7th Pay Commission: ಸರಕಾರಿ ನೌಕರರಿಗೆ ಈ ಬಾರಿ ದೀಪಾವಳಿಗೆ ಸಿಗಲಿದೆ ಡಬಲ್ ಗಿಫ್ಟ್!!!

Good news for Central Government workers regarding deepavali bonus

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ(Central Government Employees)ಭರ್ಜರಿ ಸಿಹಿ ಸುದ್ದಿ ಇಲ್ಲಿದೆ. ಭತ್ಯೆ ಹೆಚ್ಚಳಕ್ಕಾಗಿ ಎದುರು ನೋಡುತ್ತಿದ್ದ ನೌಕರರಿಗೆ ದೀಪಾವಳಿ ಬೋನಸ್ (Deepavali Bouns)ಸಿಗಲಿದೆ. ನವರಾತ್ರಿ ಹಬ್ಬದ ವೇಳೆ ಸರ್ಕಾರವು ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸುತ್ತದೆ. ಅದೇ ರೀತಿ, ಈ ಬಾರಿ ಕೂಡಾ ಹಬ್ಬದ ಅವಧಿಯಲ್ಲಿ ಉದ್ಯೋಗಿಗಳಿಗೆ ಡಿಎ ಹೆಚ್ಚಳವನ್ನು ಉಡುಗೊರೆಯಾಗಿ ಸಿಗಲಿದೆ ಎನ್ನಲಾಗಿದೆ.

ಭಾರತೀಯ ರೈಲ್ವೆ ಉದ್ಯೋಗಿಗಳಿಗೆ ಪ್ರತಿ ವರ್ಷ ದೀಪಾವಳಿ ಸಂದರ್ಭ ಉತ್ಪಾದಕತೆ ಲಿಂಕ್ಡ್ ಬೋನಸ್ (PLB) ನೀಡಲಾಗುತ್ತದೆ. ಇದರಲ್ಲಿ 78 ದಿನಗಳ ಸಂಬಳಕ್ಕೆ ಸಮನಾದ ಬೋನಸ್ ನೀಡಲಾಗುತ್ತದೆ. ಇದನ್ನು ಅತ್ಯಂತ ಕಡಿಮೆ ದರ್ಜೆಯ (ಗ್ರೂಪ್ ಸಿ ಮತ್ತು ಗ್ರೂಪ್ ಡಿ) ಉದ್ಯೋಗಿಗಳಿಗೆ ನೀಡಲಾಗುತ್ತದೆ. ಕನಿಷ್ಠ ವೇತನದ ಆಧಾರದ ಮೇರೆಗೆ ಬೋನಸ್ ಮೊತ್ತವನ್ನು ಉದ್ಯೋಗಿಯ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ, ಈ ಬಾರಿ ಈ ಮೊತ್ತವನ್ನು ಹೆಚ್ಚಿಸುವಂತೆ ರೈಲ್ವೆ ಫೆಡರೇಷನ್ ಮನವಿ ಮಾಡಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಅಂತಿಮ ತೀರ್ಮಾನ ನೀಡಬೇಕಾಗಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ ವರ್ಷವೂ ಹಬ್ಬ ಹರಿದಿನಗಳಲ್ಲಿ ಬೋನಸ್ ನೀಡಲಾಗುತ್ತದೆ. ರೈಲ್ವೇ ಸಚಿವಾಲಯವು ಎಲ್ಲಾ ಗೆಜೆಟೆಡ್ ಅಲ್ಲದ ಉದ್ಯೋಗಿಗಳಿಗೆ (ಗುಂಪು C ಮತ್ತು ಗುಂಪು D) PLB ಅನ್ನು ಪಾವತಿ ಮಾಡುತ್ತದೆ. ಬೋನಸ್ ಅನ್ನು ಕಡಿಮೆ ದರ್ಜೆಯ (ಗುಂಪು ಡಿ) ನೌಕರರ ಕನಿಷ್ಠ ವೇತನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಇದರಲ್ಲಿ, ಉದ್ಯೋಗಿಯ 78 ದಿನಗಳ ವೇತನಕ್ಕೆ ಸಮನಾದ ಬೋನಸ್ ಮೊತ್ತವನ್ನು ನೀಡಲಾಗುತ್ತದೆ.

7ನೇ ವೇತನ ಆಯೋಗದ ಶಿಫಾರಸ್ಸಿನ ಅನುಸಾರ, ಕನಿಷ್ಠ ವೇತನದ ಆಧಾರದ ಮೇಲೆ ಬೋನಸ್ ಮೊತ್ತವನ್ನು 46,159 ರೂ.ಗೆ ಹೆಚ್ಚಿಸಲು ರೈಲ್ವೆ ನೌಕರರ ಫೆಡರೇಷನ್ ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಿದೆ. ಆದರೆ, 6ನೇ ವೇತನ ಶ್ರೇಣಿಯ ಕನಿಷ್ಠ ವೇತನ 7000 ರೂ. ಯನ್ನು ಆಧರಿಸಿ ಎಲ್ಲಾ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರು ಕೇವಲ 17,951 ರೂ. ಬೋನಸ್ ಪಡೆಯುವ ಕುರಿತು ರೈಲ್ವೇ ನೌಕರರ ಒಕ್ಕೂಟ ಮಾಹಿತಿ ನೀಡಿದೆ.

 

ಇದನ್ನು ಓದಿ: Men Health: ಪುರುಷರೇ 40 ವರ್ಷ ಆಯ್ತು ಅಂದ್ರೆ ಅಲರ್ಟ್‌ ಆಗಿರಿ! ಆಮೇಲೆ ಕಾದಿರುತ್ತೆ ನೋಡಿ ಈ ಸಮಸ್ಯೆ…!

Leave A Reply

Your email address will not be published.