್ರಕರಣದಲ್ಲಿ ಮುರುಘಾಮಠದ ಮ್ಯಾನೇಜರ್ ಪರಮಶಿವಯ್ಯ ಮೂರನೇ ಆರೋಪಿಯಾಗಿದ್ದು, 2022ರ ಅಕ್ಟೋಬರ್ 28ರಂದು ಬಂಧಿಸಲಾಗಿತ್ತು. ಸದ್ಯ ಆರೋಪಿ ಪರಮಶಿವಯ್ಯಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿದೆ. ಹೀಗಾಗಿ, ಹಲವು ತಿಂಗಳಿಂದ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದ ಪರಮಶಿವಯ್ಯ ಅವರು ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.

ಅಂದಹಾಗೆ 10 ತಿಂಗಳ‌ ಬಳಿಕ ಪರಮಶಿವಯ್ಯಗೆ ಹೈಕೋರ್ಟ್‌ನ ಏಕ ಸದಸ್ಯ ಪೀಠದಿಂದ ಜಾಮೀನು ಮಂಜೂರು ಮಾಡಿ ಆದೇಶಿಸಲಾಗಿದೆ. ಹೈಕೋರ್ಟ್‌ ನ್ಯಾಯಮೂರ್ತಿಗಳಾದ ನ್ಯಾ. ಶಿವಶಂಕರ್ ಅಮರಣ್ಣವರ್ ಅವರ ಪೀಠದಲ್ಲಿ ಪರಮಶಿವಯ್ಯ ಪರವಾಗಿ ನ್ಯಾಯವಾದಿ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದ್ದರು. ಇನ್ನು ಇವರು ಎ1 ಆರೋಪಿಯಲ್ಲದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಮೊದಲು ಜಾಮೀನು ಪಡೆದ ಮೊದಲ ಆರೋಪಿ ಪರಮಶಿವಯ್ಯ ಆಗಿದ್ದಾರೆ. ಅರ್ಜಿ ದಾರರು 2 ಲಕ್ಷದ ಮೌಲ್ಯದ ಬಾಂಡ್ ಹಾಗೂ ಎರಡು ಜನರ ಭದ್ರತೆ ಒದಗಿಸಬೇಕು. ಅಲ್ಲದೆ ಸಾಕ್ಷಿಗಳ ನಾಶಕ್ಕೆ ಪ್ರಯತ್ನ ಮಾಡಬಾರದೆಂದು ನ್ಯಾಯಾಲಯದಿಂದ ಷರತ್ತು ಹಾಕಲಾಗಿದೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: Fobia: ಹೆಂಗಸರಿಗೆ ಹೆದರೋ ವ್ಯಕ್ತಿ- 55 ವರುಷಗಳಿಂದ ಮನೆಯೊಳಗೇ ಅಡಗಿ ಕೂತ ಈತ ಮಾಡಿದ್ದೇನು ?!

Leave A Reply

Your email address will not be published.