Indian Railway: ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಸುದ್ದಿ- ಈ ದಿನದಿಂದ ದೇಶಾದ್ಯಂತ ಸಂಚರಿಸಲಿದೆ ಕಡಿಮೆ ದರದ, ವಂದೇ ಭಾರತ್ ರೈಲನ್ನೂ ಮೀರಿಸೋ ಹೊಸ ಹೈಟೆಕ್ ರೈಲುಗಳು

New hi-tech trains surpass Vande Bharat train

Indian Railway: ಭಾರತದ ರೈಲ್ವೆ ಇಲಾಖೆಯು ತನ್ನ ರೈಲ್ವೆ ಪ್ರಯಾಣಿಕರಿಗೆ ಆಗಾಗ ಭರ್ಜರಿ ಸುದ್ದಿಗಳನ್ನು ನೀಡುತ್ತಿರುತ್ತದೆ. ಕೆಲವೊಮ್ಮೆ ಉಚಿತ ಪ್ರಯಾಣ ನೀಡುವುದು, ಕೆಲವು ವಿಶೇಷ ಸಂದರ್ಭದಲ್ಲಿ ರಿಯಾಯಿತಾ ದರದಲ್ಲಿ ಟಿಕೆಟ್ ನೀಡುವುದು ಹೇಗೆ ಒಂದಲ್ಲ ಒಂದು ರೀತಿಯಲ್ಲಿ ಆಗಾಗ ಸಂತಸದ ಸುದ್ದಿಗಳನ್ನು ಕೊಡುತ್ತಿರುತ್ತದೆ. ಅಂತೆಯೇ ಇದೀಗ ಮತ್ತೆ ರೈಲ್ವೆ ಇಲಾಖೆ(Indian Railway) ದೇಶದ ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಸುದ್ದಿಯನ್ನು ನೀಡಲು ಮುಂದಾಗಿದೆ.

ಹೌದು, ದೇಶದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಭಾರೀ ಸದ್ಧುಮಾಡುತ್ತಿದೆ. ಅಂತೆಯೇ ಊಹಿಸಿದಕ್ಕಿಂತ ಹೆಚ್ಚಿಗೆಯೇ ಯಶಸ್ಸನ್ನೂ ಗಳಿಸಿದೆ. ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ರೈಲುಗಳು ಹಲವು ಮಾರ್ಗಗಳಿಂದ ಚಲಿಸುತ್ತಿವೆ. ಈ ಯಶಸ್ಸಿನ ಬೆನ್ನಲ್ಲೇ ಕೇಂದ್ರ ಸರ್ಕಾರ ವಂದೇ ಭಾರತ್ ಸ್ಲೀಪರ್‌, ವಂದೇ ಮೆಟ್ರೋ ರೈಲುಗಳನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿತ್ತು. ಆದರೀಗ ಅದಕ್ಕೂ ಮುಂಚಿತವಾಗಿಯೇ ಅತ್ಯಾಧುನಿಕ ಸೌಲಭ್ಯ ಒಳಗೊಂಡ, ಆದರೆ ಟಿಕೆಟ್‌ ದರ ಕಡಿಮೆ ಇರುವ ‘ವಂದೇ ಸಾಧಾರಣ್‌’ ಎಂಬ ರೈಲನ್ನು ಪರಿಚಯಿಸಲು ಇಲಾಖೆಯು ಮುಂದಾಗಿದೆ.

ಅಂದಹಾಗೆ ಸರ್ಕಾರವು ಜನರಿಗೆ ಸರ್ಪ್ರೈಸ್ ಕೊಡುವ ನಿಟ್ಟಿನಲ್ಲಿ ಈ ವಿಚಾರವನ್ನು ಹೆಚ್ಚು ಪ್ರಚಾರ ಮಾಡಿರಲಿಲ್ಲ. ಆದರೀಗ ಈಗಾಗಲೇ ರೈಲಿನ ಮಾದರಿ ಸಿದ್ದವಾಗುತ್ತಿದ್ದು, ಅದರ ಫೋಟೋಗಳು ಲೀಕ್‌ ಆಗಿವೆ. ಈ ರೈಲುಗಳು ಸಾಮಾನ್ಯ ಜನರ ಆರ್ಥಿಕ ಮಟ್ಟಕ್ಕೆ ಅನುಕೂಲವಾಗಿರಲಿದ್ದ, ಪ್ರತಿಯೊಬ್ಬರೂ ಕೈಗೆಟುಕುವ ದರದಲ್ಲಿ ಪ್ರಯಾಣ ಬೆಳೆಸಬಹುದಾಗಿದೆ.

ಏನೆಲ್ಲಾ ಸೌಲಭ್ಯಗಳಿವೆ?
ಈ ರೈಲಿನಲ್ಲಿ 24 ಬೋಗಿಗಳು ಇರಲಿದ್ದು, ರೈಲಿನ ಕ್ಷಿಪ್ರ ಸಂಚಾರಕ್ಕೆ ಎರಡೂ ಬದಿ ಎಂಜಿನ್‌ ಇರಲಿದೆ. ಇದನ್ನು ಹೊರತಾಗಿ, ಪ್ರತಿ ಆಸನದಲ್ಲೂ ಚಾರ್ಜಿಂಗ್‌ ಸ್ಲಾಟ್‌ (Charging slat), ಸಿಸಿಟೀವಿ ಕ್ಯಾಮರಾ (CCTV camera), ಪ್ರಯಾಣಿಕರಿಗೆ ಮಾಹಿತಿ ಟೀವಿ, ಬಯೋ ಟಾಯ್ಲಟ್‌ (Bio Toilet)ಇದರಲಿದೆ. ಇವೆಲ್ಲಕ್ಕಿಂತ ವಿಶೇಷವೆಂದರೆ ಇದರಲ್ಲೂ ವಂದೇ ಭಾರತ್ ರೀತಿ ಸ್ವಯಂಚಾಲಿತ ಬಾಗಿಲುಗಳು ಇರಲಿದೆ.

 

ಇದನ್ನು ಓದಿ: Taxes on EPF: PF ಗೆ ಬಂತು ಹೊಸ ರೂಲ್ಸ್- ಈ ವರ್ಷದೊಳಗೆ ಹಣ ಪಡೆದ್ರೆ ನೋ ಟ್ಯಾಕ್ಸ್

Leave A Reply

Your email address will not be published.