Taxes on EPF: PF ಗೆ ಬಂತು ಹೊಸ ರೂಲ್ಸ್- ಈ ವರ್ಷದೊಳಗೆ ಹಣ ಪಡೆದ್ರೆ ನೋ ಟ್ಯಾಕ್ಸ್

Employment provident fund and Tax on EPF latest updates

Taxes on EPF: ಉದ್ಯೋಗಿಗಳ ಭವಿಷ್ಯ ನಿಧಿ (EPF)ಖಾತೆ ಹೊಂದಿದ್ದರೆ, ನೀವು ತಿಳಿಯಲೇಬೇಕಾದ ಸುದ್ದಿ ಇದು. EPF ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಇಪಿಎಫ್( EPF) ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ (EPF), ಪಿಂಚಣಿ ಯೋಜನೆ ಹಾಗೂ ಉದ್ಯೋಗಿಗಳಿಗೆ ವಿಮಾ ಯೋಜನೆಗಳನ್ನು ಒದಗಿಸುತ್ತದೆ.

 

ಎಲ್ಲಾ ಖಾಸಗಿ ಸಂಸ್ಥೆ ಉದ್ಯೋಗಿಗಳಿಗೂ ಕೆಲಸಕ್ಕೆ ಸೇರುವ ಸಂದರ್ಭ ಅವರ ಹೆಸರಿನಲ್ಲಿ ಇಪಿಎಫ್ ಖಾತೆ(EPF- employee provident fund) ತೆರೆಯಲಾಗುತ್ತದೆ. ಉದ್ಯೋಗಿಗೆ ಮಧ್ಯದಲ್ಲಿ ತುರ್ತು ಸಂದರ್ಭಕ್ಕೆ ಹಣದ ಅವಶ್ಯಕತೆ ಎದುರಾದ ಸಂದರ್ಭದಲ್ಲಿ ಮಾತ್ರವೇ ಇಪಿಎಫ್ ಖಾತೆಯಲ್ಲಿರುವ ಒಂದಷ್ಟು ಭಾಗದ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡಲಾಗಿದೆ. ಮೂಲ ವೇತನದ ಶೇ. 12ರಷ್ಟು ಹಣವನ್ನು ಕಡಿತಗೊಳಿಸಿ ಈ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಕಂಪನಿ ಕೂಡ ಇಷ್ಟೇ ಮೊತ್ತವನ್ನು ಖಾತೆಗೆ ತುಂಬಿಸುತ್ತದೆ. ಸರ್ಕಾರ ಪ್ರತೀ ವರ್ಷ ಈ ಖಾತೆಯಲ್ಲಿರುವ ಮೊತ್ತಕ್ಕೆ ಇಪಿಎಫ್ ಶೇ. 8.15ರಷ್ಟು ಬಡ್ಡಿ (Taxes on EPF)ನೀಡಲಾಗುತ್ತಿದೆ.

ಇಪಿಎಫ್ ಹಿಂಪಡೆಯುವ ನಿಯಮಗಳು ಹೀಗಿವೆ:

* ಉದ್ಯೋಗ ಕಳೆದುಕೊಂಡ ಸಂದರ್ಭ ಒಂದು ತಿಂಗಳ ಬಳಿಕ ಶೇ. 75ರಷ್ಟು ಪಿಎಫ್ ಹಣ ಹಿಂಪಡೆಯಬಹುದು. ಎರಡು ತಿಂಗಳ ಬಳಿಕ ಇಡೀ ಪಿಎಫ್ ಮೊತ್ತವನ್ನು ಹಿಂಪಡೆಯಬಹುದು.
* ಅನಾರೋಗ್ಯ, ತುರ್ತು ಸಂದರ್ಭಗಳು ಬಂದ ಸಂದರ್ಭದಲ್ಲಿ ಉದ್ಯೋಗಿ ತನ್ನ ಪಿಎಫ್ ಖಾತೆಯಿಂದ ಅಡ್ವಾನ್ಸ್ ರೂಪದಲ್ಲಿ ಹಣ ಹಿಂಪಡೆಯಬಹುದು.
* ಇಪಿಎಫ್ಒ ರೂಪಿಸಿರುವ ನಿಯಮಗಳಾನುಸಾರ, ಉದ್ಯೋಗಿ ನಿವೃತ್ತಿ ವಯಸ್ಸು 55 ವರ್ಷ ಎಂದು ನಿಗದಿ ಮಾಡಲಾಗಿದ್ದು, ನಿವೃತ್ತಿ ಹೊಂದಿದ ಬಳಿಕ ಪಿಎಫ್ ಹಣ ಹಿಂಪಡೆಯಬೇಕು.
* ನಿವೃತ್ತಿಗೆ ಒಂದು ವರ್ಷ ಮೊದಲೇ ಶೇ. 90ರಷ್ಟು ಪಿಎಫ್ ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ.

ಇಪಿಎಫ್ ಹಣ ಹಾಗೂ ಅದನ್ನು ಹಿಂಪಡೆಯುವುದಕ್ಕೆ ತೆರಿಗೆ ಅನ್ವಯವಾಗುತ್ತದೆಯೇ?
ಇಪಿಎಫ್ ಖಾತೆಯಿಂದ ಐದು ವರ್ಷ ಸೇವೆಗಿಂತಲು ಮೊದಲೇ 50,000ಕ್ಕೂ ಹೆಚ್ಚು ಹಣವನ್ನು ವಿತ್ ಡ್ರಾ ಮಾಡಿದರೆ ಆ ಮೊತ್ತಕ್ಕೆ ಟಿಡಿಎಸ್ ಕಡಿತವಾಗುತ್ತದೆ. ಇಪಿಎಫ್ ಖಾತೆಗೆ ಕಂಪನಿ ವತಿಯಿಂದ ತುಂಬಿಸಲಾಗುವ ಹಣ ಹಾಗೂ ಅದರ ಮೇಲಿನ ಬಡ್ಡಿ ಹಣದ ಮೇಲೂ ಕೂಡ ತೆರಿಗೆ ಅನ್ವಯವಾಗಲಿದ್ದು, ಇಪಿಎಫ್ ಖಾತೆಗೆ ಉದ್ಯೋಗಿಯ ಸಂಬಳದಿಂದ ಕಡಿತವಾಗುವ ಹಣಕ್ಕೂ ಕೂಡ ತೆರಿಗೆ ಅನ್ವಯವಾಗುತ್ತದೆ.

 

ಇದನ್ನು ಓದಿ: Rice: ಉಡುಪಿ, ದ.ಕ ಹೆಚ್ಚುವರಿ ಪಡಿತರ ಚೀಟಿದಾರರಿಗೆ ಬಿಗ್ ಅಪ್ಡೇಟ್: ಹೆಚ್ಚುವರಿ ಕಾರ್ಡ್ ದಾರರಿಗೆ ಅಕ್ಕಿ ನೀಡಲು ಕೇಂದ್ರದಿಂದ ಗ್ರೀನ್ ಸಿಗ್ನಲ್!

Leave A Reply

Your email address will not be published.