Dress Code In Temple: ಇನ್ಮುಂದೆ ಪುರಿ ಜಗನ್ನಾಥ ದೇವಾಲಯಕ್ಕೆ ಭಕ್ತಾದಿಗಳು ಹೀಗೆ ಬರುವಂತಿಲ್ಲ
National news Dress code for osdisha's Puri jagannath temple devotees from January latest news
Puri Jagannath Temple: ರಾಜ್ಯದ ಹೆಚ್ಚಿನ ದೇವಾಲಯಗಳಲ್ಲಿ ಇತ್ತೀಚಿಗೆ ವಸ್ತ್ರ ಸಂಹಿತೆ ಜಾರಿ(Dress Code)ಮಾಡಿರುವುದು ಗೊತ್ತಿರುವ ಸಂಗತಿ. ಇದೀಗ, ಒಡಿಶಾದ ಪುರಿ ಜಗನ್ನಾಥ ದೇವಾಲಯಕ್ಕೆ (Puri Jagannath Temple) ಆಗಮಿಸುವ ಭಕ್ತರು ಇನ್ನೂ ಮುಂದೆ ಹರಿದ ಜೀನ್ಸ್, ಸ್ಕರ್ಟ್ ತೊಟ್ಟು ಬರುವಂತಿಲ್ಲ ಎಂದು ದೇವಸ್ಥಾನದ ಆಡಳಿತ ಸೂಚನೆ ನೀಡಿದೆ.
ದೇವಸ್ಥಾನದ ಘನತೆ ಮತ್ತು ಪಾವಿತ್ರ್ಯತೆ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಕೆಲವರು ಇತರರ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡದೆ ದೇವಸ್ಥಾನದಲ್ಲಿ ಹರಿದ ಜೀನ್ಸ್ ಪ್ಯಾಂಟ್, ಸ್ಲೀವ್ ಲೆಸ್ ಡ್ರೆಸ್, ಹಾಫ್ ಪ್ಯಾಂಟ್ ಹಾಕಿಕೊಂಡು ಸಮುದ್ರ ತೀರದ ನಡುವೆ, ಉದ್ಯಾನವನದಲ್ಲಿ ಅಡ್ಡಾಡುತ್ತಿರುವುದು ಕಂಡುಬರುತ್ತಿದೆ. ದೇವಸ್ಥಾನ ದೇವರ ವಾಸಸ್ಥಾನವೇ ಹೊರತು ಮನರಂಜನಾ ಸ್ಥಳವಲ್ಲವೆಂದು ಆಡಳಿತ ಮಂಡಳಿ ಹೇಳಿದ್ದು, ಯಾವ ರೀತಿಯ ಉಡುಪುಗಳನ್ನು ಅನುಮತಿ ನೀಡಬೇಕು ಎಂಬುದನ್ನು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುತ್ತದೆ. ಹೀಗಾಗಿ, ಇನ್ನೂ ಮುಂದೆ ಹಾಫ್ ಪ್ಯಾಂಟ್, ಶಾರ್ಟ್ಸ್, ಹರಿದ ಜೀನ್ಸ್, ಸ್ಕರ್ಟ್ ಮತ್ತು ಸ್ಲೀವ್‌ಲೆಸ್ ಡ್ರೆಸ್‌ಗಳನ್ನು ಧರಿಸಿದವರಿಗೆ ದೇವಸ್ಥಾನದೊಳಗೆ ಪ್ರವೇಶ ನೀಡಲಾಗುವುದಿಲ್ಲ.
ದೇವಸ್ಥಾನದಲ್ಲಿ ಕೆಲವರು ಅಸಭ್ಯ ವಸ್ತ್ರಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ‘ನೀತಿ’ ಉಪಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜನವರಿ 1, 2024 ರಿಂದ ದೇವಾಲಯದೊಳಗೆ ಡ್ರೆಸ್ ಕೋಡ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿದೆ. ಪುರಿ ಜಗನ್ನಾಥ ದೇವಾಲಯದ ‘ಸಿಂಗ ದ್ವಾರ’ದಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಮತ್ತು ದೇವಾಲಯದೊಳಗಿನ ಪ್ರತೀಹಾರಿ ಸೇವಕರಿಗೆ ಕೋಡ್ ಅನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ.
ಇದನ್ನೂ ಓದಿ: ಮಂಗಳೂರು : ಹೆಸರಾಂತ ಉದ್ಯಮಿಯ ಅಸಹಜ ಸಾವು – ಎ.ಸಿ.ಪಿ. ನೇತೃತ್ವದಲ್ಲಿ ತನಿಖೆ