BBK Season 10: ದೊಡ್ಮನೆಗೆ ಬಂದ ಹರಹರ ಮಹದೇವ, ಮಂಗಳಮುಖಿ ನೀತು ಎಂಟ್ರಿ ; ಡ್ರೋನ್‌ ಪ್ರತಾಪ್‌ ವೈಟಿಂಗ್‌!!!

BBK Season 10: ಕೊನೆಗೂ ಬಿಗ್‌ಬಾಸ್‌ ಕನ್ನಡ ಸೀಸನ್‌ -10 ಕ್ಕೆ ಕಲರ್‌ಫುಲ್‌ ಆರಂಭ ದೊರಕಿದೆ. ಜನರ ವೋಟಿಂಗ್‌ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಿರುವುದು ಈ ಬಾರಿಯ ವಿಶೇಷ. ಮೊದಲನೇ ಸ್ಪರ್ಧಿಯಾಗಿ ನಾಗಿಣಿ ಧಾರಾವಾಹಿ ಖ್ಯಾತಿ ನಮ್ರತಾ ಗೌಡ, ಎರಡನೇ ಸ್ಪರ್ಧಿಯಾಗಿ ಕಿರುತೆರೆ ನಟ ಸ್ನೇಹಿತ್‌, ಮೂರನೇ ಸ್ಪರ್ಧಿಯಾಗಿ ರ್ಯಾಪರ್‌, ಸಿಂಗರ್‌ ಇಶಾನಿ, ನಾಲ್ಕನೇ ಸ್ಪರ್ಧಿಯಾಗಿ ವಿನಯ್‌ ಗೌಡ, ಐದನೇ ಸ್ಪರ್ಧಿಯಾಗಿ ತುಕಾಲಿ ಸಂತೋಷ್‌ ಆರನೇ ಸ್ಪರ್ಧಿಯಾಗಿ ಮಂಗಳಮುಖಿ ನೀತು ವನಜಾಕ್ಷಿ, ಏಳನೇ ಸ್ಪರ್ಧಿಯಾಗಿ ನಟಿ ಸಿರಿ, ಎಂಟನೇ ಸ್ಪರ್ಧಿಯಾಗಿ ಸ್ನೇಕ್‌ ಶ್ಯಾಮ್‌, ಒಂಭತ್ತನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಭಾಗ್ಯಶ್ರೀ,ಹತ್ತನೇ ಸ್ಪರ್ಧಿಯಾಗಿ ಪತ್ರಕರ್ತ ಗೌರೀಶ್‌ ಅಕ್ಕಿ, ಹನ್ನೊಂದನೇ ಸ್ಪರ್ಧಿಯಾಗಿ ಮೈಕೆಲ್‌  ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ.

ಇತ್ತ ಕಡೆ ಸೋಷಿಯಲ್‌ ಮೀಡಿಯಾ ಸ್ಟಾರ್‌ ಸುರಸುಂದರ ಅವಿನಾಶ್‌ ಅವರು ವೇದಿಕೆಗೆ ಬಂದಿದ್ದು, ಜನರ ವೋಟಿಂಗ್‌ ಅವರಿಗೆ ಕಡಿಮೆ ದೊರತದ್ದರಿಂದ ವೇದಿಕೆಯಿಂದಲೇ ವಾಪಾಸ್‌ ಹೋಗಿದ್ದಾರೆ. ನಂತರ ಬಂದ ಡ್ರೋನ್‌ ಪ್ರತಾಪ್‌ ಅವರನ್ನು ವೈಟಿಂಗ್‌ ಸ್ಪರ್ಧಿಯಾಗಿ ಇಡಲಾಗಿದೆ. ನಟಿ ತನೀಶಾ ಅವರಿಗೆ ಕೂಡಾ ವೋಟಿಂಗ್‌ ಕಡಿಮೆ ಬಂದಿದ್ದರಿಂದ ಅವರು ಕೂಡಾ ಡ್ರೋನ್‌ ಪ್ರತಾಪ್‌ಗೆ ಜೊತೆಯಾಗಿದ್ದಾರೆ. ಇವರ ಜೊತೆಗೆ ಬುಲೆಟ್‌ ಪ್ರಕಾಶ್‌ ಅವರ ಮಗ ರಕ್ಷಕ್‌ ಪ್ರಕಾಶ್‌, ಚಾರ್ಲಿ 777 ಖ್ಯಾತಿಯ ಸಂಗೀತಾ ವೇದಿಕೆಗೆ ಬಂದಿದ್ದು, ಇವರು ಕೂಡಾ ವೋಟ್‌ ಕಡಿಮೆ ದೊರಕಿದ್ದು, ಸೀಕ್ರೇಟ್‌ ರೂಮ್‌ನಲ್ಲಿರಲು ಸುದೀಪ್‌ ಹೇಳಿದ್ದಾರೆ.

ನಟಿ, ಬಾಡಿಬಿಲ್ಡರ್‌ ಚಿತ್ರಲ್‌ ರಂಗಸ್ವಾಮಿ ವೇದಿಕೆ ಬಂದು ಜನರ ವೋಟ್‌ ಲಭಿಸದೆ ನಿರ್ಗಮಿಸಿದ್ದಾರೆ. ಸಂತೋಷ್‌ ವರ್ತೂರ್‌ ಕೃಷಿಕ, ನಟ ಕಾರ್ತಿಕ್‌ ಇವರಿಗೆ ಕೂಡಾ ಅಧಿಕ ವೋಟ್‌ ಲಭಿಸದೆ ಸೀಕ್ರೇಟ್‌ ರೂಂ ನಲ್ಲಿದ್ದಾರೆ.

 

Photo Credit: Instagram

 

ಕಳೆದ 9 ಸೀಸನ್‌ ಗಳನ್ನು ಹೋಸ್ಟ್‌ ಮಾಡಿದ ಕರುನಾಡ ಕಿಚ್ಚ ಸುದೀಪ್‌ ಅವರು ಈ ಬಾರಿ ಕೂಡಾ ಶೋ ಹೋಸ್ಟ್‌ ಮಾಡಲಿದ್ದಾರೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 10, ಕಲರ್ಸ್‌ ಕನ್ನಡದಲ್ಲಿ ಪ್ರತಿ ದಿನ ರಾತ್ರಿ 9.30 ರಿಂದ ಪ್ರಾರಂಭವಾಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಮಾಹಿತಿ ಕ್ಷಣ ಕ್ಷಣ ಅಪ್ಡೇಟ್‌ ಮಾಡಲಾಗುತ್ತಿದೆ…

 

Leave A Reply

Your email address will not be published.