Tippu Jayanti: ರಾಜ್ಯದಲ್ಲಿ ಮತ್ತೆ ‘ಟಿಪ್ಪು ಜಯಂತಿ’ ಆರಂಭ ?! ಭಾರೀ ಕುತೂಹಲ ಕೆರಳಿಸಿದ ಕಾಂಗ್ರೆಸ್ ನಡೆ ?!

Will Tipu Jayanti be restarted in the state

Tippu jayanti: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಸ್ತಿತ್ವಕ್ಕೆ ಬಂದ ಬಳಿಕ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಹಲವಾರು ಯೋಜನೆಗಳನ್ನು, ಕಾನೂನುಗಳನ್ನು ರದ್ದು ಮಾಡಿ ಮೂಲಕ ಬಿಜೆಪಿಗೆ ಬಾರಿ ದೊಡ್ಡ ಶಾಕ್ ನೀಡಿತ್ತು. ಆದರೀಗ ರಾಜ್ಯ ಸರ್ಕಾರವು ಬಿಜೆಪಿಯವರು ರದ್ಧು ಮಾಡಿದ್ದ ಟಿಪ್ಪು ಜಯಂತಿಯನ್ನು(Tippu jayanti) ಮತ್ತೆ ಶುರುಮಾಡುತ್ತಾರಾ ಎಂಬ ಪ್ರಶ್ನೆಗಳು, ಗೊಂದಲಗಳು ರಾಜ್ಯದಲ್ಲಿ ಸದ್ಧುಮಾಡುತ್ತಿವೆ.

ಸರ್ಕಾರಗಳು ಬದಲಾದಾಗ ಹಿಂದಿನ ಸರ್ಕಾರ ಜಾರಿಗೊಳಿಸಿರುವ ಯೋಜನೆಯನ್ನು ರದ್ಧು ಮಾಡೋದು, ರದ್ಧು ಮಾಡಿದ್ದನ್ನು ಪುನಹ ಜಾರಿಗೆ ತರುವಂತೆ ಮಾಡೋದು ಸಹಜ. ಅಂತೆಯೇ ರಾಜ್ಯದಲ್ಲಿಯೂ ನಡೆದಿದೆ. ಆದರೀಗ ಅಚ್ಚರಿ ಎಂಬಂತೆ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಜೊತೆ ಎಚ್ಚರಿಕೆ ಆಟವಾಡುವ ಕಾಂಗ್ರೆಸ್‌ ಈ ಬಾರಿ ರಾಜ್ಯದಲ್ಲಿ ಟಿಪ್ಪು ಸುಲ್ತಾನ್‌ ಜಯಂತಿಯನ್ನು ಆಚರಿಸಲು ಮುಂದಾಗುವುದಿಲ್ಲ ಎಂದು ತಿಳಿದು ಬಂದಿದೆ.

ಹೌದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿರುವ ಪಟ್ಟಿಯಲ್ಲಿ 33 ಜಯಂತಿಗಳನ್ನು ಉಲ್ಲೇಖಿಸಲಾಗಿದೆ ಆದರೆ ಟಿಪ್ಪು ಜಯಂತಿ ಪಟ್ಟಿಯಲ್ಲಿಲ್ಲ ಎಂದು ತಿಳಿದು ಬಂದಿದೆ. ಈ ಮೂಲಕ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸಲ್ಲ ಎಂದು ಭಾವಿಸಲಾಗುತ್ತಿದೆ. ಅಲ್ಲದೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಯಾವುದೇ ಸರ್ಕಾರಿ ಇಲಾಖೆಯು ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಬಿಜೆಪಿ ಸರ್ಕಾರ ಅದನ್ನು ನಿಲ್ಲಿಸಿತು. ಈ ಬಾರಿ ಯಾವುದೇ ಇಲಾಖೆ ಆಚರಿಸುವುದಿಲ್ಲ, ಆದರೆ ಜನರು ಎಲ್ಲಿ ಬೇಕಾದರೂ ಆಚರಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಅಂದಹಾಗೆ 2015ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಸರ್ಕಾರ ನವೆಂಬರ್‌ನಲ್ಲಿ ವಾರ್ಷಿಕ ಸರ್ಕಾರಿ ಕಾರ್ಯಕ್ರಮವಾಗಿ ‘ಹಜರತ್ ಟಿಪ್ಪು ಸುಲ್ತಾನ್ ಜಯಂತಿ’ಯನ್ನು ಆರಂಭಿಸಿತ್ತು. ಇದು ಸರ್ಕಾರ ಇರುವವರೆಗೂ ಪ್ರತಿ ಬಾರಿಯೂ ಅದು ನಡೆದಾಗ ಬಿಜೆಪಿ ಮತ್ತು ಅಂಗಸಂಸ್ಥೆಗಳಿಂದ ಪ್ರತಿಭಟನೆಯನ್ನು ಎದುರಿಸಿತ್ತು. ಜುಲೈ 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಟಿಪ್ಪು ಜಯಂತಿಯನ್ನು ರದ್ದುಗೊಳಿಸಲಾಯಿತು.

 

ಇದನ್ನು ಓದಿ: Gruha Lakshmi Scheme: ಇನ್ನೂ ಗೃಹಲಕ್ಷ್ಮೀ ಹಣ ಬರದ ‘ಯಜಮಾನಿ’ಯರಿಗೆ ಸಿಎಂ ಕೊಟ್ರು ಗುಡ್ ನ್ಯೂಸ್ – ಏನಂದ್ರು ಗೊತ್ತಾ ಸಿದ್ದು ?!

Leave A Reply

Your email address will not be published.