Mangalore: ಹೆಸರಾಂತ ಉದ್ಯಮಿಯ ಅಸಹಜ ಸಾವು – ಎ.ಸಿ.ಪಿ. ನೇತೃತ್ವದಲ್ಲಿ ತನಿಖೆ

Dakshina Kannada news Mangalore business man mundkur Ramdas kamath unnatural death investigation

Mangalore: ಮಂಗಳೂರಿನ (Mangalore)ಹೆಸರಾಂತ ಉದ್ಯಮಿ ಮುಂಡ್ಕೂರು ರಾಮದಾಸ್ ಕಾಮತ್ ಅವರು ಸೆಪ್ಟಂಬರ್ 17ರಂದು ಸಾವಿಗೀಡಾಗಿದ್ದು(Death), ಇವರ ಅಸಹಜ ಸಾವಿನ ಕುರಿತಂತೆ ಸುಮಾರು ಒಂದು ತಿಂಗಳ ನಂತರ ಮತ್ತೆ ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ ನೈಜ ಕಾರಣವೇನು ಎಂಬುದನ್ನು ಬಯಲಿಗೆಳೆಯಲು ವಿಶೇಷ ತನಿಖಾ ತಂಡ ರಚಿಸಲು ಒತ್ತಾಯಿಸಿ ಉದ್ಯಮಿ ಬಿ.ಆರ್.ಶೆಟ್ಟಿ ಅವರು ತಮ್ಮ ಕಾನೂನು ಸಲಹಾ ಸಂಸ್ಥೆ ಮೂಲಕ ನಗರ ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ರಾಮದಾಸ್ ಕಾಮತ್ ಅವರು ಸೆಪ್ಟೆಂಬರ್ 17 ರಂದು ರಥಬೀದಿಯ ಫ್ಲಾಟ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ದೇಹ ಪತ್ತೆಯಾಗಿತ್ತು. ಈ ಕುರಿತು ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಈ ಘಟನೆ ನಡೆದ ಮೂರು ದಿನಗಳ ಬಳಿಕ ಆತ್ಮಹತ್ಯೆ ಹಿಂದಿನ ನಿಗೂಢ ಕಾರಣದ ಕುರಿತಂತೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶಿಸಲಾಗಿದೆ.

ರಾಮದಾಸ್ ಕಾಮತ್ ಅವರು ಆಗರ್ಭ ಶ್ರೀಮಂತರಾಗಿದ್ದು, ತಮ್ಮ ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರಿಯಾಶಿಲರಾಗಿದ್ದರು. ಅಷ್ಟೆ ಅಲ್ಲದೇ, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ, ರಾಮದಾಸ್ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಹೇಳಿಕೊಳ್ಳುವಂತಹ ಯಾವುದೇ ಕಾರಣಗಳಿರಲಿಲ್ಲ ಎನ್ನುವುದು ಆಪ್ತ ವಲಯದ ಅಭಿಪ್ರಾಯವಾಗಿದ್ದು, ಇವರ ಸಾವನ್ನು ಆತ್ಮಹತ್ಯೆ ಎಂದು ಒಪ್ಪಿಕೊಳ್ಳಲು ಅವರ ಆಪ್ತವಲಯ ತಯಾರಿಲ್ಲ ಎನ್ನಲಾಗಿದೆ. ಕಾಮತ್ ಅವರ ಸಾವಿನ ಬಗ್ಗೆ ಅವರ ಕುಟುಂಬಸ್ಥರು ಯಾವುದೇ ಸಂದೇಹ ವ್ಯಕ್ತಪಡಿಸಿ ದೂರು ನೀಡಿಲ್ಲ. ಹೀಗಿದ್ದರೂ ಕೂಡ ಯಾವುದೇ ಅನುಮಾನಗಳಿಗೆ ಇಲ್ಲವೇ ಗೊಂದಲಕ್ಕೆ ಎಡೆ ಮಾಡಿಕೊಡಬಾರದು ಎಂಬ ಉದ್ದೇಶದಿಂದ ಎಸಿಪಿ ನೇತೃತ್ವದಲ್ಲಿಯೇ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ??
ರಾಮದಾಸ್ ಕಾಮತ್ ಅವರು ಪತ್ನಿಯನ್ನು ಮುಂಡೂರಿಗೆ ಬಿಟ್ಟು ಬಂದಿದ್ದರಂತೆ. ಮರುದಿನ ತಾನು ಕೂಡ ಮುಂಡೂರಿಗೆ ಬರುವುದಾಗಿ ಹೇಳಿದ್ದರು ಎನ್ನಲಾಗಿದೆ. ಆದರೆ ಅಲ್ಲಿಗೆ ಹೋಗಿರಲಿಲ್ಲ ಜೊತೆಗೆ ಪತ್ನಿ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಈ ವಿಚಾರವನ್ನು ಪತ್ನಿ ಮಂಗಳೂರಿನಲ್ಲಿರುವ ತಮ್ಮ ತಂಗಿಯ ಮಕ್ಕಳಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಕೊನೆಗೆ ಅವರು ಬಂದು ನೋಡಿದ ಸಂದರ್ಭ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ನಡುವೆ, ಎಂ.ಆರ್. ಕಾಮತ್ (75) ಅವರು ಇತ್ತೀಚಿಗೆ ಕಳೆದ ಮೂರು ತಿಂಗಳಿನಿಂದ ಯಾರೊಂದಿಗೆ ಸಂಪರ್ಕದಲ್ಲಿದ್ದರೋ ಅವರನ್ನೆಲ್ಲ ವಿಚಾರಣೆಗೆ ಒಳಪಡಿಸಬೇಕು ಎಂದು ಉದ್ಯಮಿ ಬಿ.ಆರ್.ಶೆಟ್ಟಿ ಅವರು ತಮ್ಮ ಕಾನೂನು ಸಲಹಾ ಸಂಸ್ಥೆಗೆ ಒತ್ತಾಯ ಮಾಡಿದ್ದಾರೆ. ಉದ್ಯಮಿ ಮುಂಡೂರು ರಾಮದಾಸ್ ಕಾಮತ್ (75) ಅವರ ಆತ್ಮಹತ್ಯೆ ಪ್ರಕರಣದ ತನಿಖೆ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿರುವ ಕುರಿತು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಮಾಹಿತಿ ನೀಡಿದ್ದಾರೆ. ಬಿ.ಆರ್.ಶೆಟ್ಟಿ ಅವರು ತಮ್ಮ ಕಾನೂನು ಸಲಹಾ ಸಂಸ್ಥೆ ಕಾಮತ್ ಜ್ಯೂರಿಸ್ ಮೂಲಕ ನಗರ ಪೊಲೀಸ್ ಕಮಿಷನರ್ ಅವರಿಗೆ ಪತ್ರ ತಲುಪಿರುವುದನ್ನು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: HD Kumaraswamy: ಕುಮಾರಸ್ವಾಮಿರವರಿಂದ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಘೋಷಣೆ !!

Leave A Reply

Your email address will not be published.