Bigg boss-10: ಬಿಗ್‌ಬಾಸ್‌ ಮನೆಗೆ ಹೊಕ್ಕ ಪ್ರದೀಪ್‌ ಈಶ್ವರ್‌ಗೆ ಬಿಗ್ ಶಾಕ್ – ಶಾಸಕ ಸ್ಥಾನಕ್ಕೆ ಬಂತು ಕುತ್ತು ?!

Entertainment political news chikkaballapur mla Pradeep eshwar in trouble after going bigg boss

Pradeep eshwar : ಕರ್ನಾಟಕದ ಜನ ಕಾದು ಕೂತಿದ್ದಂತಹ, ಎಲ್ಲರ ನೆಚ್ಚಿನ ಬಿಗ್ ಬಾಸ್ ಸೀಸನ್-10(Bigg boss ಈಗ ತಾನೆ ಶುರುವಾಗಿದೆ. ಅಚ್ಚರಿಯ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ಅದರಲ್ಲೂ ಕಾಂಗ್ರೆಸ್‌ ನ ಚಿಕ್ಕಬಳ್ಳಾಪುರ(Chikkaballapura MLA) ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರನ್(Pradeep eshwar) ಅವರ ಎಂಟ್ರಿ ಅಂತೂ ಇಡೀ ರಾಜ್ಯದ ಜನತೆಗೆ ಶಾಕ್ ನೀಡಿದೆ. ಸದ್ಯ ಇದೀಗ ಪ್ರದೀಪ್ ಈಶ್ವರ್​ ಬಿಗ್​ ಬಾಸ್​ಗೆ ಹೋಗಿರುವುದು ಸರಿಯೇ ಅಥವಾ ತಪ್ಪೋ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಉದ್ಭವಿಸಿದೆ. ಆದರೆ ಈ ಬೆನ್ನಲ್ಲೇ ದೊಡ್ಮನೆ ಹೊಕ್ಕಿರುವ ಶಾಸಕರಿಗೆ ಬಿಗ್ ಶಾಕ್ ಎದುರಾಗಿದೆ.

ಹೌದು, ವಿಶ್ವದ ಅತ್ಯಂತ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಭಾರತದ ಬಿಗ್‌ಬಾಸ್‌ ರಿಯಾಲಿಟಿ ಶೋ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಕಳೆದ 9 ಸೀಸನ್‌ಗಳು ನಡೆದಿದ್ದು, ಈಗ 10ನೇ ಸೀಸನ್‌ ಅಕ್ಟೋಬರ್‌ 09 ರಿಂದ (ಸೋಮವಾರ) ಆರಂಭವಾಗಿದೆ. ಸದಾ ಟ್ರೋಲ್‌ ಹಾಗೂ ಸುದ್ದಿಯಲ್ಲಿರುವ ಶಾಸಕ ಪ್ರದೀಪ್‌ ಈಶ್ವರ್‌, ಈಗ ಕನ್ನಡ ಬಿಗ್​ ಬಾಸ್ ಸೀಸನ್ 10ರಲ್ಲಿ ಬಂಧಿಯಾಗಿದ್ದಾರೆ. ಆದರೆ, ಒಬ್ಬ ಜನಪ್ರತಿನಿಧಿಯಾಗಿ ಜನರ ಸಮಸ್ಯೆಗಳನ್ನು ಆಲಿಸದೇ ಮನರಂಜನೆ ನೀಡುವ ಮನೆಗೆ ತೆರಳಿದ ಹಿನ್ನೆಲೆಯಲ್ಲಿ ಅವರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡಬೇಕು ಎಂದು ವಂದೇ ಮಾತರಂ ಸಮಾಜ ಸೇವಾ ಸಂಸ್ಥೆಯಿಂದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್‌ ಅವರಿಗೆ ದೂರು ನೀಡಲಾಗಿದೆ.

ದೂರು ಪತ್ರದಲ್ಲೇನಿದೆ:
ವಂದೇ ಮಾತರಂ ಸಮಾಜ ಸೇವಾ ಸಂಸ್ಥೆಯಿಂದ ಲಿಖಿತ ದೂರು ಸಲ್ಲಿಕೆ ಮಾಡಲಾಗಿದ್ದು, ಪ್ರದೀಪ್ ಈಶ್ವರ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಮನವಿ ಮಾಡಲಾಗಿದೆ.

ದೂರು ಪತ್ರದಲ್ಲಿ ‘ಮಾನ್ಯ ಪ್ರದೀಶ್‌ ಈಶ್ವರ್‌ ಅವರು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದಾರೆ. ರಾಜ್ಯ ಸರ್ಕಾರ ಅವರಿಗೆ ಗೌರವಧನ ನಿಡಲಾಗುತ್ತಿದ್ದು, ಆ ಕ್ಷೇತ್ರದ ಜವಾಬ್ದಾರಿಯುತ ಪ್ರಜೆ ಮತ್ತು ವ್ಯಕ್ತಿಯಾಗಿದ್ದಾರೆ. ಆ ಕ್ಷೇತ್ರದ ಯಾವುದೇ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಸಮಸ್ಯೆಯಾದಾಗ ಅವರು ಸ್ಪಂದಿಸುವುದು ಆದ್ಯ ಕರ್ತವ್ಯವಾಗಿರುತ್ತದೆ. ಆದರೆ, ಅವರು ಆ ಜವಾಬ್ದಾರಿಯಂತೆ ನಡೆದುಕೊಳ್ಳದೇ ಬಿಗ್‌ಬಾಸ್‌ ಎಂಬ ಮನರಂಜನೆ ಕಾರ್ಯಕ್ರಮಕ್ಕೆ ಹೋಗಿರುವುದರಿಂದ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು. ಅವರಿಗೆ ಯಾವುದೇ ರೀತಿಯ ಶಾಸಕ ಭತ್ಯೆಗಳನ್ನು ನೀಡಬಾರದು. ಈಗಿನಿಂದಲೇ ಅವರನ್ನು ಅಮಾನತ್ತಿನಲ್ಲಿ ಇಡಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಕಾನೂನು ಕ್ರಮಕ್ಕೆ ಅವಕಾಶ ಇದೆಯಾ?
ಪ್ರದೀಪ್ ಈಶ್ವರ್ ಒಬ್ಬ ಜನಪ್ರತಿನಿಧಿ. ಬಿಗ್‌ಬಾಸ್ ಮನೆಗೆ ಪ್ರವೇಶ ಪಡೆದಿರುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಮಾಹಿತಿ‌ ಇಲ್ಲ. ಆದರೆ ಅವರು ಇಂತಹ ರಿಯಾಲಿಟಿ ಶೋ ಗಳಲ್ಲಿ ಭಾಗಿವಹಿಸುವಂತಿಲ್ಲ ಎಂಬ ಯಾವುದೇ ಕಾನೂನು ಇಲ್ಲ. ಯಾಕೆಂದರೆ ವಿಧಾನಸಭೆಯ ಶಾಸಕರ ನಡವಳಿಗಳು ರೂಪುಗೊಂಡಾಗ ರಿಯಾಲಿಟಿ ಶೋ ಕಾನ್ಸೆಪ್ಟ್ ಇರಲಿಲ್ಲ. ಈ ಹಿಂದೆ ಕೆಲವು ಶಾಸಕರು, ಸಚಿವರು ಕಿರುತೆರೆ, ಹಿರಿತೆರೆಗಳಲ್ಲಿ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಅಭಿನಯದ ಮೂಲಕ ಕಾಣಿಸಿಕೊಂಡಿದ್ದಾರೆ. ಆದರೆ ಅದು ಸರ್ಕಾರದ ಮಟ್ಟಕ್ಕೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದಿಲ್ಲ. ಕಾನೂನುಗಳು ಇರುವುದು ಜನಪ್ರತಿನಿಧಿಗಳು ತಪ್ಪು ಮಾಡಿದಾಗ ಕ್ರಮ ತೆಗೆದುಕೊಳ್ಳುವುದಕ್ಕೆ. ರಿಯಾಲಿಟಿ ಶೋ ಎಂಟ್ರಿ‌ ಕೊಟ್ಟಿದ್ದಕ್ಕೆ ತಪ್ಪೇನು ಇಲ್ಲ. ಅದು ಅವರವರ ಜನಪ್ರಿಯತೆಗೆ ಬಿಟ್ಟಿದ್ದು.ಜನಪ್ರಿಯತೆ ವಿಚಾರದಲ್ಲಿ ಆನಾಚಾರ ಮಾಡಿದರೆ ಕ್ರಮ ತೆಗೆದುಕೊಳ್ಳಬಹುದು.

ಇದನ್ನೂ ಓದಿ: ತಮ್ಮ ಕಾಲ ಮೇಲೆ ನಿಲ್ಲಲು ‘ಬ್ಯುಸಿನೆಸ್’ ಮಾಡೋ ತವಕವೇ – ಹಾಗಿದ್ರೆ ಸುಲಭದಲ್ಲಿ ಸಿಗುತ್ತೆ 10 ಲಕ್ಷ ಸಾಲ !! ಇಲ್ಲಿ ಸಂಪೂರ್ಣ ವಿವರ

Leave A Reply

Your email address will not be published.