S Somanath: ದಿನಂಪ್ರತಿ ಎಡೆಬಿಡದೆ ‘ಇಸ್ರೋ’ ಮೇಲೆ ದಾಳಿ ನಡೆಯುತ್ತೆ, ನಾವು ಏನು ಮಾಡ್ತೇವೆ ಗೊತ್ತಾ?! ಅಬ್ಬಬ್ಬಾ.. ಸ್ಪೋಟಕ ವಿಚಾರ ತೆರೆದಿಟ್ಟ ಅಧ್ಯಕ್ಷ ಸೋಮನಾಥನ್

National news ISRO news S Somanath says isro fights over 100 cyber attacks daily

S Somanath: ದೇಶದ ಪ್ರತಿಷ್ಟಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರತಿದಿನ 100 ಕ್ಕೂ ಹೆಚ್ಚು ಸೈಬರ್ ದಾಳಿಗಳನ್ನು ಎದುರಿಸುತ್ತಿದೆ. ಅಲ್ಟ್ರಾ- ಆಧುನಿಕ ಸಾಫ್ಟ್‌ವೇರ್ ಮತ್ತು ಚಿಪ್ ಬಳಸುವ ರಾಕೆಟ್ ತಂತ್ರಜ್ಞಾನದಲ್ಲಿ ಸೈಬರ್ ದಾಳಿಯ ಸಾಧ್ಯತೆ ಹೆಚ್ಚಿರುತ್ತದೆ. ಆದ್ರೆ, ಇಂತಹ ದಾಳಿಗಳನ್ನು ಎದುರಿಸಲು ನಮ್ಮ ಸಂಸ್ಥೆಯು ದೃಢವಾದ ಸೈಬರ್ ಸೆಕ್ಯುರಿಟಿ ನೆಟ್‌ವರ್ಕ್ ಹೊಂದಿದೆ. ಹೀಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರತಿನಿತ್ಯ ನೂರು ಸೈಬರ್ ದಾಳಿಗಳ (Cyber Attacks) ವಿರುದ್ಧ ಹೋರಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್ (S.Somanath) ಹೇಳಿದ್ದಾರೆ.

ಹೌದು, ಕೊಚ್ಚಿಯಲ್ಲಿ ಶನಿವಾರ ನಡೆದ ಎರಡು ದಿನಗಳ ಅಂತರರಾಷ್ಟ್ರೀಯ ಸೈಬರ್ ಸಮ್ಮೇಳನದ 16 ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, “ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾಗುತ್ತಿದೆ, ನಾವೂ ಕೂಡ ಅಪ್‌ಡೇಟ್ ಆಗಬೇಕು. ಸಾಫ್ಟ್‌ವೇರ್ ಹೊರತುಪಡಿಸಿ ರಾಕೆಟ್‌ನೊಳಗಿನ ಹಾರ್ಡ್‌ವೇರ್ ಚಿಪ್‌ಗಳ ಸುರಕ್ಷತೆಯ ಬಗ್ಗೆಯೂ ಸಂಸ್ಥೆ ಗಮನಹರಿಸಲಾಗುತ್ತಿದೆ. ಇದಕ್ಕಾಗಿ ವಿವಿಧ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ” ಎಂದರು.

ಅಲ್ಲದೆ ಉಪಗ್ರಹವನ್ನು ನಿಯಂತ್ರಣ ಮಾಡುವ ವಿಧಾನವು ಒಂದೇ ಸಮಯದಲ್ಲಿ ಅನೇಕ ಉಪಗ್ರಹಗಳನ್ನು ನಿಯಂತ್ರಿಸುವ ಸಾಫ್ಟ್‍ವೇರ್ ವಿಧಾನವಾಗಿ ಬದಲಾಗಿದೆ. ಇದು ಈ ವಲಯದ ಮಹತ್ವದ ಬೆಳವಣಿಗೆಯನ್ನು ಸೂಚಿಸುತ್ತದೆ. ಇಂದು ಸಾಮಾನ್ಯ ಜನರ ದೈನಂದಿನ ಜೀವನಕ್ಕೆ ಸಹಾಯ ಮಾಡುವ ಉಪಗ್ರಹಗಳು ಸಹ ಪ್ರಸ್ತುತವಾಗಿವೆ. ಇವೆಲ್ಲವನ್ನೂ ವಿವಿಧ ರೀತಿಯ ಸಾಫ್ಟ್‍ವೇರ್‍ಗಳಿಂದ ನಿಯಂತ್ರಿಸಲಾಗುತ್ತದೆ. ಇವೆಲ್ಲವನ್ನೂ ರಕ್ಷಿಸಲು ಸೈಬರ್ ಸುರಕ್ಷತೆ ಬಹಳ ಮುಖ್ಯ ಎಂದು ಅವರು ತಿಳಿಸಿದ್ದಾರೆ.

“ಈ ಹಿಂದೆ ನಾವು ಉಪಗ್ರಹವನ್ನು ಮೇಲ್ವಿಚಾರಣೆ ಮಾಡಲು ಸಾಫ್ಟ್‌ವೇರ್ ಸಿದ್ಧಪಡಿಸುತ್ತಿದ್ದೆವು. ಈಗ ಅದೇ ಕೆಲಸವನ್ನು ಅನೇಕ ಉಪಗ್ರಹಗಳಿಗೆ ಮಾಡಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾಗುತ್ತಿದೆ, ನಾವು ಅದಕ್ಕೆ ತಕ್ಕಂತೆ ನವೀಕರಿಸಬೇಕಾಗುತ್ತದೆ. ಸಾಮಾನ್ಯ ಜನರ ದೈನಂದಿನ ದಿನಚರಿಗೆ ಸಹಾಯ ಮಾಡುವ ಅನೇಕ ಉಪಗ್ರಹಗಳಿವೆ. ಇವೆಲ್ಲವನ್ನು ವಿವಿಧ ರೀತಿಯ ಸಾಫ್ಟ್‌ವೇರ್‌ಗಳು ನಿಯಂತ್ರಿಸುತ್ತವೆ. ಇದನ್ನೆಲ್ಲಾ ರಕ್ಷಿಸಲು ಸೈಬರ್ ಭದ್ರತೆ ಬಹಳ ಮುಖ್ಯ” ಎಂದು ತಿಳಿಸಿದರು.

ಇಷ್ಟೇ ಅಲ್ಲದೆ ‘ಸುಧಾರಿತ ತಂತ್ರಜ್ಞಾನವು ಒಂದು ವರದಾನವಾಗಿದೆ. ಇದೇ ವೇಳೆ ಅದು ಬೆದರಿಕೆಗೂ ಕಾರಣವಾಗಿದೆ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನವನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ಒಡ್ಡುವ ಸವಾಲುಗಳನ್ನು ನಾವು ಅದೇ ತಂತ್ರಜ್ಞಾನದಿಂದ ಎದುರಿಸಬಹುದು. ಈ ನಿಟ್ಟಿನಲ್ಲಿ ಸಂಶೋಧನೆ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Bengalore: ಗೆಳೆಯನ ತಂಗಿ ಹುಟ್ದಬ್ಬಕ್ಕೆ ಬ್ಯಾನರ್ ಹಾಕಿ ಶುಭಕೋರಿದ ಕುಚುಕು ಗೆಳೆಯರು – ಕೆಲವೇ ಹೊತ್ತಲ್ಲಿ ಫೋಟೋದಲ್ಲಿದ್ದವರೆಲ್ಲ ಹೆಣವಾಗಿ ಹೋದರು

Leave A Reply

Your email address will not be published.