Heart Attack: ಯುವಕರಲ್ಲಿ ಹೆಚ್ಚುತ್ತಿದೆ ಹೃದಯಘಾತ ಪ್ರಮಾಣ : ಹಠಾತ್ ಹೃದಯಾಘಾತವಾದಾಗ ಏನು ಮಾಡಬೇಕು ?

Heart Attack: ನಮ್ಮ ಯುವಜನತೆಯಲ್ಲಿ ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲೂ ಕರೋನ ನಂತರದಲ್ಲಿ ಅತಿ ಹೆಚ್ಚು ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆಗಳು ಪ್ರತಿನಿತ್ಯ ವರದಿಯಾಗುತ್ತಲೇ ಇವೆ.

ವಿಶ್ವದಾದ್ಯಂತ 18 ಲಕ್ಷಕ್ಕೂ ಅಧಿಕ ಮಂದಿ ಪ್ರತಿ ವರ್ಷ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿವುದಾಗಿ ವರದಿಯೊಂದು ಬಹಿರಂಗಪಡಿಸಿದೆ. ಜಗತ್ತಿನಾದ್ಯಂತ ಇಂದು ಅತಿ ಹೆಚ್ಚು ಕಾಡುತ್ತಿರುವ ಕಾಯಿಲೆ ಎಂದರೆ ಅದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳೇ ಆಗಿವೆ. ಈ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಲು ಕಾರಣ ಜನರಿಗೆ ಈ ಕುರಿತು ಅರಿವು ಇಲ್ಲದೆ ಇರುವುದು ಎಂದು ಅನೇಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಗಳ ಕುರಿತು ಪಾಲಿಸಬೇಕಾದ ಒಂದಷ್ಟು ಸಲಹೆಗಳು

1) ಯುವಜನರಲ್ಲಿ ಹೃದಯಾಘಾತ ಏಕೆ ಹೆಚ್ಚುತ್ತಿದೆ ?

ಇತ್ತೀಚಿನ ದಿನಮಾನದಲ್ಲಿ ಆಧುನಿಕ ಜೀವನಶೈಲಿಯಿಂದಾಗಿಯೇ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಅತಿಯಾದ ರಸಾಯನಿಕಗಳಿಂದ ಆದರೆ ಬೆಳೆದ ಹಣ್ಣು ತರಕಾರಿಗಳು, ಅತಿಯಾದ ಕೊಬ್ಬಿನ ಅಂಶದ ಆಹಾರ, ಬೇಡದೆ ಇರುವ ಸಮಯದಲ್ಲಿ ಆಹಾರ ಸೇವನೆ, ದೈಹಿಕ ಚಟುವಟಿಕೆಗಳಲ್ಲಿ ತೊಡಗದೆ ಇರುವುದು, ಮಧ್ಯಪಾನ ಧೂಮಪಾನ, ನಿದ್ರಾಹೀನತೆ, ಒತ್ತಡ, ಹೀಗೆ ಈ ಎಲ್ಲಾ ಅಂಶಗಳು ಮನುಷ್ಯನ ಆಯಸ್ಸನ್ನು ದಿನದಿಂದ ದಿನಕ್ಕೆ ಕುಂಠಿತ ಗೊಳಿಸುತ್ತಿವೆ.

2) ಹೃದಯಾಘಾತ ಸಂಭವಿಸಿದಾಗ ತಕ್ಷಣ ಏನು ಮಾಡಬೇಕು ?

ಹೃದಯಾಘಾತದ ಸಮಯದಲ್ಲಿ, ತಕ್ಷಣ ಸ್ಪಂದಿಸುವುದು ಮುಖ್ಯವೆನಿಸಿಕೊಳ್ಳುತ್ತದೆ. ಅದಕ್ಕಾಗಿ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು

A) ಆಸ್ಪಿರಿನ್ ನೀಡುವಿಕೆ : ಲಭ್ಯವಿದ್ದರೆ, ಹೃದಯಘಾತಕ್ಕೆ ಒಳಗಾದ ವ್ಯಕ್ತಿಗೆ ಅಗಿಯಲು ಪೂರ್ಣ-ಸಾಮರ್ಥ್ಯದ (325 ಮಿಗ್ರಾಂ) ಆಸ್ಪಿರಿನ್ ನ್ನು ನೀಡಬೇಕು, ಏಕೆಂದರೆ ಇದು ಹೃದಯದ ಅಪಧಮನಿಗಳಲ್ಲಿ ಹೆಪ್ಪುಗಟ್ಟುವಿಕೆಯನ್ನು ಸಂಭಾವ್ಯವಾಗಿ ಕಡಿಮೆ ಮಾಡುವ ಮೂಲಕ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ.

B) ಸಿಪಿಆರ್ ಅನ್ನು ನಿರ್ವಹಿಸಿ : ವ್ಯಕ್ತಿಯು ಉಸಿರಾಡದಿದ್ದರೆ, ತಕ್ಷಣ ನೀವು ಹೃದಯದ ಮೇಲೆ ಕೈಗಳನ್ನಿರಿಸಿ ಪುಶ್ ಮಾಡುವ ಮೂಲಕ ಅವರ ಹೃದಯ ಬಡಿತವನ್ನು ಹೆಚ್ಚಿಸುವಂತೆ ಮಾಡಿ, ಆ ಮೂಲಕ ಉಸಿರಾಟವನ್ನು ಹೆಚ್ಚಿಸಬಹುದು (ಸಿ ಪಿ ಆರ್ ತರಬೇತಿ ಪಡೆದಿದ್ದರೆ ಮಾತ್ರ ಈ ಪ್ರಯೋಗ ಮಾಡಬೇಕು) ವೃತ್ತಿಪರ ವೈದ್ಯರು ಬರುವವರೆಗೆ ಸಿಪಿಆರ್ ಮಾಡಬೇಕು.

C) ತುರ್ತು ಸೇವೆಗಳಿಗೆ ಕರೆ ಮಾಡಿ: ವೈದ್ಯಕೀಯ ಸಹಾಯಕ್ಕಾಗಿ ತಕ್ಷಣ ಅಂಬುಲೆನ್ಸ್ ಗೆ ಕರೆ ಮಾಡುವುದು ಮುಖ್ಯ.

3) ಹೃದಯಾಘಾತವಾಗದಂತೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?

A) ಸರಿಯಾದ ಜೀವನ ಶೈಲಿ ಪಾಲನೆ : ಪ್ರತಿನಿತ್ಯ ಬೇಗ ಮಲಗುವುದು, ಹಾಗೆಯೇ ಬೇಗನೆ ಏಳುವ ಅಭ್ಯಾಸ ಮಾಡಿಕೊಳ್ಳುವುದು. ಆದಷ್ಟು ಸರಿಯಾದ ಸಮಯದಲ್ಲಿ ಆಹಾರ ಸೇವಿಸುವುದು. ದೈಹಿಕ ವ್ಯಾಯಾಮಗಳನ್ನು ಮಾಡುವ ಮೂಲಕ ದೇಹವನ್ನು ದೃಢವಾಗಿ ಇಟ್ಟುಕೊಳ್ಳುವುದು.

B) ಹೆಚ್ಚು ಹಣ್ಣು-ತರಕಾರಿಗಳ ಸೇವನೆ ಮಾಡುವುದು : ಆದಷ್ಟು ಆಹಾರದಲ್ಲಿ ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದು ಹಾಗೆಯೇ ಎಲ್ಲಾ ರೀತಿಯ ಹಣ್ಣುಗಳನ್ನು ಸೇವಿಸುವುದು.

C) ಒತ್ತಡದಿಂದ ಹೊರಬರುವುದು : ಸಣ್ಣ ಸಣ್ಣ ವಿಚಾರಗಳಿಗೂ ತಲೆ ಕೆಡಿಸಿಕೊಳ್ಳದೆ, ಆದಷ್ಟು ಯೋಗ ಧ್ಯಾನದ ಕಡೆ ಗಮನಹರಿಸುವುದು. ಈ ರೀತಿ ಮಾಡುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು.

D) ನಿಯಮಿತ ತಪಾಸಣೆಗಳಿಗೆ ಒಳಗಾಗುವುದು : ಪ್ರತಿಯೊಬ್ಬ ವ್ಯಕ್ತಿಯು ಆರು ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆ ಮಾಡಿಸುವುದು ಅತಿ ಮುಖ್ಯ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಯಾರಿಗೆ ಯಾವ ಕಾಯಿಲೆ, ಯಾವಾಗ ಬರುತ್ತದೆ ಎಂದು ಹೇಳಲು ಬರುವುದಿಲ್ಲ. ಅದರಿಂದಾಗಿ ನಿಯಮಿತ ತಪಾಸಣೆಗೆ ಒಳಗಾಗುವುದು ಅತಿ ಮುಖ್ಯ.

ಹೃದಯಘಾತ ಸಂಭವಿಸಿದ ವ್ಯಕ್ತಿಗೆ ಒಂದು ಗಂಟೆಗಳ ಗೋಲ್ಡನ್ ಅವರ್ :

ಹೌದು ಯಾವುದೇ ವ್ಯಕ್ತಿಗೆ ಹೃದಯಘಾತವಾದ ಒಂದು ಗಂಟೆಯ ಒಳಗಾಗಿ ಸೂಕ್ತ ಚಿಕಿತ್ಸೆ ದೊರಕಿದರೆ ಖಂಡಿತ ಆ ವ್ಯಕ್ತಿ ಬದುಕು ಉಳಿಯುವ ಸಾಧ್ಯತೆ ಹೆಚ್ಚಿನದಾಗಿರುತ್ತದೆ. ಆ ಕಾರಣದಿಂದ ಹೃದಯಾಘಾತವಾದ ಒಂದು ಗಂಟೆಯ ಅವಧಿಯನ್ನು ಗೋಲ್ಡನ್ ಅವರ್ ಎಂದು ಕರೆಯಲಾಗಿದೆ.

ಇದನ್ನೂ ಓದಿ: Hyderabad: ಫಸ್ಟ್ ನೈಟ್’ಗಾಗಿ ರೂಮ್ ಒಳಗೆ ಹೋದ ಮಧುಮಗಳು ಸಾವು – ರಾತ್ರಿ ಬೆಳಗಾಗೋದ್ರೊಳಗೆ ನಡೆದಿದ್ದೇನು?

Leave A Reply

Your email address will not be published.