Ration Card: APL, BPL ಪಡಿತರ ಚೀಟಿದಾರರಿಗೆ ಮತ್ತೊಂದು ಮಹತ್ವದ ಮಾಹಿತಿ!

Important information for APL and bpl card holder news

Ration Card: ಸರಕಾರ ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) , ಅನ್ನಭಾಗ್ಯ (Anna Bhagya Scheme) ಇನ್ನಿತರ ಯೋಜನೆಯ ಮೂಲಕ ಜನರಿಗೆ ನೆರವಾಗುತ್ತಿದೆ. ಈ ನಿಟ್ಟಿನಲ್ಲಿ ರೇಷನ್‌ ಕಾರ್ಡ್‌ ತಿದ್ದುಪಡಿಗೆ (Ration Card Updates) ಮತ್ತೊಂದು ಅವಕಾಶ ಕಲ್ಪಿಸಿದೆ.

ಪಡಿತರ ಚೀಟಿಯ ಜೊತೆಗೆ ಆಧಾರ್‌ ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ರೇಷನ್‌ ಕಾರ್ಡ್‌ ತಿದ್ದುಪಡಿಗೆ ಪ್ರಮುಖವಾಗಿ, ಹೊಸ ಸದಸ್ಯರ ಹೆಸರು ಸೇರ್ಪಡೆ, ಸದಸ್ಯರ ಹೆಸರು ತೆಗೆಯುವುದು. ಸದಸ್ಯರ ಹೆಸರಿನ ತಿದ್ದುಪಡಿ, ವಿಳಾಸ ತಿದ್ದುಪಡಿ. ಮನೆಯ ಯಜಮಾನರ ಬದಲಾವಣೆ ಸೇರಿದಂತೆ ವಿವಿಧ ರೀತಿಯ ತಿದ್ದುಪಡಿಗೆ ಅನುವು ಮಾಡಿಕೊಡಲಾಗಿದೆ. ಅಕ್ಟೋಬರ್‌ 8ರಿಂದ 10ರವರೆಗೆ ಈ ಜಿಲ್ಲೆಗಳಲ್ಲಿ ಪಡಿತರ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರಕಾರ ಎರಡನೇ ಹಂತದಲ್ಲಿ ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ವಿಜಯಪುರ, ಕೊಡಗು, ಮಂಡ್ಯ, ಬೆಳಗಾವಿ, ಬಾಗಲಕೋಟೆ, ಚಿಕ್ಕಮಗಳೂರು, ಧಾರವಾಡ, ಗದಗ, ಹಾವೇರಿ, ಹಾಸನ ಜಿಲ್ಲೆಗಳಿಗೆ ಅವಕಾಶ ನೀಡಲಾಗಿದೆ.

ಚಿಕ್ಕ ಮಕ್ಕಳ ಹೆಸರು ಸೇರ್ಪಡೆಗೆ ಮಕ್ಕಳ ಸೇರ್ಪಡೆಗೆ ಜನನ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌ ಕಡ್ಡಾಯವಾಗಿದೆ. ಜೊತೆಗೆ ತಂದೆ, ತಾಯಿಯ ಆಧಾರ್‌ ಕಾರ್ಡ್‌ ಅತ್ಯವಶ್ಯಕವಾಗಿದೆ. ಇತರರ ಹೆಸರು, ವಿಳಾಸ ತಿದ್ದುಪಡಿಯನ್ನು ಕರ್ನಾಟಕ ಒನ್‌, ಬೆಂಗಳೂರು ಒನ್‌ ಹಾಗೂ ಗ್ರಾಮ ಒನ್‌ ಕೇಂದ್ರಗಳಲ್ಲಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪಡಿತರ ತಿದ್ದುಪಡಿ ಮಾಡಿಸುವ ಸಂದರ್ಭ ರೇಷನ್‌ ಕಾರ್ಡ್‌, ಬ್ಯಾಂಕ್‌ ಖಾತೆಯ ಪಾಸ್‌ಬುಕ್‌, ಆಧಾರ್‌ ಕಾರ್ಡ್‌ ಬೇಕಾಗುತ್ತವೆ.

ಕರ್ನಾಟಕ ಒನ್‌ (karnataka One), ಬೆಂಗಳೂರು ಒನ್‌ (Bengaluru One), ಗ್ರಾಮ ಒನ್‌ (Grama One) ಕೇಂದ್ರಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಪಡಿತರ ಚೀಟಿದಾರರು ಪಡಿತರ ಚೀಟಿ ತಿದ್ದುಪಡಿ(Ration Card Updates) ಮಾಡಿಕೊಳ್ಳಬಹುದು. ರೇಷನ್‌ ಕಾರ್ಡ್‌ನಲ್ಲಿನ ತಾಂತ್ರಿಕ ಕಾರಣಗಳಿಂದಾಗಿ (Technical Reason) ಗೃಹಲಕ್ಷ್ಮೀ ಯೋಜನೆ (Gruha Lakshmi Yojana), ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಯ ಪ್ರಯೋಜನ ಇನ್ನೂ ಕೆಲವರಿಗೆ ಸಿಕ್ಕಿಲ್ಲ. ಇದೀಗ ಪಡಿತರ ಕಾರ್ಡ್‌ ತಿದ್ದುಪಡಿಗೆ ಸರಕಾರ ಹೆಚ್ಚುವರಿ ಕಾಲಾವಕಾಶವನ್ನು ನೀಡಲಾಗಿದೆ. ಎಪಿಎಲ್‌ ಕಾರ್ಡ್‌ (APL Card) ಮಾತ್ರವಲ್ಲದೇ ಬಿಪಿಎಲ್ ಕಾರ್ಡ್ (BPL Card) ಮತ್ತು ಅಂತ್ಯೋದಯ ಕಾರ್ಡ್ (Anthyodhaya Card) ಹೊಂದಿರುವ ಪಡಿತರ ಚೀಟಿಯಲ್ಲಿನ ತಿದ್ದುಪಡಿಗೆ ಅನುವು ಮಾಡಿಕೊಡಲಾಗಿದೆ.

Leave A Reply

Your email address will not be published.