Kemaru Shree: ತ್ಯಾಗಮಯ ಜೀವನದಲ್ಲಿ ಆಧ್ಯಾತ್ಮಿಕ ಜಗತ್ತಿಗೆ ಜೈನ ಮುನಿಗಳ ಕೊಡುಗೆ ಅಪಾರ – ಕೇಮಾರು ಶ್ರೀ!

Dakshina Kannada news Contribution of Jain sages to the spiritual world in sacrificial life says Kemaru Shree

Kemaru Shree : ಜೈನ ಮಠ, ಜೈನ ಸಮಾಜದ ಮುನಿಗಳು ಕಠಿಣ ವ್ರತ ನಿಯಮಾವಳಿಗಳಿಗೆ, ತ್ಯಾಗಮಯ ಜೀವನಕ್ಕೆ ಕಟಿ ಬದ್ಧರಾಗಿರುವುದರ ಜೊತೆಗೆ ಧರ್ಮೋತ್ಥಾನಕರಾಗಿ, ಕಲಾ ಪ್ರೋತ್ಸಾಹಕರಾಗಿ ಕೂಡ ಆಧ್ಯಾತ್ಮಿಕ ಜಗತ್ತಿಗೆ ಅವರು ಬಹು ದೊಡ್ಡ ಕೊಡುಗೆ ನೀಡುತ್ತಿರುವುದನ್ನು ಯಾರೂ ಮರೆಯಲಾಗದು ಎಂದು ಮೂಡಬಿದ್ರಿ ಕೇಮಾರು ಮಠಾಧೀಶರಾದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿಯವರು(Kemaru Shree)ಹೇಳಿದರು.

ಅವರು ಮೂಡಬಿದ್ರಿಯ ಶ್ರೀ ಜೈನ ಮಠದ ಶ್ರೀ ಭಟ್ಟಾರಕ ಸಭಾಭವನದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆಗೆ ಪೂರ್ವಭಾವಿಯಾಗಿ ನಡೆದ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ, ಯಕ್ಷಗಾನ ಕಲಾವಿದರು ಭಗವದ್ಗೀತೆ ,ಪುರಾಣ ಕಥಾನಕಗಳನ್ನು ಸರಿಯಾಗಿ ಅಧ್ಯಯನ, ಅಭ್ಯಾಸ ಮಾಡಿ ಅಲ್ಲಿದ್ದದ್ದನ್ನು ಸರಿಯಾಗಿ ಶ್ರೋತೃಗಳ ತಲೆಗೆ ಹಾಕಬೇಕೇ ಹೊರತು ಅಲ್ಲಿ ನಮ್ಮ ತಲೆಯಲ್ಲಿದ್ದದ್ದನ್ನು ಜನರ ತಲೆಗೆ ಹಾಕುವಂತದ್ದು ಸರಿಯಲ್ಲ. ಅದು ಶಾಸ್ತ್ರ ಸಮ್ಮತವಾದ ಕಾರ್ಯವೂ ಅಲ್ಲ ಎಂದು ಕಲಾವಿದರುಗಳಿಗೆ ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ತಮ್ಮಆಶೀರ್ವಚನದಲ್ಲಿ ಸಮಾಜದಲ್ಲಿನ ಸಜ್ಜನರಿಂದ ಸಾತ್ವಿಕತೆಗೆ ಬೆಲೆ ಬರುತ್ತದೆ. ಎಲೆಮರೆಯ ಕಾಯಿಯಂತೆ ಇದ್ದು ಯಕ್ಷಗಾನಕ್ಕೆ ಅಪ್ರತಿಮ ಸೇವೆಗೈಯುತ್ತಿರುವ ಕಲಾವಿದರನ್ನು ಗುರುತಿಸಿ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಆ ಬದ್ಧತೆಯಿಂದ ತಮ್ಮ ಮಠವು ಕಲೆಗೆ ಪ್ರೋತ್ಸಾಹವನ್ನು ನಿರಂತರವಾಗಿ ನೀಡುತ್ತಾ ಬಂದಿದೆ. ಈ ಕಾರ್ಯದಲ್ಲಿ ಯಕ್ಷಗಾನ ಸಂಘಟನೆಗಳು ಶ್ರೋತೃಗಳು ಕೂಡ ಮಠದೊಂದಿಗೆ ಕೈ ಜೋಡಿಸಬೇಕೆಂದು ಸ್ವಾಮಿಗಳು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಯಕ್ಷಗಾನ ಸಂಘಟಕ, ಶಾಂತಾರಾಮ ಕುಡ್ವ, ಅಂತರ್ರಾಷ್ಟ್ರೀಯ ರೋಟರಿಯನ್ ಸಮಾಜಸೇವಾ ಧುರೀಣ ಲಾಲ್ ಗೋಯೆಲ್, ಸುಧಾಕರ ಶೆಟ್ಟಿ ಪೊಳಲಿ ಭಾಗವಹಿಸಿ ಶುಭ ಹಾರೈಸಿದರು. ಸಂಜಯನ್ ಕುಮಾರ್ ಸ್ವಾಗತಿಸಿ, ಧನಂಜಯ್ ವಂದಿಸಿದರು. ನಂತರ ಪೊಳಲಿ ಯಕ್ಷಗಾನ ಕಲಾ ಮಂಡಳಿಯ ಸದಸ್ಯರಿಂದ ಕೀರ್ತಿ ಶೇಷ ಬಲಿಪ ನಾರಾಯಣ ಭಾಗವತ ವಿರಚಿತ ಗರುಡ ಗರ್ವಭಂಗ ತಾಳಮದ್ದಳೆ ನೇರವೇರಿತು.

ಇದನ್ನೂ ಓದಿ: Property: ನಿಮ್ಮೂರು ಬಿಟ್ಟು, ಬೇರೆ ಬೇರೆ ಸ್ಥಳಗಳಲ್ಲಿ ಜಮೀನು, ಸೈಟ್ ಮಾಡಿದವರಿಗೆ ಬಂತು ಹೊಸ ರೂಲ್ಸ್ !! ಶುರುವಾಯ್ತು ಆತಂಕ !

Leave A Reply

Your email address will not be published.