Charmadi Ghat: ಚಾರ್ಮಡಿ ಘಾಟ್​​​ ಪ್ರಯಾಣಿಕರಿಗೆ ಕೇಂದ್ರದಿಂದ ಭರ್ಜರಿ ಗುಡ್​ನ್ಯೂಸ್!

Great news for Charmadi Ghat passengers from the central

Charmadi Ghat: ದಕ್ಷಿಣ ಕನ್ನಡ- ಚಿಕ್ಕಮಗಳೂರು ಜಿಲ್ಲೆಗಳ ನಡುವೆ 25 ಕಿಮೀ ವ್ಯಾಪ್ತಿಯ ಚಾರ್ಮಡಿ ಘಾಟ್ ಹೆದ್ದಾರಿಯನ್ನು ದಕ್ಷಿಣ ಕನ್ನಡದ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ಅದಲ್ಲದೆ ಪ್ರಾಕೃತಿಕ ಸೌಂದರ್ಯದಿಂದ ಚಾರ್ಮಡಿ ಘಾಟ್ (Charmadi Ghat) ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಇದೀಗ ಸರ್ಕಾರದಿಂದ ಚಾರ್ಮಡಿ ಘಾಟ್​​​ ಪ್ರಯಾಣಿಕರಿಗೆ ಗುಡ್​ನ್ಯೂಸ್ ನೀಡಲಾಗಿದೆ. ಇದರಿಂದ ಪ್ರಯಾಣಿಕರ ಹಲವು ದಿನಗಳ ಸಮಸ್ಯೆಗೆ ಪರಿಹಾರ ಸಿಗಲಿದೆ.

ಹೌದು, ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಚಾರ್ಮಡಿ ಘಾಟ್ ಹೆದ್ದ್ದಾರಿಯ ಅಭಿವೃದ್ಧಿಗೆ ಅನುಮತಿ ನೀಡಿದೆ. ಈ ಮೂಲದ ಚಾರ್ಮಡಿ ಘಾಟ್ ದ್ವಿಪಥ ಹೆದ್ದಾರಿಯಾಗಿ ಬದಲಾಗಲಿದೆ.

ಚಾರ್ಮಡಿ ಘಾಟ್ ರಸ್ತೆ ಅತಿ ಹೆಚ್ಚು ವಾಹನ ಸಂಚಾರ ಹೊಂದಿರುವ ಮಾರ್ಗ ಇದಾಗಿದ್ದು, 11 ವಿಶಿಷ್ಠ ತಿರುವುಗಳನ್ನು ಹೊಂದಿದೆ. 2018-19ರಲ್ಲಿ ಸುರಿದ ಭಾರೀ ಮಳೆಯಿಂದಾಗಿ ಈ ಮಾರ್ಗವನ್ನು ಕೆಲ ದಿನ ಬಂದ್ ಮಾಡಲಾಗಿತ್ತು.
ರಸ್ತೆಯ ರಿಪೇರಿ ಬಳಿಕ ಹಂತ ಹಂತವಾಗಿ ಎಲ್ಲಾ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಆದರೆ ಮಳೆಗಾಲದಲ್ಲಿ ಬಂಡೆ ಕುಸಿತ, ಭೂ ಕುಸಿತ ಉಂಟಾಗುತ್ತಿರುತ್ತದೆ. ಈ ಹಿನ್ನೆಲೆ ರಸ್ತೆಯ ಅಭಿವೃದ್ಧಿಯ ಮನವಿ ಕೇಳಿ ಬಂದಿತ್ತು.

ಆದ್ದರಿಂದ ಇದೀಗ ಚಾರ್ಮಡಿ ಹಳ್ಳದಿಂದ ಘಾಟ್​ ನ 11ನೇ ತಿರುವಿನವರೆಗಿನ 11.2 ಕಿ.ಮೀ ವ್ಯಾಪ್ತಿಯ ಹೆದ್ದಾರಿಯ ಅಭಿವೃದ್ಧಿಯಾಗಲಿದೆ. ಅಭಿವೃದ್ಧಿ ಆಗುತ್ತಿರುವ ರಸ್ತೆ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರಲಿದೆ. ಅಲ್ಲದೇ 490 ಕೋಟಿ ರೂ.ಗಳಲ್ಲಿ ಹೆದ್ದಾರಿ ಅಭಿವೃದ್ಧಿ ಆಗಲಿದೆ. ಈ ಸಂಬಂಧ ಡಿಪಿಆರ್ ಸಿದ್ಧಪಡಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಖ್ಯವಾಗಿ ರಸ್ತೆ 10 ಮೀ ಅಗಲ ಇರಲಿದ್ದು, ದ್ವಿಪಥ ಆಗಲಿದೆ. ರಸ್ತೆಯೂ ದ್ವಿಪಥ ಆಗೋದರಿಂದ ವಾಹನಗಳ ವೇಗ ಹೆಚ್ಚಾಗಲಿದ್ದು, ವಾಣಿಜ್ಯ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆಗಳಿವೆ.

Leave A Reply

Your email address will not be published.