Alert message: ನಿಮಗೂ ಬಂತಾ ಸರ್ಕಾರದ ಈ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ?! ಹಾಗಿದ್ರೆ ಈ ಕೂಡಲೇ ಅಲರ್ಟ್ ಆಗಿ, ಚೆಕ್ ಮಾಡಿ.

Emergency alert message to people's mobile phones

Alert message: ನಿನ್ನೆ ದಿನ (ಅ.10) ಭಾರತದ ಲಕ್ಷಾಂತರ ಜನರ ಮೊಬೈಲ್‌ ಫೋನ್‌ಗಳಿಗೆ ತುರ್ತು ಎಚ್ಚರಿಕೆ ಸಂದೇಶ(Alert message) ಬಂದಿದ್ದು, ಇದರಿಂದ ಜನ ಕೆಲ ಕಾಲ ಆತಂಕಕ್ಕೀಡಾದ ಘಟನೆ ನಡೆದಿದೆ. ಈ ವಿಚಾರದ ಬಗ್ಗೆ ಇದೀಗ ಭಾರಿ ಚರ್ಚೆಯಾಗುತ್ತಿದೆ.

ಹೌದು, ಮಂಗಳವಾರ ಬೆಳಗ್ಗೆ ಸುಮಾರು 11:30ರ ವೇಳೆಗೆ ದೇಶಾದ್ಯಂತ ಲಕ್ಷಾಂತರ ಮೊಬೈಲ್ ಫೋನ್‌ಗಳಿಗೆ ಭಾರತ ಸರ್ಕಾರ ಎಚ್ಚರಿಕೆಯ ಸಂದೇಶವೊಂದನ್ನು (Message) ಕಳುಹಿಸಿದೆ. ತುರ್ತು ಎಚ್ಚರಿಕೆ (Emergency Alert) ಬಗ್ಗೆ ಜನತೆ ಕೆಲ ಕಾಲ ಆತಂಕಕ್ಕೀಡಾಗಿದ್ದಾರೆ. ಈ ಕುರಿತು ಭಾರೀ ದೊಡ್ಡ ಚರ್ಚೆಗಳೂ ಉದ್ಭವಿಸಿದ್ದವು. ಆದರೆ ಕೆಲ ಹೊತ್ತಲ್ಲೇ ಈ ಸಂದೇಶ ಕೇವಲ ಪರೀಕ್ಷಾರ್ಥವಾಗಿ ಕೇಂದ್ರ ಸರ್ಕಾರ ಕಳುಹಿಸಿರುವುದು ಖಚಿತವಾಗಿದೆ.

ಅಂದಹಾಗೆ ನಿನ್ನೆ ಮಧ್ಯಾಹ್ನ 11:35ರ ಸುಮಾರಿಗೆ ಎಮರ್ಜೆನ್ಸಿ ಟೋನ್‌ನೊಂದಿಗೆ ಅನೇಕರಿಗೆ ಈ ತುರ್ತು ಸಂದೇಶ ಬಂದಿದೆ, ಆಂಡ್ರಾಯ್ಡ್‌ ಹಾಗೂ ಐಫೋನ್ ಹೊಂದಿದ್ದ ಬಹುತೇಕರಿಗೆ ಈ ಸಂದೇಶ ಬಂದಿತ್ತು. ಆದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಸಂದೇಶವನ್ನು ಪರೀಕ್ಷಾರ್ಥವಾಗಿ ಕಳುಹಿಸಿದೆ ಎಂದು ತಿಳಿದು ಬಂದಿದೆ.

ಇದು ತುರ್ತು ಸಮಯದಲ್ಲಿ ಎಚ್ಚರಿಕೆ ವ್ಯವಸ್ಥೆ ಪರಿಣಾಮಕಾರಿಯಾಗಿರುತ್ತದೆಯೇ ಎಂಬುದನ್ನು ನಿರ್ಣಯಿಸಲು ಹಾಗೂ ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ತಿಳಿಸಲು ನಡೆಸಿದ ಪರೀಕ್ಷೆಯ ಭಾಗವಾಗಿದೆ. ಈ ಸಂದೇಶ ಸ್ವೀಕರಿಸಿದವರಿಗೆ ಇದೊಂದು ಪರೀಕ್ಷೆಯಾಗಿದ್ದು, ಯಾವುದೇ ಎಚ್ಚರಿಕೆ ಕ್ರಮದ ಅಗತ್ಯವಿಲ್ಲ. ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ.ಎಂದು ಎನ್‌ಡಿಎಂಎ ತಿಳಿಸಿದೆ.

ಇನ್ನು ಇನ್ನು ಈ ಸಂದೇಶ ಬಹುತೇಕರಿಗೆ ಬಂದಿದ್ದು, ಇದರಿಂದ ಇದು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. #EmergencyAlertSystem ಎಂದು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಶುರುವಾಗಿದ್ದು, ಎಲ್ಲರೂ ತಮಗೆ ಬಂದ ಸಂದೇಶಗಳನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಸಂದೇಶ ನನಗೆ ಮಾತ್ರ ಬಂದಿದ್ದ, ನಿಮಗೂ ಬಂತ ಎಂದು ಅನೇಕರು ಸಂದೇಶದ ಸ್ಕ್ರೀನ್‌ ಶಾಟ್‌ ಶೇರ್ ಮಾಡ್ತಿದ್ದಾರೆ.

 

https://x.com/true_fan___/status/1711630648354771443?t=9sdIP00IRm53v6RTxNT3Dg&s=08

Leave A Reply

Your email address will not be published.