Ration Card: ಈ ಜಿಲ್ಲೆಯ ಪಡಿತರ ಚೀಟಿದಾರರಿಗೆ ಬಿಗ್ ಅಪ್ಡೇಟ್: ಹೆಚ್ಚುವರಿ ಕಾರ್ಡ್ ದಾರರಿಗೆ ಅಕ್ಕಿ ನೀಡಲು ಕೇಂದ್ರದಿಂದ ಗ್ರೀನ್ ಸಿಗ್ನಲ್!

Central Government announced good news providing rice for additional card holders latest updates

Ration Card: ಬಿಪಿಎಲ್ ಪಡಿತರ ಚೀಟಿದಾರರಿಗೆ ಮತ್ತೊಂದು ಮಹತ್ವದ ಮಾಹಿತಿ ಇಲ್ಲಿದೆ ನೋಡಿ. ರಾಜ್ಯ ಸರಕಾರವು ಬಿಪಿಎಲ್‌ ಕಾರ್ಡ್‌ (BPL Card Holder)ಹೊಂದಿರುವ ಕುಟುಂಬಗಳ ಪ್ರತೀ ಸದಸ್ಯನಿಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ನೀಡಲು ಕೇಂದ್ರ ಸರಕಾರ ಅನುವು ಮಾಡಿಲ್ಲ. ಆದಾಗ್ಯೂ, ಕೇಂದ್ರ ಸರ್ಕಾರ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳ ಅಕ್ಕಿಯನ್ನು( Rice)ರಾಜ್ಯ ಸರಕಾರ ಈಗಾಗಲೇ ವಿತರಿಸಿರುವ ಹೆಚ್ಚುವರಿ ಬಿಪಿಎಲ್‌ ಕಾರ್ಡ್‌ಗಳಿಗೆ ಪೂರೈಕೆ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ.

ರಾಜ್ಯ ಸರಕಾರ ಹಣದ ಬದಲಿಗೆ ಅಕ್ಕಿಯನ್ನೇ ನೀಡಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದು, ಇದೀಗ, ಕೇಂದ್ರ ಸರಕಾರ ರಾಜ್ಯಕ್ಕೆ ಅಗತ್ಯವಿರುವ ಹೆಚ್ಚುವರಿ ಅಕ್ಕಿ ನೀಡಲು ಹಸಿರು ನಿಶಾನೆ ತೋರಿದೆ. ಕೇಂದ್ರ ಸರಕಾರದ ಸಂಸ್ಥೆಗಳಾದ ಎನ್‌ಸಿಸಿಎಫ್, ನಾಫೆಡ್‌, ಕೇಂದ್ರೀಯ ಭಂಡಾರದಿಂದ ಅಕ್ಕಿ ಖರೀದಿ ಮಾಡಲು ಆದೇಶ ನೀಡಿದೆ.ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಹಂಚಿಕೆಯಾಗಿರುವ ಹೆಚ್ಚುವರಿ ಬಿಪಿಎಲ್‌ ಕಾರ್ಡ್‌ದಾರರಿಗೂ ಈ ಅಕ್ಕಿಯ ಸೌಲಭ್ಯ ದೊರೆಯಲಿದೆ.

ಕೇಂದ್ರ ಸರಕಾರ ನೀಡುತ್ತಿರುವ ಪಡಿತರ ಅಕ್ಕಿಯ ಜತೆಗೆ ರಾಜ್ಯ ಸರಕಾರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಹೆಚ್ಚುವರಿಯಾಗಿ ಬಿಪಿಎಲ್‌ ಕಾರ್ಡ್‌ನ ಪ್ರತೀ ಸದಸ್ಯರಿಗೆ 5 ಕೆ.ಜಿ. ಅಕ್ಕಿ ನೀಡುವುದಾಗಿ ಈ ಮೊದಲೇ ಘೋಷಣೆ ಮಾಡಿತ್ತು.ಆದರೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಗೆ ಕೇಂದ್ರ ಸರಕಾರ ನಿರ್ಬಂಧ ಹೇರಿದ ಪರಿಣಾಮ ಅಕ್ಕಿಯ ಕೊರತೆಯಿಂದ ಅದಕ್ಕೆ ಸಮನಾದ ಮೌಲ್ಯದ ಹಣವನ್ನು ನೇರವಾಗಿ ಫ‌ಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತಿದೆ. ಈ ನಡುವೆ, ಹೆಚ್ಚುವರಿಯಾಗಿ ವಿತರಿಸಿರುವ ಬಿಪಿಎಲ್‌ ಕಾರ್ಡ್‌ದಾರಿಗೆ ಅಕ್ಟೋಬರ್‌ ಮತ್ತು ನವೆಂಬರ್‌ಗೆ ಅಗತ್ಯವಿರುವ 40 ಸಾವಿರ ಮೆಟ್ರಿಕ್‌ ಟನ್‌ ಅಕ್ಕಿಯನ್ನು ಕೆ.ಜಿ.ಗೆ 34.60 ರೂ. ದರದಲ್ಲಿ ಎನ್‌ಸಿಸಿಎಫ್, ನಾಫೆಡ್‌, ಕೇಂದ್ರೀಯ ಭಂಡಾರದ ಮೂಲಕ ಖರೀದಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ.

 

ಇದನ್ನು ಓದಿ: ಮನೆಯಲ್ಲಿ ಈ ಪಕ್ಷಿಯ ಫೋಟೋವನ್ನು ಪೂರ್ವ ದಿಕ್ಕಿಗೆ ಇಡಿ, ಮಹಾಲಕ್ಷ್ಮೀಯೇ ಬಂದು ಕೂರುತ್ತಾಳೆ

Leave A Reply

Your email address will not be published.